Advertisement

ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಮುನ್ನುಡಿಯಾದ ಸಂಘ

09:14 PM Feb 13, 2020 | Sriram |

ಮಂಗಳೂರು ತಾಲೂಕಿನ ಪ್ರಥಮ ಹಾಲು ಉತ್ಪಾದಕರ ಸಂಘವಾದ ಗಂಜಿಮಠ ಹಾಲು ಉತ್ಪಾದಕರ ಸಂಘವು ಆರಂಭ ಕಾಲದಿಂದಲೂ ಸ್ಥಳೀಯರ ಸೊÌàದ್ಯೋಗದ ಮೂಲಕ ಸ್ವಾವ ಲಂಬಿ ಬದುಕಿಗೆ ನಾಂದಿಯಾಗಿದೆ. ಸದಸ್ಯರ ಏಳಿಗೆಗೆ ಸಂಘವು ಶ್ರಮಪಡುತ್ತಿದೆ. ಸ್ಥಳೀಯವಾಗಿ ಹಾಲು ಉತ್ಪಾದಕರಿಗೆ ಒಳ್ಳೆಯ ದರ ಮತ್ತು ಮಾರುಕಟ್ಟೆಯನ್ನು ಈ ಸಂಘವೂ ನೀಡಿದೆ.

Advertisement

 ಕೈಕಂಬ: ಮಂಗಳೂರು ತಾಲೂಕಿನ ಪ್ರಥಮ ಹಾಲು ಉತ್ಪಾದಕರ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘವು ಆರಂಭಗೊಂಡು 62 ವರ್ಷಗಳು ಸಂದಿವೆ. 1958ರಲ್ಲಿ ಸ್ಥಾಪನೆಯಾದ ಈ ಸಂಘ ಗ್ರಾಮೀಣ ಜನರ ಬದುಕನ್ನು ಕಟ್ಟಿಕೊಂಡು ಸ್ವಾವಲಂಬನೆ, ಹಾಲಿಗೆ ಒಳ್ಳೆಯ ದರ, ಮಾರುಕಟ್ಟೆ ಉದ್ದೇಶದಿಂದ ಈ ಸಹಕಾರ ಸಂಘ ಆರಂಭಿಸಲಾಗಿತ್ತು.

1958ರ ಜ. 31ರಲ್ಲಿ ಮೊಗರು, ಬಡಗುಳಿಪಾಡಿ, ತೆಂಕುಳಿಪಾಡಿ, ಎಡ ಪದವು, ಪೆರಾರ ಗ್ರಾಮಗಳ ಹಾಲು ಉತ್ಪಾದಕರು ಒಟ್ಟು ಸೇರಿ ಈ ಸಹಕಾರ ಸಂಘವನ್ನು ಹುಟ್ಟು ಹಾಕಿದ್ದರು. ಪ್ರಥಮವಾಗಿ ಅಳಿಕೆ ಕ್ರಾಸ್‌ನ ಬಾಡಿಗೆ ಕಟ್ಟಡದಲ್ಲಿದ್ದ ಈ ಸಂಘ, ಅನಂತರ ಗಂಜಿಮಠ ದೇವಸ್ಥಾನದ ಎದುರಿನ ಕಟ್ಟಡದಲ್ಲಿ ಆರಂಭವಾಯಿತು. ಆಗ ಸುಮಾರು 100 ಮಂದಿ ಸದಸ್ಯರನ್ನೊಳಗೊಂಡಿತ್ತು. ದಿನಕ್ಕೆ ಬೆಳಗ್ಗೆ 300 ಮತ್ತು ಸಂಜೆ 200ಲೀ. ಒಟ್ಟು 500ಲೀ. ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಇದನ್ನು ಸದಸ್ಯರೇ ಹೊತ್ತು ಕೊಂಡು ಬರುತ್ತಿದ್ದರು. ಕೊಡಪಾನಗಳಲ್ಲಿ ತುಂಬಿಸಿ ಬಸ್‌ಗಳ ಟಾಪ್‌ನಲ್ಲಿ ಹಾಕಿ ಮಂಗಳೂರಿಗೆ ಕಳುಹಿಸಲಾಗುತ್ತಿತ್ತು. ಅಂದು ಹಾಲನ್ನು 9 ಕೊಂಡೆಗಳಲ್ಲಿ ಮಾಪನ ಮಾಡಲಾಗುತ್ತಿತ್ತು. 9 ಕೊಂಡೆಗೆ ಒಂದು ಕುತ್ತಿ ಎಂದು ಕರೆಯಲಾಗುತ್ತಿತ್ತು. ಮೊದಲಿಗೆ ಮಂಗಳೂರು ನಗರದ ಹೊಟೇಲ್‌ಗ‌ಳಿಗೆ ಹಾಗೂ ಪರಿಸರದ ಹೊಟೇಲ್‌ಗ‌ಳಿಗೆ ಹಾಲನ್ನು ಮಾರಲಾಗುತ್ತಿತ್ತು. ಆ ಸಮಯ ದಲ್ಲಿ ಖಾಸಗಿ ಮತ್ತು ಸೊಸೈಟಿಯ ನಡುವೆ ಸ್ಪರ್ಧೆ ಇತ್ತು.ಸಂಘದ ಆರಂಭದಲ್ಲಿ ಮಂಗಳೂರು ಡೈರಿಗೆ ಹಾಲನ್ನು ಹಾಕಲಾಗುತ್ತಿತ್ತು. 1988ರಲ್ಲಿ ಕೆಎಂಎಫ್‌ ಆರಂಭದ ಅನಂತರ ಪುತ್ತೂರು ಕೇಂದ್ರಕ್ಕೆ ಹಾಲನ್ನು ಕಳುಹಿಸಲಾಗುತ್ತಿದೆ. ಸಂಘದ ಪ್ರಾರಂಭದ ದಿನದಂದು 5 ಲೀ. ಹಾಲು ಸಂಗ್ರಹ ದೊಡ್ಡ ಸಾಧನೆ ಆಗಿತ್ತು. ದಿ| ರಾಮಕೃಷ್ಣ ರೈ ಸಂಘದ ಪ್ರಥಮ ಕಾರ್ಯದರ್ಶಿಯಾಗಿ ಸಂಘದ ಯಶಸ್ಸಿನ ಮುನ್ನಡೆಗೆ ಕಾರಣ ಆಗಿದ್ದರು.

850 ಲೀ. ಹಾಲು ಸಂಗ್ರಹ
ಪ್ರಸ್ತುತ 250 ಸದಸ್ಯರು ಹಾಲು ಹಾಕುತ್ತಿದ್ದು, 850 ಲೀ. ಹಾಲು ಸಂಗ್ರಹಣೆ ಯಾಗುತ್ತಿದೆ.

ತಾಲೂಕು ಉತ್ತಮ ಸಂಘ
1971ರಲ್ಲಿ ಉತ್ತಮ ಸಂಘ ಪ್ರಶಸ್ತಿ, 2009ರಲ್ಲಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ತಾಲೂಕು ಮಟ್ಟದ ಪ್ರಥಮ ಉತ್ತಮ ಹಾಲು ಉತ್ಪಾದಕ ಸಂಘದ ಪ್ರಶಸ್ತಿ, 2014-15ರಲ್ಲಿ ಉತ್ತಮ ಕಾರ್ಯನಿರ್ವಹಣೆ ಸಂಘದ ಪ್ರಶಸ್ತಿ.

Advertisement

ಅಧ್ಯಕ್ಷರು
ಕೆ.ಎಸ್‌.ಪದ್ಮಾನಾಭ ಆಚಾರ್ಯ, ಲೋರೆನ್ಸ್‌ ಕ್ರಾಸ್ತಾ, ಆ್ಯಂಟೋನಿ ಪಿಂಟೋ, ಗ್ರೆಗೋರಿ ಫೆರ್ನಾಂಡಿಸ್‌, ಕೃಷ್ಣ ನಾಯ್ಕ, ಎಂ. ಸೇಸ ರೈ,ತಿಮ್ಮಪ್ಪ ರೈ, ಚಾರ್ಲಿ ಡಿ’ಸೋಜಾ, ಫೆಲಿಕ್ಸ್‌ ಫೆರ್ನಾಂಡಿಸ್‌, ನಾರ್ಬರ್ಟ್‌ ಕ್ರಾಸ್ತಾ, ಎ. ನಾರಾಯಣ ಪೂಜಾರಿ, ಗಂಗಾಧರ ಅಮೀನ್‌, ಜಯಾನಂದ ನಾಯ್ಕ, ರುಕ್ಮಯ ನಾಯ್ಕ, ಸ್ಟಾನಿ ಕ್ರಾಸ್ತಾ, ಸುರೇಶ್‌ ಶೆಟ್ಟಿ .

ಕಾರ್ಯದರ್ಶಿಗಳು
ಸೇಸ ರೈ, ನಾರಾಯಣ ಭಟ್‌, ಬೆರ್ನಾರ್ಡ್‌ ಸಿಕ್ವೇರ, ಗೋಪಾಲ ರಾವ್‌, ಸುಬ್ರಮಣ್ಯ ಆಚಾರ್ಯ, ಪ್ರಕಾಶ್‌ ಎನ್‌. ಆಚಾರ್ಯ.

ಹಾಲು ಉತ್ಪಾದಕರ ಸಹ‌ಕಾರ ಸಂಘ ಸ್ಥಾಪನೆಯಿಂದಾಗಿ ಗಂಜಿಮಠ ಪರಿಸರದ 5 ಗ್ರಾಮಗಳಲ್ಲಿ ಕ್ಷೀರ ಕಾಂತ್ರಿಗೆ ಕಾರಣವಾಗಿತ್ತು . ದಿನಕ್ಕೆ 1ಸಾವಿರ ಲೀಟರ್‌ ತನಕ ಹಾಲು ಸಂಗ್ರಹವಾಗಿತ್ತು. ಈಗ ಸದಸ್ಯರಿಗೆ ಬೋನಸ್‌,ಶೇ. 25 ಡಿವಿಡೆಂಡ್‌ ನೀಡಲಾಗಿದೆ.
– ಸುರೇಶ್‌ ಶೆಟ್ಟಿ, ಅಧ್ಯಕ್ಷರುಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘ.

500 ದನಗಳು
ಗಂಜಿಮಠ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 500 ದನಗಳ ಹಾಲು ಬರುತ್ತಿದೆ. ಜರ್ಸಿ, ಎಚ್‌ಎಫ್‌ ಹಾಗೂ ದೇಶಿ ತಳಿಯ ದನಗಳಿವೆ. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಅವರ ಒಡೂxರು ಫಾಮ್ಸ್‌ìನಿಂದ 250ಲೀ. ಹಾಲು ದಿನಕ್ಕೆ ಸಂಘಕ್ಕೆ ಬರುತ್ತಿದೆ.

ಸುಬ್ರಾಯ ನಾಯಕ್‌,ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next