Advertisement

ವಿಡಿಯೋ: 200 ಕೋಟಿ ರೂ. ಬೆಲೆಯ ಎರಡು ಲಕ್ಷ ಕೆಜಿ ಗಾಂಜಾ ಸುಟ್ಟುಹಾಕಿದ ಆಂಧ್ರ ಪೊಲೀಸರು

01:06 PM Feb 13, 2022 | Team Udayavani |

ವಿಶಾಖಪಟ್ಟಣಂ: 200 ಕೋಟಿ ರೂ ಗೂ ಅಧಿಕ ಮೌಲ್ಯದ ಎರಡು ಲಕ್ಷ ಕೆಜಿ ಗಾಂಜಾವನ್ನು ನಾಶಪಡಿಸಿರುವುದಾಗಿ ಆಂಧ್ರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

Advertisement

ಕಳೆದೆರಡು ವರ್ಷಗಳಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಒಡಿಶಾದ 23 ಜಿಲ್ಲೆಗಳು ಮತ್ತು ವಿಶಾಖಪಟ್ಟಣಂ ಜಿಲ್ಲೆಯ 11 ಮಂಡಲಗಳಲ್ಲಿ ಅಕ್ರಮ ಮಾವೋವಾದಿಗಳು ಗಾಂಜಾ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಗೌತಮ್ ಸವಾಂಗ್ ಹೇಳಿದ್ದಾರೆ.

ಇದನ್ನೂ ಓದಿ:ಪ್ರೇಮಿಗಳ ದಿನ : ಕಿಸ್ ಕೊಡುವ ಮುನ್ನ ಕೋವಿಡ್ ಪರೀಕ್ಷೆಗೆ ಒತ್ತಾಯ!

‘ಪರಿವರ್ತನ್’ ಕಾರ್ಯಾಚರಣೆಯ ಭಾಗವಾಗಿ 406 ವಿಶೇಷ ಪೊಲೀಸ್ ತಂಡಗಳು 11 ಮಂಡಲಗಳ 313 ಗ್ರಾಮಗಳಲ್ಲಿ ಗಾಂಜಾ ತೋಟಗಳನ್ನು ನಾಶಪಡಿಸಿದವು. ಆಂಧ್ರ-ಒಡಿಶಾ ಗಡಿಯಲ್ಲಿ ವಿವಿಧ ರಾಜ್ಯಗಳ ಹಲವಾರು ಗುಂಪುಗಳು ಗಾಂಜಾ ಕೃಷಿ ಮತ್ತು ಮಾದಕ ದ್ರವ್ಯದ ಅಕ್ರಮ ಸಾಗಣೆಯಲ್ಲಿ ತೊಡಗಿವೆ ಎಂದು ಅವರು ಹೇಳಿದರು.

Advertisement

ಗಾಂಜಾ ಗಿಡ ಬೆಳೆಸಿದ್ದಕ್ಕಾಗಿ 1,500 ಜನರನ್ನು ಬಂಧಿಸಲಾಗಿದೆ ಮತ್ತು 577 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಗಾಂಜಾ ಸಾಗಾಟದಲ್ಲಿ ತೊಡಗಿದ್ದ 314 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next