Advertisement
ಥಾಣೆ, ಕಲ್ಯಾಣ, ಉಲ್ಲಾ ಸನಗರ, ಡೊಂಬಿವಿಲಿ ಮೊದಲಾದೆಡೆಗಳಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತನನ್ನು ಮಂಗಳವಾರ ರಾತ್ರಿ ಹೊಸದಿಲ್ಲಿಗೆ ಕರೆತರಲಾಗಿದೆ.
ಮುಂಬಯಿ ಹಾಗೂ ಥಾಣೆ ಪೊಲೀಸರು 2017, 2018ರಲಿ ಸುರೇಶ್ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರು. ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಅಕ್ಟೋಬರ್‌ನಲ್ಲಿ ಫಿಲಿಫೈನ್ಸ್‌ನಲ್ಲಿ ಬಂಧಿಸಲಾಗಿತ್ತು. ಈತ ಮೂಲತಃ ಕಾರ್ಕಳ ತಾಲೂಕಿನ ಹೆಬ್ರಿಯವನಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
Related Articles
Advertisement
ರವಿ ಪೂಜಾರಿಯ ಬಂಟ ಸುರೇಶ್ ಪೂಜಾರಿ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಜತೆ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿ. ಈತನ ವಿರುದ್ಧ ಮುಂಬ ಯಿಯಲ್ಲಿ 15, ಥಾಣೆಯಲ್ಲಿ 7 ಸೇರಿ ಮಹಾರಾಷ್ಟ್ರಾದ್ಯಂತ ಒಟ್ಟು 24 ಸುಲಿಗೆ ಪ್ರಕರಣ ಗಳಿವೆ. ಎನ್‌ಸಿಪಿ ನಾಯಕರ ಮೇಲೆ ಹಲ್ಲೆ, ವಕೀಲ ಮಜೀದ್ ಮೆಮನ್ ಮೇಲೆ ಹಲ್ಲೆ ಸೇರಿ ಅನೇಕ ಪ್ರಕರಣಗಳು ಕೂಡ ದಾಖಲಾಗಿವೆ. ಕರ್ನಾ ಟಕದಲ್ಲೂ ಈತನ ವಿರುದ್ಧ ಅನೇಕ ವಂಚನೆ ಪ್ರಕರಣಗಳು ಬಾಕಿಯಿವೆ.