Advertisement
ನೆರೆ ಪರಿಹಾರದಲ್ಲಿ ಮಂಜೂರಾದ ಸುಮಾರು 1.08 ಕೋಟಿ ರೂ. ವೆಚ್ಚದಲ್ಲಿ ಮುಖ್ಯ ರಸ್ತೆಯ ಸುಮಾರು 700 ಮೀ. ಕಾಂಕ್ರೀಟಿಕರಣ ಕಾಮಗಾರಿ ನಡೆದಿದೆ. ಇದು ಗಂಗೊಳ್ಳಿ ಬಂದರಿಗೆ ತೆರಳುವ ಮುಖ್ಯ ರಸ್ತೆಯಾಗಿದ್ದು, ಮೀನು ಸಾಗಾಟದ ಲಾರಿಗಳು, ಸಾರಿಗೆ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋರಿûಾ ಸೇರಿದಂತೆ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಈಗ ಕಾಮಗಾರಿ ಪೂರ್ಣಗೊಂಡಿರುವುದರಿಂದ ಜನರಿಗೆ ಅನುಕೂಲವಾದಂತಾಗಿದೆ.
ಸೋಮವಾರದಿಂದ ಬಸ್ ಸಂಚಾರವು ಹಿಂದಿನಂತೆ ಎಸ್.ವಿ. ಹಿ.ಪ್ರಾ. ಶಾಲೆ ಯವರೆಗೆ ಆರಂಭಿಸಲಾಗಿದೆ. ರಸ್ತೆ ಕಾಮಗಾರಿಯಿಂದಾಗಿ ಕುಂದಾಪುರ, ತ್ರಾಸಿ ಕಡೆಯಿಂದ ಬರುವ ಬಸ್‌ಗಳು ಮೇಲ್‌ಗಂಗೊಳ್ಳಿಯ ಶ್ರೀ ರಾಮ ಮಂದಿರದವರೆಗೆ ಮಾತ್ರ ಸಂಚರಿ ಸುತ್ತಿತ್ತು. ಅಲ್ಲಿಂದ ಸುಮಾರು 2 ಕಿ.ಮೀ. ದೂರದವರೆಗೆ ಅನಿವಾರ್ಯವಾಗಿ ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗ ಬೇಕಾಗಿತ್ತು. ಈಗ ಬಸ್ ಸಂಚಾರವನ್ನು ಆರಂಭಿಸಿರುವುದರಿಂದ ವಿದ್ಯಾರ್ಥಿಗಳಿಗೆ, ಕುಂದಾಪುರಕ್ಕೆ ಹೋಗುವ ಜನರಿಗೆ ಅನುಕೂಲವಾಗಿದೆ. ಶೀಘ್ರ ಸಂಚಾರಕ್ಕೆ ಅನುವು
ಈಗಾಗಲೇ ಎರಡೂ ಬದಿಯ ಕಾಂಕ್ರೀಟೀಕರಣ ಕಾಮಗಾರಿ ಮುಗಿದಿದೆ. ಒಂದು ಕಡೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮತ್ತೂಂದು ಬದಿಯ ಕಾಂಕ್ರೀಟೀಕರಣ ಕಾಮಗಾರಿ ಮುಗಿಸಿ ಹೆಚ್ಚು ದಿನಗಳಾಗದ್ದ ರಿಂದ ಕ್ಯೂರಿಂಗ್‌ಗೆ ಸಮಯ ಬೇಕಾಗಿ ರುವುದರಿಂದ ಎ. 10ರೊಳಗೆ ಎರಡೂ ಕಡೆಗಳಿಂದಲೂ ಸಂಚಾರಕ್ಕೆ ಆನುವು ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.