Advertisement

ಸಿಧು ಮೂಸೆವಾಲ ಹತ್ಯೆ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್‌ ಸೇರಿ 25 ವಾಂಟೆಡ್‌ ಕ್ರಿಮಿನಲ್ಸ್‌!

12:07 AM May 03, 2023 | Team Udayavani |

ಟೊರೊಂಟೋ: ಪಂಜಾಬ್‌ನ ಖ್ಯಾತ ಗಾಯಕ-ರಾಜಕಾರಣಿ ಸಿಧು ಮೂಸೆವಾಲ ಹತ್ಯೆಯ ಪ್ರಮುಖ ಮಾಸ್ಟರ್‌ ಮೈಂಡ್‌ ಎನ್ನಲಾದ ಸತೀಂದರ್‌ ಸಿಂಗ್‌ ಬ್ರಾರ್‌ ಅಲಿಯಾಸ್‌ “ಗೋಲ್ಡಿ ಬ್ರಾರ್‌’ನನ್ನು ಕೆನಡಾ ಸರ್ಕಾರ ಮಂಗಳವಾರ ದೇಶದ ಪ್ರಮುಖ 25 ವಾಂಟೆಡ್‌ ಕ್ರಿಮಿನಲ್‌ ಗಳ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.

Advertisement

2022ರ ಜೂನ್‌ ನಲ್ಲೇ ಬ್ರಾರ್‌ ವಿರುದ್ಧ ಇಂಟರ್‌ ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿಯಾಗಿತ್ತು. ಈಗ ಕೆನಡಾ ಸರ್ಕಾರ ಈತನನ್ನು ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌ ಗಳ ಪಟ್ಟಿ ಸೇರಿಸಿದ ಬೆನ್ನಲ್ಲೇ, 25 ಕ್ರಿಮಿನಲ್‌ ಗಳ ಬೃಹತ್‌ ಕಟೌಟ್‌ ಗಳನ್ನು ಟೊರೊಂಟೋದಲ್ಲಿ ಅಳವಡಿಸಲಾಗಿದೆ.

ಬ್ರಾರ್‌ ವಿರುದ್ಧ ಕೊಲೆ, ಹತ್ಯೆ ಸಂಚು, ಭಾರತಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ ಪ್ರಕರಣದ ಕೇಸುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next