ಉತ್ತರಕಾಶಿ : ಭಾರಿ ಪ್ರಮಾಣದ ನಿರಂತರ ಮಳೆಯ ಕಾರಣದಿಂದಾಗಿ ಉತ್ತರಕಾಶಿ ಜಿಲ್ಲೆಯ ಸುನಾಗರ್ ಪ್ರದೇಶದ ಬಳಿ ಗುಡ್ಡ ಕುಸಿತ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಗುಡ್ಡ ಕುಸಿತದ ಕಾರಣದಿಂದಾಗಿ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಲ್ಲಿನ ಜಿಲ್ಲಾಡಳಿತ ಹೇಳಿದೆ.
ಇದನ್ನೂ ಓದಿ : 1000 ಸಾವಿರ ವರ್ಷದಲ್ಲೇ ಇದೇ ಮೊದಲ ಬಾರಿ ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿಹೋದ ಚೀನಾ!
ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ನಿನ್ನೆ (ಬುಧವಾರ, ಜುಲೈ 21) ತಡರಾತ್ರಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಸುಮಾರು 13 ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಪೋಕ್ಲೈನ್ ಯಂತ್ರದ ಕೊರತಯಿಂದಾಗಿ ಹೆದ್ದಾರಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಗಡಿ ರಸ್ತೆಗಳ ಸಂಸ್ತೆಗೆ ಸಾಧ್ಯವಾಗಿಲ್ಲ. ಗಡಿ ರಸ್ತೆಗಳ ಸಂಸ್ಥೆ ಸಂಚಾರಕ್ಕೆ ಮುಕ್ತವಾಗಿಸಲು ಆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ : ರಾಜ್ ಕುಂದ್ರಾ ಪ್ರಕರಣದಲ್ಲಿ “ಹಾಟ್ ಶಾಟ್ಸ್” ಹೆಸರು ಮುಂಚೂಣಿ: ಈ ಆ್ಯಪ್ ನ ಹಿನ್ನೆಲೆಯೇನು ?