Advertisement

ಏಕನಿವೇಶನ: ಹೊಸ ಸುತ್ತೋಲೆ ರದ್ದಿಗೆ ಆಗ್ರಹ

01:21 PM May 06, 2022 | Team Udayavani |

ಕೈಕಂಬ: ಗಂಜಿಮಠ ಗ್ರಾ. ಪಂ. ವ್ಯಾಪ್ತಿಯ ಬಡಗುಳಿಪಾಡಿ, ತೆಂಕುಳಿಪಾಡಿ ಮತ್ತು ಮೊಗರು ಗ್ರಾಮಗಳ 2021-22ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷ ನೋಣಯ್ಯ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಗಂಜಿಮಠ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

Advertisement

ಹೊಸ ಸುತ್ತೋಲೆಯಂತೆ ಮುಡಾದಿಂದ ಏಕನಿವೇಶನ ಅನುಮೋದನೆ ಪಡೆ ಯುವ ಬಗ್ಗೆ ಗ್ರಾ.ಪಂ.ಗಳಿಗೆ ಆದೇಶ ಬಂದಿದೆ. ಈ ನಿಯಮದ ಮಾಹಿತಿ ಗ್ರಾಮಸ್ಥರಿಗಿಲ್ಲ. ಬಡವನಿಗೆ ಏಕನಿವೇಶನ ಅನುಮೋದನೆಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯೋಜನೆ ಪ್ರಾಧಿಕಾರದಲ್ಲಿನ ನಿಯಮದಂತೆ ಹಳ್ಳಿಗಳ ರಸ್ತೆಗಳು ಅಷ್ಟು ಅಗಲವಿರುವುದಿಲ್ಲ ಹಾಗೂ ಅದಕ್ಕೆ ಸರಿ ಹೊಂದುವುದಿಲ್ಲ. ಇದರಿಂದ ಈಗಾಗಲೇ ಸಮಸ್ಯೆಯಾಗಿದೆ. ಈಗಿನ ಹೊಸ ಸುತ್ತೋಲೆ ರದ್ದುಪಡಿಸಿ, ಹಿಂದೆ ಗ್ರಾ.ಪಂ.ನಲ್ಲಿಯೇ ಕೊಡುತ್ತಿದ್ದ ಏಕ ನಿವೇಶನ ಜತೆ 9/11 ಅದನ್ನು ಮುಂದುವರಿಸಿ ಎಂದು ಗಂಜಿಮಠ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಗರ, ಗ್ರಾಮಾಂತರ ಇಲಾಖೆಯಲ್ಲಿ ಒಬ್ಬರೇ ಅಧಿಕಾರಿ ಇರುವುದು ಜಿಲ್ಲೆಗೆ ಅವ ರೊಬ್ಬರೇ. ಇದರಿಂದ ಜನರಿಗೆ ಏಕನಿವೇಶನ ಅನುಮೋದನೆಗೆ ಕಾಯಬೇಕಾಗಿದೆ. ಗ್ರಾಮ ಮಟ್ಟದಲ್ಲಿಯೇ ಎಲ್ಲವೂ ಆಗಬೇಕು. ಅದರ ನಿಯಮವೂ ಒಂದೆಡೆ ಸಡಿಲಿ ಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಮೇಲ್ದರ್ಜೆಗೇರಿಸಲಾಗಿದೆ ಎಂದು ಮಾಹಿತಿಗಷ್ಟೇ ಸೀಮಿತವಾಗಿದೆ. ಇದರ ಅನುಷ್ಠಾನ ಮಾಡಬೇಕು. ಈ ಬಗ್ಗೆ ಗ್ರಾ.ಪಂ., ಪ್ರಾಥ ಮಿಕ ಆರೋಗ್ಯ ಕೇಂದ್ರದವರು ಕಾರ್ಯಪ್ರವರ್ತರಾಗಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಮಾಹಿತಿ ನೀಡಿದ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್‌ ರಾಜ್‌ ಕೋವಿಡ್‌ ಬಗ್ಗೆ ಜಾಗೃತಿ ಅಗತ್ಯ. 12ವರ್ಷಗಳ ಶಾಲಾ ಮಕ್ಕಳಿಗೆ ಈಗ ಲಸಿಕೆ ನೀಡಲಾಗುತ್ತದೆ. ಇನ್ನೂ ಕೂಡ 158 ಮಕ್ಕಳು ಬಾಕಿ ಇದ್ದಾರೆ. ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲರೂ ಸಹಕರಿಸಬೇಕು. ಬೂಸ್ಟರ್‌ ಡೋಸ್‌ ಎಲ್ಲರೂ ತೆಗೆದುಕೊಳ್ಳಬೇಕು ಎಂದರು.

Advertisement

ನಾಯಿಗಳಿಗೆ ಮಿದುಳು ಜ್ವರ

3 ತಿಂಗಳಿನಿಂದ 6 ತಿಂಗಳಿನ ನಾಯಿಗಳಿಗೆ ಜನವರಿಯಿಂದ ಮಿದುಳು ಜ್ವರ ಕಾಣಿಸಿದೆ. ಇದು ಮೇ ತಿಂಗಳ ತನಕ ಇದೆ. ಈ ಬಗ್ಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ಗಂಜಿಮಠದ ಪಶುವೈದ್ಯಾಧಿಕಾರಿ ಸಭೆಯಲ್ಲಿ ತಿಳಿಸಿದರು.

ಅಂಗನವಾಡಿ ಕೇಂದ್ರಕ್ಕೆ ನಿವೇಶನ ಅಗತ್ಯ

ಅಂಗನವಾಡಿ ಮಕ್ಕಳಿಗೆ ಮೇ 2ರಿಂದ 16ರ ವರೆಗೆ ಬೇಸಗೆ ರಜೆ ನೀಡಲಾಗಿದೆ. ಅವರಿಗೆ ನೀಡುವ ಆಹಾರವನ್ನು ಮನೆಗೆ ತಲುಪಿಲಾಗುತ್ತದೆ. ಗಂಜಿಮಠ ಗ್ರಾ.ಪಂ.ನಲ್ಲಿ 2 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಅದರಲ್ಲಿ ಬಡಗುಳಿಪಾಡಿಯ ಪೂವಾರ್‌ ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ನಿವೇಶನ ಕಾದಿರಿಸಲಾಗಿದೆ.ನರೇಗಾ ಅಥವಾ ಇಲಾಖೆಯ ಅನುದಾನದಿಂದ ಕಟ್ಟಡವನ್ನು ನಿರ್ಮಿಸಲಾಗುವುದು. ತೆಂಕುಳಿಪಾಡಿ ಮುಳ್ಳಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ನಿವೇಶನದ ಅಗತ್ಯ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಲಿನಿ ಹೇಳಿದರು.

ಮೇ 7ರಂದು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಗಂಜಿಮಠ ಗ್ರಾ. ಪಂ.ಸಭಾ ಭವನದಲ್ಲಿ ನಡೆಯಲಿದೆ. ಇದರಲ್ಲಿ 20 ಬಗೆ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ಇದರ ಪ್ರಯೋಜನ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ನೋಡಲ್‌ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಪೂರ್ಣಿಮಾ ಅವರು ಆಗಮಿಸಿದ್ದರು. ವಿವಿಧ ಇಲಾಖಾಧಿಕಾರಿಗಳು, ಗ್ರಾ. ಪಂ. ಉಪಾಧ್ಯಕ್ಷೆ ಕುಮುದಾ ನಾಯ್ಕ ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ಮಹಮದ್‌ ಶರೀಫ್‌ ಸಭೆಗಳ ವರದಿ ವಾಚಿಸಿದರು. ಸಭೆಯನ್ನು ಪಿಡಿಒ ಜಗದೀಶ್‌ ಎಸ್‌. ನಿರ್ವಹಿಸಿದರು.

ಮರದ ಗೆಲ್ಲುಗಳು ತೆರವುಗೊಳಿಸಿ

ಮಳಲಿಯಲ್ಲಿ ವಿದ್ಯುತ್‌ ತಂತಿಯ ಮೇಲೆ ಗೋಳಿಮರದ ಗೆಲ್ಲುಗಳು ಇದೆ. ಇದನ್ನು ಮಳೆ ಬರುವ ಮುಂಚೆ ತೆರವುಗೊಳಿಸಿ ಎಂದು ಮೆಸ್ಕಾಂ ಅಧಿಕಾರಿ ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಗದ್ದೆಗಳ ಮೇಲೆ ಇರುವ ಕೈಕಂಬ -ಬಿರಾವು ಮತ್ತು ನೂಯಿ-ಮಳಲಿ ಹೈಟೆನ್ಷನ್‌ ತಂತಿಯನ್ನು ರಸ್ತೆಯ ಬದಿಯಲ್ಲಿ ತನ್ನಿ ಈಗಾಗಲೇ ಹಲವಾರು ಬಾರಿ ಸಭೆಯಲ್ಲಿ ಮನವಿ ಮಾಡಲಾಗಿದೆ ಸ್ಪಂದನೆ ನೀಡಿಲ್ಲ ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಯವರಲ್ಲಿ ಮನವಿ ಮಾಡಿದರು.

ಖಾಯಂ ಪಿಡಿಒ, ಗ್ರಾಮ ಕರಣಿಕ ನೇಮಕಕ್ಕೆ ಆಗ್ರಹ

ಗಂಜಿಮಠ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು ಸುಮಾರು 20 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಖಾಯಂ ಪಿಡಿಒ ಮತ್ತು ಗ್ರಾಮ ಕರಣಿಕರು ಬೇಕು. ಇಲ್ಲಿನ ಪಿಡಿಒ ಕಂದಾವರ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಒಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಗ್ರಾ.ಪಂ. ಹಾಗೂ ಉಳಾಯಿಬೆಟ್ಟು ಗ್ರಾ.ಪಂ.ಗೆ ಓರ್ವರೇ ಗ್ರಾಮ ಕರಣಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಗ್ರಾಮಸ್ಥರಿಗೆ ಇದರಿಂದ ಭಾರಿ ತೊಂದರೆಯಾಗುತ್ತಿದೆ. ಖಾಯಂ ಪಿಡಿಒ, ಗ್ರಾಮ ಕರಣಿಕರು ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next