Advertisement

ಗಂಗೊಳ್ಳಿ: ಮೀನುಗಾರರು ಸುರಕ್ಷಿತವಾಗಿ ಬರಲು ಸಾಮೂಹಿಕ ಪ್ರಾರ್ಥನೆ

01:30 AM Jan 17, 2019 | Team Udayavani |

ಗಂಗೊಳ್ಳಿ: ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳಿ ಮನೆಗೆ ಬರುವಂತೆ ಮತ್ತು ಶಬರಿಮಲೆ ಸಂಪ್ರದಾಯ ಉಳಿವಿಗಾಗಿ ಪುರಾಣ ಪ್ರಸಿದ್ಧ ಶ್ರೀ ವೀರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಯ್ಯಪ್ಪ ಜ್ಯೋತಿ ಬೆಳಗಿದರು.

Advertisement

ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಊರಿನ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಕಾರ್ಯಕ್ರಮ ಆಯೋಜಿಸಿದ್ದರು.

ಮೀನುಗಾರರು ಯಾವುದೇ ಅಪಾಯಕ್ಕೆ ಸಿಲುಕಿದರೂ ಅವರಿಗೆ ರಕ್ಷಣೆ ನೀಡಿ ಅವರನ್ನು ಕಾಪಾಡಬೇಕು. ಹಾಗೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಆದ ಅನಾಹುತಗಳಿಗೆ ಕಾರಣರಾದವರಿಗೆ ಶಿಕ್ಷೆ ನೀಡಿ ಇಂತಹ ಘಟನೆಗಳು ಮರುಕಳಿಸದಂತೆ ರಕ್ಷಣೆ ಮತ್ತು ಪಾವಿತ್ರÂ ಉಳಿಸಲು ರಕ್ಷೆ ನೀಡಬೇಕು ಎಂದು ಪ್ರಾರ್ಥಿಸಿದರು.

ತಾ. ಪಂ. ಸದಸ್ಯ ಸುರೇಂದ್ರ ಖಾರ್ವಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖ‌ ವಾಸುದೇವ ದೇವಾಡಿಗ, ರತ್ನಾಕರ ಗಾಣಿಗ, ನವೀನ ದೊಡ್ಡಹಿತ್ಲು, ರಾಘವೇಂದ್ರ ಗಾಣಿಗ, ಮೋಹನ ನಾಯ್ಕ ಗುಜ್ಜಾಡಿ, ಗಂಗೊಳ್ಳಿ ಗ್ರಾ. ಪಂ. ಸದಸ್ಯರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next