Advertisement

ನಿಯಮ ಉಲ್ಲಂಘಿಸಿ ಪದವಿ ಪ್ರಾಧ್ಯಾಪಕರ ಆಯ್ಕೆ ಪಟ್ಟಿ ಪ್ರಕಟ ಖಂಡನೀಯ

06:50 PM Feb 02, 2023 | Team Udayavani |

ಗಂಗಾವತಿ: ರಾಜ್ಯದ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಮುಗಿದು ಆಯ್ಕೆ ಪಟ್ಟಿ ಪ್ರಕಟವಾಗಿದ್ದು ಅಸಂವಿಧಾನವಾಗಿದೆ. ಕಲಂ 371(ಜೆ) ಸಚಿವ ಸಂಪುಟದ ಉಪಸಮಿತಿಯ ಶಿಫಾರಸ್ಸುಗಳನ್ನು ಗಾಳಿ ತೂರಿ ಆಯ್ಕೆ ಪಟ್ಟಿ ಪ್ರಕಟಿಸಿರುವುದು ಖಂಡನೀಯವಾಗಿದೆ. ಆಯ್ಕೆ ಪಟ್ಟಿಯನ್ನು ಕೂಡಲೇ ರದ್ದು ಮಾಡಿ ಉಪಸಮಿತಿ ನಿಯಮಗಳಂತೆ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಕಲಂ 371(ಜೆ) ಹೋರಾಟ ಸಮಿತಿಯ ಸಂಚಾಲಕರಾದ ಧನರಾಜ ಈ. ರವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Advertisement

ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಮೆರಿಟ್ ಹೊಂದಿದ್ದರೆ, ಆತನನ್ನು ಸಾಮಾನ್ಯ ಅಭ್ಯರ್ಥಿಯ ಕೋಟಾದಡಿ ಆಯ್ಕೆ ಮಾಡಬೇಕೆನ್ನುವುದು ಸಂವಿಧಾನಾತ್ಮಕ ನಿಯಮವಾಗಿದ್ದರೂ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದಂತೆ ಕಳೆದೊಂದು ದಶಕದಿಂದ ಈ ನಿಯಮಕ್ಕೆ ವಿರುದ್ಧವಾಗಿ ಸ್ಥಳೀಯ ವೃಂದವನ್ನು ಮಾತ್ರ ಪರಿಗಣಿಸುವ ಮೂಲಕ ಸಾಕಷ್ಟು ಅನ್ಯಾಯ ಮಾಡಲಾಗಿತ್ತು. ಈ ಗೊಂದಲದ ವಿರುದ್ಧ ನಮ್ಮ ಕಾನೂನಾತ್ಮಕ ಹೋರಾಟಗಳು ಹಾಗೂ ನ್ಯಾಯಾಂಗದ ಆದೇಶಗಳ ಪ್ರತಿಫಲವೆಂಬಂತೆ ಸಚಿವ ಬಿ.ಶ್ರೀರಾಮುಲುರವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿಯು ಬೆಳಗಾವಿಯಲ್ಲಿ “ಹುದ್ದೆಗಳ ಆಯ್ಕೆಗೆ ಸಂಬAಧಿಸಿದಂತೆ ಮೊದಲಿಗೆ ಮಿಕ್ಕುಳಿದ ವೃಂದ ಅಥವಾ ನಾನ್ ಕಲ್ಯಾಣ ಕರ್ನಾಟಕ ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಿ ನಂತರ ಇನ್ನುಳಿದ ಅಥವಾ ಸ್ಥಳೀಯ ವೃಂದದ ಹುದ್ದೆಗಳಿಗೆ ಪರಿಗಣಿಸುವ” ನಿರ್ಣಯವನ್ನು ಕೈಗೊಂಡಿದೆ. 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಅತಿ ಹೆಚ್ಚು ಮೆರಿಟ್ ಹೊಂದಿದ ಅಭ್ಯರ್ಥಿಗಳನ್ನು ಮಿಕ್ಕುಳಿದ ವೃಂದಕ್ಕೆ ಪರಿಗಣಿಸದೇ ಕೇವಲ ಸ್ಥಳೀಯ ವೃಂದದಲ್ಲಿ ಆಯ್ಕೆ ಮಾಡಿದ್ದು, ಕಲಂ 371(ಜೆ) ನಿಯಮಗಳಿಗೆ ವಿರುದ್ಧವಾಗಿದೆ. ಸಚಿವ ಸಂಪುಟದ ಉಪಸಮಿತಿ ನಿರ್ಣಯದ ಸುತ್ತೋಲೆ ಅಥವಾ ಆದೇಶ ಹೊರಡಿಸದೇ ಇರುವುದು ಇದಕ್ಕೆ ಕಾರಣ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ದೊರೆತಿದ್ದು, ಈ ಬೇಜವಾಬ್ದಾರಿತನದ ಹೊಣೆಯನ್ನು ಸಂಪುಟ ಉಪಸಮಿತಿ ಮತ್ತು ಅಧ್ಯಕ್ಷರು ವಹಿಸಬೇಕಿದ್ದು, ಕೂಡಲೇ ಮಧ್ಯಸ್ಥಿಕೆವಹಿಸಿ ಸರಿಪಡಿಸಲೇಬೇಕು. ಇಲ್ಲದಿದ್ದ ಪಕ್ಷದಲ್ಲಿ ತಾವು ಕಾನೂನಾತ್ಮಕ ಹೋರಾಟ ನಡೆಸಲಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 371 (ಜೆ) ಕುರಿತ ಬದ್ಧತೆ ಹೊಂದಿದವರನ್ನು ಆಯ್ಕೆ ಮಾಡುವತ್ತ ಗಮನ ಹರಿಸಲೇಬೇಕಾದ ಸಮಯ ಬಂದಿದೆ. ತಪ್ಪಿದ್ದಲ್ಲಿ ಈ ರೀತಿಯ ಅನ್ಯಾಯಗಳು ಮುಂದುವರಿಯುತ್ತಲೇ ಇರುತ್ತವೆ. ಕಲ್ಯಾಣ ಕರ್ನಾಟಕ ಭಾಗದ ಯುವಕರು ಸರಕಾರಿ ಹುದ್ದೆಗಳಿಂದ ವಂಚಿತಿದ್ದು ಸರಕಾರ ಕೂಡಲೇ ಸುತ್ತೋಲೆ ಹೊರಡಿಸಿ ಅನ್ಯಾಯ ಸರಿಪಡಿಸಿ ಪ್ರಾಧ್ಯಾಪಕರ ನೇಮಕಾತಿ ಪಟ್ಟಿ ಪ್ರಕಟಿಸುವಂತೆ ಧನ ರಾಜ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಯಶಸ್ವಿನಿ ಯೋಜನೆಯಡಿ ಜನವರಿ ಒಂದೇ ತಿಂಗಳಲ್ಲೇ 1 ಸಾವಿರಕ್ಕೂ ಅಧಿಕ ಸದಸ್ಯರಿಗೆ ಚಿಕಿತ್ಸೆ

Advertisement

Udayavani is now on Telegram. Click here to join our channel and stay updated with the latest news.

Next