Advertisement

ಕ್ಷೇತ್ರದ ಮತದಾರರು ನನ್ನ ಜೊತೆ ಇದ್ದಾರೆ, ಹೆದರುವ ಪ್ರಶ್ನೆಯೇ ಇಲ್ಲ: ಶಾಸಕ ಮುನವಳ್ಳಿ

07:22 PM Feb 08, 2023 | Team Udayavani |

ಗಂಗಾವತಿ: ನಿಷ್ಠಾವಂತ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರು ನನ್ನ ಬೆನ್ನ ಹಿಂದೆ ಇದ್ದಾರೆ. ದೇಶದಾದ್ಯಂತ ಬಿಜೆಪಿ ಪಕ್ಷಕ್ಕೆ ಓಟ್ ಬ್ಯಾಂಕ್ ಸೃಷ್ಠಿ ಮಾಡಿರುವ ವಿಶ್ವನಾಯಕ ಪ್ರಧಾನಮಂತ್ರಿ ಮೋದಿಯವರಿದ್ದಾರೆ. ಸಾವಿರಾರು ಕೋಟಿ.ರೂ.ಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದು ಮತದಾರರಿಂದ ಕೂಲಿ ಕೇಳಿ ನಾನೇ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಹೋಗುವೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಉದ್ದೇಶದಿಂದ ಇಲ್ಲಿ ಮನೆ ಮಾಡಿ ನೂತನ ಪ್ರಾದೇಶಿಕ ಪಕ್ಷ ಸ್ಥಾಪಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ಆದರೆ ಸ್ಥಳೀಯವಾಗಿ ಕಳೆದ 40 ವರ್ಷಗಳಿಂದ ಗಂಗಾವತಿ ಜನತೆಯ ಕಷ್ಟ ಸುಖಗಳಿಗೆ ತಾವು ನೆರವಾಗಿದ್ದು ನನ್ನ ಕಷ್ಟಸುಖಗಳಿಗೆ ಜನರು ಸಹ ಆಶ್ರಯವಾಗಿದ್ದಾರೆ. ಎಲ್ಲಿಂದಲೋ ಬಂದು ಕೋಟಿಗಟ್ಟಲೇ ಬಣ್ಣದ ಮಾತನಾಡುವವರಿಗೆ ಜನರ ಆಶೀರ್ವಾದ ಸಿಗಲು ಹೇಗೆ ಸಾಧ್ಯ. ವಿಶ್ವ ನಾಯಕ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ
ಅಮಿತ್ ಷಾ ಅವರು ಗಂಗಾವತಿ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಸಿದ್ದು ಇಲ್ಲಿರುವ ಐತಿಹಾಸಿಕ ಕಿಷ್ಕಿಂದಾ ಕ್ಷೇತ್ರವನ್ನು ವಿಶ್ವದ ಪವಿತ್ರ ಕ್ಷೇತ್ರಗಳಲ್ಲಿ ಗುರುತಿಸುವಂತೆ ಅಭಿವೃದ್ಧಿ ಪಡಿಸುವ ನೀಲನಕ್ಷೆ ಸಿದ್ಧವಾಗಿದೆ. ತಾವು ಶಾಸಕರಾದ ಎರಡು ಅವಧಿಯಲ್ಲಿ ಇಡೀ ಕ್ಷೇತ್ರ ಸಮಗ್ರ ಶಿಕ್ಷಣ, ಆರೋಗ್ಯ. ಕೃಷಿ, ರಸ್ತೆ ಸೇರಿ ಮೂಲಸೌಕರ್ಯಗಳಿಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದು ಇದಕ್ಕೆ ಪರಿಹಾರವಾಗಿ ಚುನಾವಣೆಯಲ್ಲಿ ತಮಗೆ ಮತ ನೀಡುವಂತೆ ಕೂಲಿ ಕೇಳಲಿದ್ದು ಎಲ್ಲಿಂದಲೋ ಬಂದು ಬಣ್ಣದ ಮಾತಾಡಿ ಕೋಟಿಗಟ್ಟಲೇ ಹಣ ನೀಡುವ ಭರವಸೆ ನೀಡುವವರನ್ನು ಜನರು ಹೇಗೆ ಸ್ವಾಗತ ಮಾಡಲು ಸಾಧ್ಯ. ತಾವು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನೆಪದಲ್ಲಿ ಕ್ಷೇತ್ರದ ಜನರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ನಾವೆಲ್ಲ ನಿಮ್ಮೊಂದಿಗಿದ್ದೇವೆ ಧೈರ್ಯದಿಂದ ಚುನಾವಣೆ ಎದುರಿಸುವಂತೆ ಅಭಯ ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಗಟ್ಟಿ ಮುಖಂಡರು ಕಾರ್ಯಕರ್ತರಿದ್ದು ಜೊಳ್ಳು ಗಾಳಿಗೆ ತೂರಿ ಹೋಗಿದೆ ಎಂದು ಹೇಳಿದರು.

ಪಕ್ಷ ನಿಷ್ಠೆ ಹೊಂದಿದ ಸಾವಿರಾರು ಕಾರ್ಯಕರ್ತರು ನನ್ನೊಂದಿಗಿದ್ದಾರೆ. ನಾನು ಯಾರನ್ನು ಟೀಕಿಸುವುದಿಲ್ಲ ಅವಾಚ್ಯಶಬ್ದಗಳ ಮೂಲಕ ಬೈಯುವುದಿಲ್ಲ. ಇದರಿಂದ ಪರಸ್ಪರ ಹೇಳಿಕೆ ಮತದಾರರಿಗೆ ತಲೆ ನೋವು ತರಿಸುತ್ತದೆ. ನಮ್ಮ ಕೆಲಸಗಳೇ ವಿರೋಧಿಗಳಿಗೆ ಉತ್ತರವಾಗಿರಬೇಕೆನ್ನುವ ಮನೋಭಾವ ನನ್ನದು. ವಿಶ್ವದ ಅತೀ ಹೆಚ್ಚು ಸದಸ್ಯತ್ವ ಕಾರ್ಯಕರ್ತರನ್ನು ಹೊಂದಿದ ದೇಶ ಭಕ್ತ ರಾಜಕೀಯ ಪಕ್ಷ ಬಿಜೆಪಿಯಾಗಿದ್ದು ಕಾಂಗ್ರೆಸ್, ಜೆಡಿಎಸ್ ಸೇರಿ ಯಾವ ಪ್ರಾದೇಶಿಕ ಪಕ್ಷದಿಂದಲೂ ಬಿಜೆಪಿಯನ್ನು ಮಣಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ಚಿಕ್ಕೋಡಿ: ಸಂಬಂಧಿಯನ್ನೇ ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Advertisement

Udayavani is now on Telegram. Click here to join our channel and stay updated with the latest news.

Next