Advertisement

ಗಂಗೊಳ್ಳಿ ಸರಸ್ವತಿ ವಿದ್ಯಾಲಯ: ಪ್ರಥಮ ಪಿಯುಸಿ ಆರಂಭೋತ್ಸವ

10:35 PM May 31, 2019 | Sriram |

ಗಂಗೊಳ್ಳಿ: ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ನಿರಂತರ ಪರಿಶ್ರಮದಿಂದ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಉತ್ತಮ ವಾದ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಯಶಸ್ಸು ಸಾಧ್ಯವಾಗುತ್ತದೆ. ಇದಕ್ಕೆ ನಮ್ಮ ನಡುವಿನ ಅನನ್ಯ ವ್ಯಕ್ತಿತ್ವದ ಪ್ರೇರಣೆಗಳನ್ನು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ಜಿ.ಎಸ್‌. ವಿ. ಎಸ್‌. ಅಸೋಸಿಯೇಶನ್‌ ಅಧ್ಯಕ್ಷ ಡಾ| ಕಾಶೀನಾಥ ಪೈ ಹೇಳಿದರು.

Advertisement

ಇಲ್ಲಿಯ ರೋಟರಿ ಸಭಾಂಗಣದಲ್ಲಿ ನಡೆದ ಇಲ್ಲಿನ ಸರಸ್ವತಿ ವಿದ್ಯಾಲಯ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಸರಸ್ವತಿ ವಿದ್ಯಾಲಯ ಕಾಲೇಜಿನ ಕಾರ್ಯದರ್ಶಿ ಎನ್‌. ಸದಾಶಿವ ನಾಯಕ್‌ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಶಿಸ್ತು ಪಾಲನೆ ನೀತಿ ನಿಯಮಗಳ ಬಗೆಗೆ ಮಾಹಿತಿ ನೀಡಿದರು.

ಭೌತಶಾಸ್ತ್ರ ಉಪನ್ಯಾಸಕ ಕೃಷ್ಣ ಗುಜ್ಜಾಡಿ ವಿದ್ಯಾಲಯ ಬಳಗವನ್ನು ಪರಿಚಯಿಸಿದರು.

Advertisement

ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ದೊರೆಯುವ ವಿವಿಧ ಸೌಲಭ್ಯ ಗಳ ಬಗೆಗೆ ಉಪನ್ಯಾಸಕ ನಾರಾಯಣ ಈ. ನಾಯ್ಕ ಮತ್ತು ಕಚೇರಿ ಮುಖ್ಯಸ್ಥ ಭಾಸ್ಕರ್‌ ಎಚ್. ಜಿ. ವಿವರಿಸಿದರು.

ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ ಪಡೆದ ಪ್ರಿಯಾ ಜಿ. ಪೈ.ಎಂ. ಮತ್ತು ಹತ್ತನೇ ಸ್ಥಾನ ಪಡೆದ ಎಮ್‌. ಅನಘ ಪೈ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು. ರಾಷ್ಟ್ರ ಮಟ್ಟದ ಕ್ರೀಡಾ ಸಾಧಕರನ್ನು ಪುರಸ್ಕರಿಸಲಾಯಿತು.

ಪ್ರಾಂಶುಪಾಲೆ ಕವಿತಾ ಎಮ್‌. ಸಿ. ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕ ರಾಘವೇಂದ್ರ ಭಟ್, ಪ್ರವೀಣ್‌ ಕಾಮತ್‌ ಮೊದಲಾದವರು ಉಪಸ್ಥಿತರಿದ್ದರು.

ಆಂಗ್ಲಭಾಷಾ ಉಪನ್ಯಾಸಕ ಥಾಮಸ್‌ ಪಿ. ಪ್ರಸ್ತಾವಿಸಿದರು. ಸಂಸ್ಕೃತ ಉಪನ್ಯಾಸಕ ವೆಂಕಟೇಶ ಮೂರ್ತಿ ಎನ್‌. ಸಿ. ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣ ಆರ್‌. ನಿರೂಪಿಸಿದರು. ಇತಿಹಾಸ ಉಪನ್ಯಾಸಕ ಭಾಸ್ಕರ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next