Advertisement

ಗಂಗೊಳ್ಳಿ: ಜೆಟ್ಟಿ ದುರಸ್ತಿಗೆ 1.98 ಕೋ.ರೂ.

02:27 AM Jun 13, 2019 | Team Udayavani |

ಕುಂದಾಪುರ: ಕಳೆದ ಅಕ್ಟೋಬರ್‌ನಲ್ಲಿ ಕುಸಿದುಬಿದ್ದ ಗಂಗೊಳ್ಳಿ ಬಂದರಿನ ಜೆಟ್ಟಿ ದುರಸ್ತಿಗೆ ಬುಧವಾರ ರಾಜ್ಯ ಸರಕಾರ 1.98 ಕೋ.ರೂ. ಮಂಜೂರು ಮಾಡಿದೆ.

Advertisement

ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಡಯಾಫಾರ್ಮ್ ಗೋಡೆ, ಜೆಟ್ಟಿ ಸ್ಲಾಬ್‌ ಕುಸಿದಿದ್ದು ಇದರಿಂದ ದಿನನಿತ್ಯ ಅಲ್ಲಿ ಕೆಲಸ ಮಾಡುವ ಮೀನುಗಾರರ ಜೀವಕ್ಕೆ ಅಪಾಯ ಇದೆ. 2001ರಲ್ಲಿ ಕೊಚ್ಚಿಯ ಮೆ. ಜಿಯೋ ಟೆಕ್‌ ಕನ್‌ಸ್ಟ್ರಕ್ಷನ್‌ ಕಂಪೆನಿ 403 ಮೀ. ದ‌ಕ್ಕೆ ಹಾಗೂ 2 ಹರಾಜು ಮಳಿಗೆಗಳನ್ನು ನಿರ್ಮಿಸಲು ಗುತ್ತಿಗೆ ಪಡೆದು 2007ರಲ್ಲಿ ಕಾಮಗಾರಿ ಪೂರೈಸಿತ್ತು. ಆದರೆ 2010ರಲ್ಲಿ ಇಲಾಖೆಯ ಮುಖ್ಯ ಎಂಜಿನಿಯರ್‌ ಭೇಟಿ ನೀಡಿದಾಗ ಕಾಮಗಾರಿಯಲ್ಲಿ ಲೋಪವಾಗಿ ಗೋಡೆಗೆ ಹಾನಿಯಾಗಿರು ವುದು ಕಂಡು ಬಂದಿತ್ತು. ಮೂಲ ಗುತ್ತಿಗೆದಾರರೇ ಇದನ್ನು ಅವರದ್ದೇ ಖರ್ಚಿನಲ್ಲಿ ಸರಿಪಡಿಸ ಬೇಕೆಂದೂ ಪತ್ರ ಬರೆಯಲಾಗಿತ್ತು. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜೆಟ್ಟಿ ಕುಸಿದೇ ಹೋಗಿತ್ತು. ಇದರ ದುರಸ್ತಿಗೆ 1.98 ಕೋ.ರೂ.ಗಳ ಅಂದಾಜುಪಟ್ಟಿ ತಯಾರಿಸಿ ಕಳುಹಿಸಿದ್ದು ಬುಧವಾರ ಮೀನುಗಾರಿಕೆ ನಿರ್ದೇಶನಾಲಯ ಆಡಳಿತಾತ್ಮಕ ಅನುಮೋದನೆ ನೀಡಿದೆ. ಜತೆಗೆ ಮೀನುಗಾರಿಕೆ ಬಂದರು, ಇಳಿದಾಣ ಸೌಕರ್ಯ, ಮೀನುಗಾರಿಕೆ ಬಂದರುಗಳ, ಇಳಿದಾಣ ಕೇಂದ್ರಗಳ ನವೀ ಕರಣಕ್ಕೆ 2019-20ನೇ ಸಾಲಿನ ಅನುದಾನದಲ್ಲಿ ನಿರ್ಮಿಸುವಂತೆ ಅನುಮತಿ ನೀಡಲಾಗಿದೆ.

ಜೆಟ್ಟಿಯ ಸ್ಲಾಬ್‌ ಕುಸಿತದಿಂದಾಗಿ ಮೀನುಗಾರಿಕೆ ಮುಗಿಸಿ ಬರುವ ಬೋಟು, ದೋಣಿಗಳಿಂದ ಮೀನು ಇಳಿಸಲು ಜಾಗದ ಅಭಾವವಾ ಗುತ್ತದೆ. ಅದರೊಂದಿಗೆ ಅಲ್ಲಿ ಚಟುವಟಿಕೆ ನಡೆಸಿದರೆ ಮತ್ತಷ್ಟು ಕುಸಿಯುವ ಸಂಭವವೂ ಇತ್ತು. ನೀತಿ ಸಂಹಿತೆಕಾರಣದಿಂದ ಅನುದಾನ ಮಂಜೂರಾತಿ ವಿಳಂಬವಾಗಿತ್ತು. ಈ ಕುರಿತು ಉದಯವಾಣಿ ಸತತ ವರದಿ ಮಾಡಿತ್ತು.

ಸರಕಾರಕ್ಕೆ ದುರಸ್ತಿಗೆ 1.98 ಕೋ.ರೂ. ಮಂಜೂರಾತಿಗೆ ಅಂದಾಜುಪಟ್ಟಿ ಕಳುಹಿಸಲಾಗಿತ್ತು. ಬೆಂಗಳೂರಿನಲ್ಲಿರುವ ಮೀನು ಗಾರಿಕೆ ನಿರ್ದೇಶನಾಲಯ ಈ ಪ್ರಸ್ತಾವನೆಗೆ ಬುಧವಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಬೆಂಗಳೂರಿನ ಸಿಐಸಿಇಎಫ್ ಸಂಸ್ಥೆಯ ತಾಂತ್ರಿಕ ಸಲಹೆಯಂತೆ ಕಾಮಗಾರಿ ನಿರ್ವಹಿಸಲು ಸೂಚಿಸಿದೆ.
– ಎಂ.ಎಲ್. ದೊಡ್ಮಣಿ, ಜಂಟಿ ನಿರ್ದೇಶಕ (ಪ್ರಭಾರ) ಮೀನುಗಾರಿಕಾ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next