Advertisement

ಗಂಗಾವತಿ ಪೊಲೀಸರ ಭರ್ಜರಿ ಬೇಟೆ : 6 ತಿಂಗಳಲ್ಲಿ 33 ಬೈಕ್ ಕದ್ದ ಆರೋಪಿಯ ಬಂಧನ

12:02 PM Apr 04, 2022 | Team Udayavani |

ಗಂಗಾವತಿ : ಗಂಗಾವತಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು 10.20 ಲಕ್ಷ ರೂ ಮೌಲ್ಯದ 33 ಮೊಟರ್ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಗಂಗಾವತಿ ನಗರದಲ್ಲಿ ಕಳೆದ 6 ತಿಂಗಳಿಂದ ಕಳ್ಳತನವಾಗಿದ್ದ ಬೈಕ್ ಗಳ ಪೈಕಿ 33 ಬೈಕುಗಳ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಣವಾಳ ಗ್ರಾಮದ ಶರಣಬಸವ (24) ಎನ್ನುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಈತನಿಂದ ಬೇರೆ ಬೇರೆ ಊರುಗಳಲ್ಲಿ ಮಾರಾಟ ಮಾಡಿದ್ದ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಶ್ಲಾಘನೆ: ಗಂಗಾವತಿ ನಗರ ಸೇರಿದಂತೆ ವಿವಿಧೆಡೆ ಕಳ್ಳತನವಾಗಿದ್ದ ಬೈಕ್ ಗಳನ್ನು ಗಂಗಾವತಿ ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಟಿ.ವೆಂಕಟಸ್ವಾಮಿ ಹಾಗೂ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ವರ್ಗದವರು ಪರಿಶ್ರಮಪಟ್ಟು ಕಳ್ಳತನವಾಗಿದ್ದ ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಶ್ಲಾಘನೀಯ ಕಾರ್ಯ ಮಾಡಿದ್ದಾರೆ .

ಪೊಲೀಸರ ಕಾರ್ಯವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆಂದು ಡಿ.ವೈ.ಎಸ್. ಪಿ. ರುದ್ರೇಶ್ ಉಜ್ಜನಕೊಪ್ಪ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಯುವಕನ ಅಂತ್ಯಕ್ರೀಯೆಗೆ ಬರುತ್ತಿದ್ದ ವೇಳೆ ಅಪಘಾತ: ಓರ್ವ ಸಾವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next