Advertisement

ಗಂಗಾವತಿ : ದಶಕಗಳಿಂದ ನೆನಗುದಿಗೆ ಬಿದ್ದದ್ದ ಗುಂಡಮ್ಮನಕ್ಯಾಂಪ್ ಮಳಿಗೆಗಳ ಹರಾಜು

07:06 PM Jan 19, 2022 | Team Udayavani |

ಗಂಗಾವತಿ : ದಶಕಗಳ ಹಿಂದೆ ನಿರ್ಮಿಸಿ ನೆನಗುದಿಗೆ ಬಿದ್ದಿದ್ದ ಗುಂಡಮ್ಮನ ಕ್ಯಾಂಪ್ ನೂತನ ಮಾರ್ಕೆಟ್‌ನ 41 ವಾಣಿಜ್ಯ ಮಳಿಗೆಗಳ ಪೈಕಿ 25 ಮಳಿಗೆಗಳ ಹರಾಜು ಮಾಡಿ ವ್ಯವಹಾರ ಮಾಡಲು ನಿಗದಿತ ಠೇವಣಿ ಹಾಗೂ ಬಾಡಿಗೆ ನಿಗದಿಯೊಂದಿಗೆ ವರ್ತಕರಿಗೆ ವಿತರಿಸಲಾಯಿತು.

Advertisement

ಹರಾಜು ಪ್ರಕ್ರಿಯೆಗೂ ಮುಂಚೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ, ಕೆಲ ಕಾರಣಕ್ಕಾಗಿ ಕೋಟ್ಯಾಂತರ ರೂ.ಖರ್ಚಿನಲ್ಲಿ ನಿರ್ಮಿಸಿದ ಗುಂಡಮ್ಮ ಕ್ಯಾಂಪ್ ನೂತನ ಮಾರ್ಕೆಟ್ ಹಾಗೂ 41ವ ಮಳಿಗೆಗಳನ್ನು ಮುಚ್ಚಲಾಗಿತ್ತು. ಆಡಳಿತ ಮಂಡಳಿ ಹಾಗೂ ಎಲ್ಲಾ ಸದಸ್ಯರ ಶಾಸಕ ಆಸಕ್ತಿಯಿಂದ ನೂತನ ಮಾರ್ಕೆಟ್‌ಗೆ ನಗರದ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ಮಾಡುತ್ತಿದ್ದಾರೆ.ಇದೇ ಮಾರ್ಕೆಟ್‌ಗೆ ಹೊಂದಿ ಕೊಂಡಿರುವ 41 ಮಳಿಗೆಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸರಕಾರದ ಮೀಸಲಾತಿ ಅನ್ವಯ ಹರಾಜು ಮಾಡಲಾಗಿದೆ.

ಸದ್ಯ 25 ಮಳಿಗೆಗಳಿಗೆ 7.5 ಲಕ್ಷ ಠೇವಣಿಗೆ ಬಂದಿದೆ. ಪ್ರತಿ ಮಳಿಗೆಗೆ 2100-6700 ರೂ. ವರೆಗೆ ಬಾಡಿಗೆ ನಿಗದಿ ಮಾಡಲಾಗಿದೆ. ಉಳಿದ ಮಳಿಗೆಗಳನ್ನು ಶೀಘ್ರವೇ ಹರಾಜು ಮಾಡಲಾಗುತ್ತದೆ. ನಗರದಲ್ಲಿರುವ ಬಾಡಿಗೆ ಅವಧಿ ಮುಗಿದ ನಗರಸಭೆಯ ಮಳಿಗೆಗಳನ್ನು ಆಶಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹೊಸದಾಗಿ ಹರಾಜು ನಡೆಸಲಾಗುತ್ತದೆ. ನಗರದಲ್ಲಿ ಸ್ಚಚ್ಛತೆ ಕಾಪಾಡಲು ವ್ಯಾಪಾರಿಗಳು ಜನರು ಪ್ರತಿನಿಧಿಗಳು ಕಾಳಜಿ ವಹಿಸಬೇಕು. ಮಾಂಸದ ನೂತನ ಮಾರ್ಕೆಟ್ ಗೆ ಎಲ್ಲಾ ಮಾಂಸ ಮಾರಾಟಗಾರರನ್ನು ಸ್ಥಳಾಂತರ ಮಾಡಲು ಸೂಚನೆ ಇದ್ದು ಶೀಘ್ರ ಅನುಷ್ಠಾನ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗದ್ವಾಲ್ ಕಾಶಿಂಸಾಬ, ಉಮೇಶ ಸಿಮಗನಾಳ, ಸಂತೋಷ ದಂಡಿನ್, ಸಲ್ಮಾನ್ ಬಿಚ್ಚಗತ್ತಿ, ಮೌಲಸಾಬ, ಅಜಯ್ ಬಿಚ್ಚಾಲಿ ಸೇರಿ ನಗರಸಭೆಯ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next