Advertisement
ಮೂರು ನದಿಗಳು ಸೌಪರ್ಣಿಕಾ, ಹಾಲಾಡಿ ಹಾಗೂ ಚಕ್ರಾ ನದಿಗಳು ಹರಿಯುವುದು ಮಾತ್ರವಲ್ಲದೆ ಪಂಚ ನದಿಗಳು ಸಂಗಮವಾಗಿ ಅರಬಿ ಸಮುದ್ರ ಸೇರುವ ಪ್ರದೇಶವಾದ (ಪಂಚ ಗಂಗಾವಳಿ) ಗಂಗೊಳ್ಳಿಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆಯೇನು ಇಲ್ಲದಿದ್ದರೂ, ಮಾರ್ಚ್‌ನಿಂದ ಆರಂಭವಾಗಿ ಎಪ್ರಿಲ್, ಮೇ ವರೆಗೆ ಅಂದರೆ ಮಳೆಗಾಲ ಆರಂಭವಾಗುವವರೆಗೆ ಕೆಲವೆಡೆಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಂಭವವಿದೆ.
13,014 ಜನ ಸಂಖ್ಯೆಯಿರುವ ಗಂಗೊಳ್ಳಿ ಗ್ರಾಮದ ಬಂದರು ಪ್ರದೇಶ, ಮಲ್ಯರಮಠ, ದಾಕುಹಿತ್ಲು, ಲೈಟ್‌ಹೌಸ್, ಮ್ಯಾಂಗನೀಸ್ ವಾರ್ಫ್, ಖಾರ್ವಿಕೇರಿ, ಕಲೈಕಾರ್ ಪ್ರದೇಶಗಳು ಕೆಳಗಿನ ಭಾಗ ಆಗಿರುವುದರಿಂದ ಟ್ಯಾಂಕ್‌ನ ನೀರು ಪೂರೈಕೆ ಆಗುತ್ತಿದೆ. ಆದರೆ ಎತ್ತರದ ಪ್ರದೇಶವಾದ ಮೇಲ್ ಗಂಗೊಳ್ಳಿ, ಅಂಬೇಡ್ಕರ್ ಕಾಲನಿ, ಬಾವಿಕಟ್ಟೆ ಭಾಗಗಳಲ್ಲಿ ಮಾತ್ರ ಮಾರ್ಚ್‌ನಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳು ತ್ತಿದೆ. ಕಳೆದ ಬಾರಿಯೂ ಇದು ಪುನರಾವರ್ತನೆ ಯಾಗಿದೆ. ಬಾವಿಗೂ ಉಪ್ಪು ನೀರು ಪ್ರಭಾವ
ಗಂಗೊಳ್ಳಿಯ ಅನೇಕ ಮನೆಗಳಲ್ಲಿ ಸ್ವಂತದ ಬಳಕೆಗೆ ತೆರೆದ ಬಾವಿಯಿದ್ದರೂ ಅಲ್ಲಿ ನೀರಿನ ಮಟ್ಟ ಕೆಳಕ್ಕೆ ಹೋದಂತೆ ಉಪ್ಪು ನೀರಿನ ಸಮಸ್ಯೆ ಕಾಡುತ್ತಿದೆ. ಬೇಸಗೆಯಲ್ಲಂತೂ ಈ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತಿದೆ.
ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಇತ್ತೀಚೆಗಷ್ಟೇ ಚುನಾವಣೆ ನಡೆದಿದೆ. ಹೊಸ ಆಡಳಿತಕ್ಕೆ ಇಲ್ಲಿನ ನೀರಿನ ಸಮಸ್ಯೆಯೇ ದೊಡ್ಡ ಸವಾಲಾಗಿದೆ. ಕಳೆದ ಅವಧಿಯಲ್ಲಿ ಮೀಸಲಾತಿ ಸಮಸ್ಯೆಯಿಂದಾಗಿ ಎರಡೂವರೆ ವರ್ಷಗಳಿಂದ ಆಡಳಿತವೇ ಇದ್ದಿರಲಿಲ್ಲ. ಈಗ ಹೊಸ ಆಡಳಿತ ರಚನೆ ಯಾಗಿರುವುದರಿಂದ ಇಲ್ಲಿನ ಜನರು ನೀರಿನ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದಾರೆ.
Related Articles
ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಮೇಲ್ ಗಂಗೊಳ್ಳಿ ಭಾಗದಲ್ಲಿ 2 ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗುವುದು. ಹೊಸ ಪೈಪ್‌ಲೈನ್‌ಗೆ ಅನುದಾನ ಮೀಸಲಿರಿಸಲಾಗಿದೆ.
– ಮಾಧವ ಬಿ., ಕಾರ್ಯದರ್ಶಿ, ಗ್ರಾ.ಪಂ. ಗಂಗೊಳ್ಳಿ
Advertisement
ಪೂರೈಕೆಯೇ ಆದ್ಯತೆಸಮುದ್ರಕ್ಕೆ ಹೊಂದಿಕೊಂಡೇ ಇರುವ ಗ್ರಾಮವಾಗಿರುವು ದರಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಎಲ್ಲ ಕಡೆಗೆ ಕುಡಿಯುವ ನೀರು ಪೂರೈಸುವುದೇ ಪ್ರಮುಖ ಆದ್ಯತೆಯಾಗಿದೆ. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಿ, ನೀರಿನ ಸಮಸ್ಯೆ ಕಾಡದಂತೆ ಎಚ್ಚರಿಕೆ ಕೈಗೊಳ್ಳಲಾಗುವುದು.
– ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಗ್ರಾ.ಪಂ. – ಪ್ರಶಾಂತ್ ಪಾದೆ