Advertisement

ಗಂಗೊಳ್ಳಿ : ಮೀನುಗಾರಿಕಾ ಬಂದರಿನ ಜೆಟ್ಟಿ ದುರಸ್ತಿ ಪುನರಾರಂಭ

01:20 AM Mar 14, 2022 | Team Udayavani |

ಗಂಗೊಳ್ಳಿ: ಗುತ್ತಿಗೆದಾರರಿಗೆ ಹಣ ಪಾವತಿಯಾದ ಕಾರಣ ಸ್ಥಗಿತ ಗೊಂಡಿದ್ದ ಸುಮಾರು 12 ಕೋ. ರೂ. ವೆಚ್ಚದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ಪುನರ್‌ ನಿರ್ಮಾಣ ಕಾಮಗಾರಿ ಮತ್ತೆ ಆರಂಭಗೊಂಡಿದೆ.

Advertisement

ಸ್ಥಗಿತ: ಕಳೆದ 2 ತಿಂಗಳಿನಿಂದ ಸ್ಥಗಿತಗೊಂಡಿದ್ದ ಜೆಟ್ಟಿಯ ಪುನರ್‌ ನಿರ್ಮಾಣ ಕಾಮಗಾರಿ ಮರು ಆರಂಭ ಗೊಂಡಿದ್ದು ಭರದಿಂದ ಸಾಗಿದೆ.

ಕಳೆದ ವರ್ಷ ಎಪ್ರಿಲ್‌ ತಿಂಗಳಿನಲ್ಲಿ ಜೆಟ್ಟಿ ಪುನರ್‌ ನಿರ್ಮಾಣ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರ ಕಂಪೆನಿ ಸುಮಾರು 100 ಮೀ. ಉದ್ದ ಕಾಮಗಾರಿ ನಿರ್ವಹಿಸಿ ಸ್ಥಗಿತಗೊಳಿಸಿತ್ತು. ಸರಕಾರ ಹಾಗೂ ಗುತ್ತಿಗೆದಾರರ ನಡುವಿನ ತಿಕ್ಕಾಟದಲ್ಲಿ ಹೈರಾಣಾಗಿದ್ದ ಇಲ್ಲಿನ ಮೀನುಗಾರರಲ್ಲಿ ಮತ್ತೂಮ್ಮೆ ಆತಂಕದ ಕಾರ್ಮೋಡ ಕವಿದಿತ್ತು.

ಇದೀಗ ಕಾಮಗಾರಿ ಪುನರಾರಂಭಗೊಂಡಿರುವುದು ಮೀನುಗಾರರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ.
ಬರೀ 150 ಮೀ.300 ಕ್ಕೂ ಅಧಿಕ ಪರ್ಸಿನ್‌ ಬೋಟ್‌ಗಳು, 600ಕ್ಕೂ ಮಿಕ್ಕಿ ಬೋಟ್‌ ಹಾಗೂ 500ಕ್ಕೂ ಅಧಿ ಕ ನಾಡದೋಣಿಗಳಿದ್ದು, ಸಾವಿರಾರು ಮೀನುಗಾರರು ಅವಲಂಭಿಸಿರುವ ಬಂದರು ಇದಾಗಿದೆ. ಆದರೆ ಸುಮಾರು 405 ಮೀ. ಉದ್ದದ ಮೀನುಗಾರಿಕಾ ಜೆಟ್ಟಿಯಲ್ಲಿ ಈಗ ಕೇವಲ 150 ಮೀ. ಮಾತ್ರ ಮೀನುಗಾರರ ಉಪಯೋಗಕ್ಕೆ ಸಿಗುತ್ತಿದೆ. ಇದರಿಂದ ಬೋಟ್‌, ದೋಣಿಗಳನ್ನು ನಿಲ್ಲಿಸಲು ನಿತ್ಯ ಸಮಸ್ಯೆಯಾಗುತ್ತಿದೆ.

ಚಾಲನೆ
2018ರ ಅ. 13 ರಂದು ಕುಸಿದು ಬಿದ್ದ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯು ಕಳೆದೆರಡು ವರ್ಷಗಳಿಂದ ಮೀನುಗಾರರ ಪ್ರಯೋಜನಕ್ಕೆ ಸಿಕ್ಕಿಲ್ಲ. ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲಾéಬ್‌ ಕುಸಿದು ಬರೋಬ್ಬರಿ ಎರಡು ವರ್ಷಗಳ ಬಳಿಕ ಜೆಟ್ಟಿ ಪುನರ್‌ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. 2021ರ ಫೆ.26ರಂದು ಜೆಟ್ಟಿ ಪುನರ್‌ ನಿರ್ಮಾಣ ಕಾಮಗಾರಿಗೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಚಾಲನೆ ನೀಡಿದ್ದರು.

Advertisement

ಮಂಜೂರು
ಜೆಟ್ಟಿಯ ಸಂಪೂರ್ಣ ಪುನರ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಸದ ಬಿ. ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಶಿಫಾರಸ್ಸಿನಂತೆ ಅಂದಿನ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಲ್ಲಿ 12 ಕೋ.ರೂ. ಮಂಜೂರಾತಿಗೆ 2020ರ ಫೆ. 16 ರಂದು ನಡೆದ ರಾಜ್ಯ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿತ್ತು.

ನಿಗದಿಯಂತೆ ನಡೆಯಲಿ
ಒಟ್ಟಿನಲ್ಲಿ ಗಂಗೊಳ್ಳಿ ಮೀನುಗಾರರ ಬಹುನಿರೀಕ್ಷಿತ ಜೆಟ್ಟಿ ಪುನರ್‌ ನಿರ್ಮಾಣ ಕಾಮಗಾರಿ ಪುನರಾರಂಭಗೊಂಡಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕಿದೆ. ಜೆಟ್ಟಿ ಕಾಮಗಾರಿ ಸ್ಥಗಿತಗೊಂಡಿರುವುದರ ಬಗ್ಗೆ “ಉದಯವಾಣಿ’ “ಸುದಿನ’ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next