ಕುಂದಾಪುರ: ಸಾಮಾಜಿಕ ಧುರೀಣ, ಗಂಗೊಳ್ಳಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿದ್ದ ಮೊಮಿನ್ ಮೊಹಮ್ಮದ್ ಗೌಸ್ ಸಾಹೇಬ್ (78) ಮಂಗಳವಾರ ನಿಧನರಾಗಿದ್ದಾರೆ.
ಮೊಮಿನ್ ಮೊಹಮ್ಮದ್ ಗೌಸ್ ಸಾಹೇಬ್ ಅವರು ಗಂಗೊಳ್ಳಿಯ ಪೋಸ್ಟ್ ಆಫೀಸ್ ಬಳಿಯ ನಿವಾಸಿಯಾಗಿದ್ದು, ಇಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಇವರು ಸುಮಾರು 10 ವರ್ಷಗಳಿಗೂ ಅಧಿಕ ಕಾಲ ಗಂಗೊಳ್ಳಿಯ ಮೋಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ, ಮಸೀದಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಕೊಡುಗೈ ದಾನಿಗಳಾಗಿದ್ದ ಇವರು ಗಂಗೊಳ್ಳಿಯ ಮುಸ್ಲಿಂ ಹೆಣ್ಣುಮಕ್ಕಳ ಮದರಸ ಜಾಮಿಯಾ ಫಾತಿಮಥುಝೋಹರ ಇಸ್ಲಾಹುಲ್ ಬನಾತ್ ಇದರ ಸಂಚಾಲಕ ಹಾಗೂ ಕಾರ್ಯದರ್ಶಿ ಹುದ್ದೆಯನ್ನೂ ಸಹ 15 ವರ್ಷಕ್ಕಿಂತ ಹೆಚ್ಚು ಕಾಲ ನಿರ್ವಹಿಸಿದ್ದರು. ಹಾಗೂ ಪ್ರಸ್ತುತ ಸಂಸ್ಥೆಯಲ್ಲಿ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸುತ್ತಿದ್ದರು.
ಮೃತರ ನಮಾಜ್ ಎ ಜನಾಝ ಇಂದು ರಾತ್ರಿ ಇಶಾ ನಮಾಜ್ ಬಳಿಕ ಮೋಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ನಡೆಯಲಿದ್ದು, ತದನಂತರ ಗಂಗೊಳ್ಳಿಯ ಕೇಂದ್ರ ಜುಮ್ಮಾ ಮಸೀದಿಯ ಕಬರಸ್ಥಾನದಲ್ಲಿ ಅಂತಿಮ ಕಾರ್ಯ ನಡೆಯಲಿದೆ ಎಂದು ಕಟುಂಬ ಮೂಲಗಳು ತಿಳಿಸಿವೆ.
ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಇಂದು ಗಂಗೊಳ್ಳಿಯ ಜಾಮಿಯಾ ಫಾತಿಮಥುಝೋಹರ ಸಂಸ್ಥೆಗೆ ರಜೆ ಸಾರಲಾಗಿದೆ.