Advertisement
ಆ ದಿನ ಇತರ ಮೀನುಗಾರರು ಬೋಟುಗಳಲ್ಲಿ ಹುಡುಕಾಡಿದ್ದರೂ ಸುಳಿವು ಸಿಕ್ಕಿರಲಿಲ್ಲ. ಕಳೆದ 9 ದಿನಗಳಿಂದಲೂ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಪೊಲೀಸರು, ಬೋಟ್‌ಗಳು, ಮನೆಯವರು, ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ತಂಡ ಸತತ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ.
ನಾರಾಯಣ ಕಾಣೆಯಾಗಿ 11 ದಿನಕಳೆದರೂ ಇನ್ನೂ ಪತ್ತೆಯಾಗಿಲ್ಲ. ಅವರ ಬರುವಿಕೆಗಾಗಿ ಕಾಯುತ್ತಿರುವ ಮನೆಯವರು ದಿನಾ ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು. ಹುಡುಕಾಟಕ್ಕೆ ಹೆಚ್ಚಿನ ಪ್ರಯತ್ನ ನಡೆಸಬೇಕು ಎಂದು ಮನೆಯವರು ಆಗ್ರಹಿಸಿದ್ದಾರೆ.