Advertisement

ನಗೆಸುತ್ತ ಮತದಾನದ ಜಾಗೃತಿಮೂಡಿಸಿದ ಗಂಗಾವತಿ ಪ್ರಾಣೇಶ

05:49 PM Apr 11, 2019 | pallavi |
ಕೊಪ್ಪಳ: ಮತದಾನ ಜಾಗೃತಿ ಮೂಡಿಸುವಲ್ಲಿ ಜಿಲ್ಲಾ ಐಕಾನ್‌ ಆಗಿ ಆಯ್ಕೆಯಾದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಅವರು ಹಾಸ್ಯದ ಮೂಲಕವೇ ಮತದಾನದ ಜಾಗೃತಿ ಮೂಡಿಸಿ ಎಲ್ಲರ ಗಮನ ಸೆಳೆದರು.
ಜಿಲ್ಲಾ ಸ್ವೀಪ್‌ ಸಮಿತಿ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಹಮ್ಮಿಕೊಂಡ ಬೃಹತ್‌ ಮತದಾನ ಜಾಗೃತಿ ಮಹಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮತದಾನ ಏಕೆ ಮಾಡಬೇಕು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಎಷ್ಟು ಮಹತ್ವವಿದೆ ? ಎಂಬ ವಿಷಯವನ್ನು ತಮ್ಮದೇ ಆದ ಉತ್ತರ ಕರ್ನಾಟಕ ಶೈಲಿಯ ಪಂಚಿಂಗ್‌ ಡೈಲಾಗ್‌ಗಳ ಮೂಲಕ ತಿಳಿಸಿ, ಜನರನ್ನು ನಕ್ಕು, ನಗಿಸಿದರು.
ಕಡ್ಡಾಯ ಮತದಾನ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ತಾಪಂ ಇಒ ವೆಂಕೋಬಪ್ಪ, ಡಾ| ಮೋಹನ್‌, ಬಿಇಒ ಉಮದೇವಿ ಸೊನ್ನದ, ತಾಪಂ ಯೋಜನಾಧಿಕಾರಿ ಶರಣಯ್ಯ ಸಸಿಮಠ, ಜಿಲ್ಲಾ ಸ್ವೀಪ್‌ ಸಂಯೋಜಕ ಶ್ರೀನಿವಾಸ್‌ ಚಿತ್ರಗಾರ, ಕಿನ್ನಾಳ ಪಿಡಿಒ ವಿರನಗೌಡ ಸೇರಿದಂತೆ ವಾಗೇಶ, ಮಹೇಶ ಸಜ್ಜನ್‌ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ವೋಟರ್‌ಗ್ರಾಂ ಫೋಟೋ ಸ್ಪಾಟ್‌ ಫ್ರೇಂನಲ್ಲಿ ಗಂಗಾವತಿ ಪ್ರಾಣೇಶ್‌ ಸೇರಿದಂತೆ ಹಲವು ಅಧಿಕಾರಿಗಳು, ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ವಿಶೇಷವಾಗಿತ್ತು.
Advertisement

Udayavani is now on Telegram. Click here to join our channel and stay updated with the latest news.

Next