ನವದೆಹಲಿ:ನಾಟಕೀಯ ಬೆಳವಣಿಗೆಯಲ್ಲಿ ಉತ್ತರಪ್ರದೇಶದ ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಮಹಾಕಾಲ್ ದೇವಸ್ಥಾನದಲ್ಲಿ ಬಂಧಿಸಿದ ಬಳಿಕ,” ನಾನೇ ವಿಕಾಸ್ ದುಬೆ ಕಣ್ರೊ…ಕಾನ್ಪುರ್ ವಾಲಾ” ಎಂದು ಕೂಗಿರುವುದಾಗಿ ವರದಿ ತಿಳಿಸಿದೆ.
ದೇವಸ್ಥಾನದಲ್ಲಿ ಸೆಕ್ಯೂರಿಟಿ ಗಾರ್ಡ್ಸ್ ವಿವರ ಕೇಳಲು ಮುಂದಾದ ಸಂದರ್ಭದಲ್ಲಿ ಹೊಯ್ ಕೈ ನಡೆದಿತ್ತು. ನಂತರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಸಿಸಿಟಿವಿ ಫೂಟೇಜ್ ನಲ್ಲಿ , ಪೊಲೀಸ್ ವ್ಯಾನ್ ಬಳಿ ದುಬೆ ಪೊಲೀಸರ ವಿರುದ್ಧ ಹರಿಹಾಯ್ದಿದ್ದ…ಅಲ್ಲದೇ ನಾನೇ ವಿಕಾಸ್ ದುಬೆ ಕಣ್ರೋ..ಕಾನ್ಪುರ್ ವಾಲಾ ಎಂದು ಕೂಗಿದಾಗ…ಪೊಲೀಸ್ ಶಬ್ದ ಹೊರ ಬರಬಾರದು ಎಂದು ತಲೆಗೆ ಹೊಡೆದಿರುವುದು ಸೆರೆಯಾಗಿದೆ ಎಂದು ವರದಿ
ವಿವರಿಸಿದೆ.
ಕಾನ್ಪುರದ ಚೌಬೇಪುರ್ ನ ಬಿಕ್ರು ಗ್ರಾಮದಲ್ಲಿನ ಮನೆಯಲ್ಲಿ ಅಡಗಿದ್ದ ವಿಕಾಸ್ ದುಬೆ ಮತ್ತು ಸಹಚರರನ್ನು ಸೆರೆಹಿಡಿಯಲು ಪೊಲೀಸರು ತೆರಳಿದ್ದ ವೇಳೆಯಲ್ಲಿ ಈ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ದುಬೆ ಮತ್ತು ತಂಡ ದಾಳಿ ನಡೆಸಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದರು.
ನಟೋರಿಯಸ್ ಗ್ಯಾಂಗ್ ಸ್ಟರ್ ಪರಾರಿ ನಂತರ ಮೂರು ರಾಜ್ಯಗಳಲ್ಲಿ ದುಬೆ ಬಂಧನಕ್ಕೆ ಜಾಲ ಬೀಸಲಾಗಿತ್ತು.ಅಲ್ಲದೇ ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಉತ್ತರಪ್ರದೇಶಸರ್ಕಾರ ತಿಳಿಸಿತ್ತು.
Related Articles
ದುಬೆ ಬಗ್ಗೆ ಮಾಹಿತಿ ಕೊಟ್ಟಿದ್ದು ಅಂಗಡಿ ಮಾಲೀಕ!
ಮಧ್ಯಪ್ರದೇಶದ ಉಜ್ಜೈನ್ ಮಹಾಕಾಲ್ ದೇವಸ್ಥಾನಕ್ಕೆ ತೆರಳುವ ಮುನ್ನ ಬಿಳಿ ಗೆರೆಯ ಶರ್ಟ್ ಧರಿಸಿದ್ದ ಕ್ರಿಮಿನಲ್ ವಿಕಾಸ್ ದುಬೆ ಅಂಗಡಿಯೊಂದಕ್ಕೆ ತೆರಳಿ ಪೂಜಾ ಸಾಮಗ್ರಿ ಖರೀದಿಸಿದ್ದ. ಈ ಸಂದರ್ಭದಲ್ಲಿ ಅಂಗಡಿ ಮಾಲೀಕ ಪತ್ರಿಕೆಯಲ್ಲಿನ ಫೋಟೋ ಮೊದಲೇ ಗಮನಿಸಿದ್ದರಿಂದ ಕೂಡಲೇ ಈತನ ಗುರುತು ಪತ್ತೆ ಹಚ್ಚಿಬಿಟ್ಟಿದ್ದ. ಅಷ್ಟೇ ಅಲ್ಲ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ಸ್ ಗೆ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.