Advertisement

ಗಂಗಾವತಿ: ಡಾ.ಬಿ. ಆರ್. ಅಂಬೇಡ್ಕರ್ ನೂತನ ಪುತ್ಥಳಿಗೆ ಸ್ವಾಗತ

07:40 PM Sep 18, 2022 | Team Udayavani |

ಗಂಗಾವತಿ :ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಅವರು ಭಾರತದ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಂವಿಧಾನವನ್ನು ರಚನೆ ಮಾಡಿ ಸಾಮಾಜಿಕವಾಗಿ ಅತ್ಯಂತ ಕೆಳಗಿರುವ ವರ್ಗಗಳನ್ನು ಮೇಲೆತ್ತುವ ಕಾರ್ಯವನ್ನು ಮಾಡಿದ್ದಾರೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ನಗರದ ಕೋರ್ಟ್ ಮುಂಭಾಗದಲ್ಲಿರುವ ಡಾ. ಬಿ. ಆರ್ .ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ಅಂಬೇಡ್ಕರ್ ಮೂರ್ತಿಯನ್ನು ಸ್ವಾಗತಿಸಿ ಮಾತನಾಡಿ, ಅಂಬೇಡ್ಕರ್ ಅವರು ವಿಶ್ವದ ಅತ್ಯಂತ ವಿದ್ವಾಂಸರಾಗಿ ಎಲ್ಲಾ ಪದವಿ ಗಳನ್ನ ಮುಗಿಸಿ ದಲಿತರು, ಶೋಷಿತರು ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ಕಳಕಳಿಯುಳ್ಳ ಮಹಾನ್ ನಾಯಕರಾಗಿದ್ದರು.ಸ್ವಾತಂತ್ರ್ಯಾನಂತರ ಭಾರತಕ್ಕೆ ಸ್ವಂತ ಸಂವಿಧಾನಕ್ಕಾಗಿ ದೇಶವಿದೇಶಗಳನ್ನು ಸುತ್ತಿ ಅತ್ಯುತ್ತಮ ವಿಶ್ವ ಶ್ರೇಷ್ಠ ಸಂವಿಧಾನ ರಚನೆ ಮಾಡಿದರು.ಅಂಬೇಡ್ಕರ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಹಲವು ದಶಕಗಳ ಕನಸನ್ನು ದಲಿತ ಮುಖಂಡರು ಸೇರಿದಂತೆ ಜನಪ್ರತಿನಿಧಿಗಳು ಸಾಕಾರಗೊಳಿಸಿದ್ದು ಮುಂಬರುವ ನವೆಂಬರ್ ತಿಂಗಳಲ್ಲಿ ಈ ಮೂರ್ತಿಯ ಲೋಕಾರ್ಪಣೆ ಕಾರ್ಯ ನೆರವೇರಲಿದೆ.ಮೂರ್ತಿ ಸ್ಥಾಪನೆಗಾಗಿ ಸಹಕಾರ ನೀಡಿದ ಜನಪ್ರತಿನಿಧಿಗಳು ಸಂಘ ಸಂಸ್ಥೆಯ ಮುಖಂಡರು ಮತ್ತು ಗಣ್ಯರನ್ನು ಈ ಸಮದಲ್ಲಿ ಸ್ಮರಿಸಲಾಗುತ್ತದೆ ಎಂದರು.

ಮಾಜಿ ಎಂಎಲ್ಸಿ ಎಚ್ ಆರ್ ಶ್ರೀನಾಥ್ ಮಾತನಾಡಿ, ನಗರದಲ್ಲಿ ಅಂಬೇಡ್ಕರ್ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದು ಇಡೀ ಗಂಗಾವತಿ ಕ್ಷೇತ್ರಕ್ಕೆ ಹೆಮ್ಮೆ ಪಡುವಂತಹ ವಿಷಯವಾಗಿದೆ .ಈ ನಿಟ್ಟಿನಲ್ಲಿ ಮುಂದಿನ ನವೆಂಬರ್ ನಲ್ಲಿ ಮೂರ್ತಿಯ ಲೋಕಾರ್ಪಣೆ ಕಾರ್ಯ ನೆರವೇರಲಿದ್ದು ಈ ಸಂದರ್ಭದಲ್ಲಿ ಮೂರ್ತಿಯನ್ನು ಪ್ರಸ್ತುತವಾಗಿರಲು ಸಿಸಿ ಕ್ಯಾಮೆರಾ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಿಜೆಪಿ ಮುಖಂಡ ಸಿದ್ಧರಾಮ ಸ್ವಾಮಿ ಹನುಮಂತರಾಯ’ ವೀರನಗೌಡ,ದಲಿತ ಮುಖಂಡರಾದ ಕುಂಟೋಜಿ ಮರಿಯಪ್ಪ ,ದೊಡ್ಡ ಬೋಜಪ್ಪ ,ಹುಲುಗಪ್ಪ ಮಾಗಿ ‘ಕೆ ಅಂಬಣ್ಣ ,ನ್ಯಾಯವಾದಿ ತಿಮ್ಮಣ್ಣ ಮುಂಡಾಸ್ತಾ’ ತಿಮ್ಮಣ್ಣ ಹಂಚಿನಾಳ ,ಹುಲುಗಪ್ಪ ಮಾಸ್ಟರ್ ,ದೇವಣ್ಣ ಸಂಗಾಪುರ ಹಾಗೂ ಶಿವಪ್ಪ ಮಾದಿಗ ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳ ಮತ್ತು ದಲಿತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next