Advertisement

ಬಿರುಗಾಳಿ ಮಳೆಗೆ ಕಿತ್ತು ಹೋದ ಅಂಗಡಿ ಶೆಡ್ ಗಳು :ನೀರಿನಲ್ಲಿ ಮುಳುಗಿದ ಅಪಾರ ಪ್ರಮಾಣದ ತರಕಾರಿ

07:17 PM May 08, 2022 | Team Udayavani |

ಗಂಗಾವತಿ : ರವಿವಾರ ಸಂಜೆ ಬೀಸಿದ ಮಳೆ ಗಾಳಿಯಿಂದಾಗಿ ನಗರದ ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ನಲ್ಲಿದ್ದ ತರಕಾರಿ ಸಂಗ್ರಹ ಮಾಡಿದ್ದ ತಗಡಿನ ಶೆಡ್ ಗಳು ಕಿತ್ತು ಹೋದ ಪರಿಣಾಮ ಅಪಾರ ಪ್ರಮಾಣದ ತರಕಾರಿ ಮಳೆ ನೀರಿನಲ್ಲಿ ಮುಳುಗಿದೆ .

Advertisement

10 ಕ್ಕೂ ಹೆಚ್ಚು ತರಕಾರಿ ಉಳಿದ ಅಂಗಡಿಗಳ ತಗಡು ಹಾಗೂ ತಟ್ಟೆಗಳು ಗಾಳಿಯಲ್ಲಿ ಕಿತ್ತು ಹೋಗಿವೆ.

ಕಳೆದ 1 ವಾರದಿಂದ ಹೆಚ್ಚು ಬಿಸಿಲಿನ ತಾಪವನ್ನು ಅನುಭವಿಸಿದ ಜನರು ರವಿವಾರ ಸಂಜೆ ಸುರಿದ ಮಳೆಯಿಂದ ನೆಮ್ಮದಿಯ ಉಸಿರು ಬಿಟ್ಟರು .ತಾಲ್ಲೂಕಿನಾದ್ಯಂತ ಭತ್ತದ ಕಟಾವು ಕಾರ್ಯ ಶೇ.80 ರಷ್ಟು ಮುಗಿದಿದ್ದು ಉಳಿದ ಭತ್ತದ ಗದ್ದೆ ಮೇಲೆ ರವಿವಾರ ಸಂಜೆ ಬೀಸಿದ ಗಾಳಿ ಮಳೆಯಿಂದಾಗಿ ಹಾನಿಯಾಗುವ ಸಂಭವವಿದೆ . ಗಾಳಿ ಮಳೆಯಿಂದಾಗಿ ನಗರದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ .

ಇದನ್ನೂ ಓದಿ : ಕೊರಟಗೆರೆ : ಖಾಸಗಿ ಬಸ್ ಚಾಲಕನ ಅವಾಂತರಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು

Advertisement

Udayavani is now on Telegram. Click here to join our channel and stay updated with the latest news.

Next