Advertisement
ಸದ್ಯ ಕಡಲು ಪ್ರಕ್ಷುಬ್ಧಗೊಂಡಿದ್ದು, ಅಲೆಗಳ ಅಬ್ಬರವು ಜೋರಾಗಿದೆ. ಗಾಳಿಯ ರಭಸವು ತೀವ್ರವಾಗಿರುವುದರಿಂದ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕಿದ್ದಾರೆ. ಮಳೆಗಾಲದಲ್ಲಿ ಮೇಲಿರಿಸಿದ ಬೋಟುಗಳ ಪೈಕಿ ಕೆಲವನ್ನು ಮಾತ್ರ ಕಡಲಿಗಿಳಿಸಲಾಗಿದೆ.ಸಿದ್ಧತೆಯೇ ಆರಂಭವಾಗಿಲ್ಲ
ಬಂದರು ವಠಾರದ ಸ್ವತ್ಛತೆ ಸೇರಿದಂತೆ ಇನ್ನಿತರ ಕಾರ್ಯಗಳು ಇನ್ನೂ ನಡೆದಿಲ್ಲ. ಬಲೆಗಳ ನೇಯುವಿಕೆ, ಬೋಟುಗಳ ದುರಸ್ತಿ, ಬೋಟುಗಳಿಗೆ ಬಣ್ಣ ಬಳಿದು ಅಗತ್ಯ ಸಾಮಗ್ರಿಗಳನ್ನು ಸೇರಿಸುವ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಬೋಟುಗಳು ಮ್ಯಾಂಗನೀಸ್ ವಾರ್ಫ್‌ನಲ್ಲಿ ಲಂಗರು ಹಾಕಿವೆ. ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಅಂತ್ಯವಾದರೂ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕೆ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ.
ಯಾವ ಬೋಟುಗಳನ್ನು ಮೊದಲು ಕಡಲಿಗೆ ಇಳಿಸಬೇಕು ಎನ್ನುವ ಗೊಂದಲ ಬೋಟು ಮಾಲಕರೊಳಗೆ ಇದ್ದು, ಇದರಿಂದ ಇನ್ನೂ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಆರಂಭವಾಗಿಲ್ಲ. ಈ ಬಾರಿ ಲೈಟ್ ಫಿಶಿಂಗ್‌ಗೆ ಕೂಡ ನಿಷೇಧ ಇರುವುದರಿಂದ 370 ಅಥವಾ ಬುಲ್ ಟ್ರಾಲ್ ಇಳಿಸಬೇಕೋ ಎನ್ನುವ ಗೊಂದಲಗಳಿವೆ.
ಅವಧಿಗೆ ಮುನ್ನವೇ ಅಂತ್ಯ
ಕಳೆದ ಋತುವಿನಲ್ಲಿ ಮತ್ಸé ಕ್ಷಾಮ ಹಾಗೂ ವಾತಾವರಣದ ಬಿಸಿಯಿಂದಾಗಿ ಅವಧಿಗೆ ಮುನ್ನವೇ ಅಂದರೆ ಫೆಬ್ರವರಿಯಲ್ಲಿಯೇ ಮೀನುಗಾರಿಕೆ ಅಂತ್ಯವಾಗಿತ್ತು. ಕಳೆದ ಸಾಲಿನಲ್ಲಿ 33,115 ಮೆಟ್ರಿಕ್ ಟನ್ ಮೀನು ಸಂಗ್ರಹವಾಗಿದ್ದು, 37,458.5 ಲಕ್ಷ ರೂ. ಆದಾಯ ಬಂದಿದೆ. ಗಂಗೊಳ್ಳಿ ಬಂದರಿನಲ್ಲಿರುವ ಒಟ್ಟು ದೋಣಿಗಳು
ದೋಣಿಯ ವಿಧ ಸಂಖ್ಯೆ
ಟ್ರಾಲರ್ 338
ಪಸೀìನ್ 36
ಗಿಲ್‌ನೆಟ್ 1,945
ಯಾಂತ್ರೀಕೃತವಲ್ಲದ ದೋಣಿಗಳು 1,456
ಪಾತಿ 23
Related Articles
ಆ. 1ರಿಂದ ಬೋಟುಗಳು ಕಡಲಿಗೆ ಇಳಿಯಬಹುದು. ಆದರೆ ಈ ಬಾರಿ ಪ್ರತಿಕೂಲ ಹವಾಮಾನ ಇರುವುದರಿಂದ ವಿಳಂಬವಾಗುವ ಸಾಧ್ಯತೆಗಳಿವೆ. ಬಂದರಿನ ಕಟ್ಟಡದ ಶೀಟುಗಳ ದುರಸ್ತಿ, 2 ಕಟ್ಟಡಗಳಿಗೆ ವಿದ್ಯುತ್ ಪೂರೈಕೆ, ಸ್ಲಾéಬ್ ದುರಸ್ತಿ ತುರ್ತಾಗಿ ಆಗಬೇಕಾಗಿದ್ದು, ಅದಕ್ಕಾಗಿ ಈಗಾಗಲೇ ಇಲಾಖೆ ಹಾಗೂ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಅಂಜನಾದೇವಿ,
ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಮೀನುಗಾರಿಕಾ ಬಂದರು
Advertisement
ತಡವಾಗಿ ಆರಂಭ ಈ ಬಾರಿ ಒಂದು ವಾರ ತಡವಾಗಿ ಮೀನುಗಾರಿಕೆ ಆರಂಭ ನಿರೀಕ್ಷೆಯಿದೆ. ಗಂಗೊಳ್ಳಿ ಬಂದರು ಮಲ್ಪೆಯನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಸಾಮಾನ್ಯವಾಗಿ ಆ. 10 ರ ಅನಂತರವೇ ಅಧಿಕೃತವಾಗಿ ಆರಂಭವಾಗುತ್ತದೆ. ಬೋಟುಗಳನ್ನು ಮೊದಲು ಇಳಿಸಬೇಕು ಎನ್ನುವ ಗೊಂದಲವಿದೆ.
– ರಮೇಶ್ ಕುಂದರ್, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ – ಪ್ರಶಾಂತ್ ಪಾದೆ