Advertisement

ಗಂಗಾವತಿ: ಹದಗೆಟ್ಟ ರಸ್ತೆಗಳನ್ನು ಮಳೆಯಲ್ಲಿಯೇ ವೀಕ್ಷಿಸಿದ ಶಾಸಕ ರೆಡ್ಡಿ

06:47 PM Jul 26, 2023 | Team Udayavani |

ಗಂಗಾವತಿ: ನಗರದಲ್ಲಿಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸುರಿಯುವ ಮಳೆಯಲ್ಲಿಯೇ ಹದಗೆಟ್ಟ ರಸ್ತೆಗಳ ವೀಕ್ಷಣೆ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಹದಗೆಟ್ಟ ರಸ್ತೆಗಳ ಕುರಿತು ಉದಯವಾಣಿ ದಿನಪತ್ರಿಕೆಯಲ್ಲಿ ಜು.21 ರಂದು ”ಸತತ ಮಳೆಗೆ ಕೆಸರುಗದ್ದೆಯಾದ ರಸ್ತೆಗಳು” ಎಂಬ ವಿಶೇಷ ವರದಿಯನ್ನು ಪ್ರಕಟಿಸಿ ಗಮನ ಸೆಳೆಯಲಾಗಿತ್ತು.

Advertisement

ರಸ್ತೆ ಹದಗೆಟ್ಟಿರುವ ಕುರಿತು ಸಾರ್ವಜನಿಕರು ನಗರಸಭೆಗೆ ಹಲವು ಭಾರಿ ದೂರು ನೀಡಿ ಶಾಸಕರ ಗಮನಕ್ಕೂ ತಂದಿದ್ದರು. ನಗರದ ಬೈಪಾಸ್ ಗೌಳಿ ಮಹದೇವಪ್ಪ ರೋಡ್ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಮಳೆಯಲ್ಲೇ ಅಧಿಕಾರಿಗಳೊಂದಿಗೆ ತೆರಳಿ ರಸ್ತೆ ವೀಕ್ಷಣೆ ಮಾಡಿ ಕೂಡಲೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಸಂಪೂರ್ಣವಾಗಿ ಹದಗೆಟ್ಟು , ಮೊಣಕಾಲೆತ್ತರಕ್ಕೆ ರಸ್ತೆಯಲ್ಲಿ ತಗ್ಗು ಬಿದ್ದು ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಅನುಭಸುತ್ತಿದ್ದಾರೆ, ಈ ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದುರ್ಗಮ್ಮನ ಹಳ್ಳದ ಕಾಮಗಾರಿ ವೀಕ್ಷಣೆ ಮಾಡಿ ಸಾಧಕ ಭಾದಕಗಳನ್ನು ಚರ್ಚಿಸಿ ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರ ಆಯುಕ್ತ ವಿರೂಪಾಕ್ಷಿ ಮೂರ್ತಿ, ಕೆಆರ್‌ಪಿ ಪಕ್ಷದ ಮುಖಂಡರಾದ ಯಮನೂರ ಚೌಡ್ಕಿ,ಚಂದ್ರು ಹೇರೂರು,ರಾಜೇಶ್ ರೆಡ್ಡಿ ಶಿವಕುಮಾರ್ ಆಧೋನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next