Advertisement

ಗಂಗಾವತಿ-ಕಂಪ್ಲಿ ಸೇತುವೆ ಮುಳುಗಡೆ : 60 ಕಾಲಿನ ಮಂಟಪ ಜಲಾವೃತ

03:10 PM Aug 20, 2020 | sudhir |

ಗಂಗಾವತಿ: ತುಂಗಭದ್ರಾ ಡ್ಯಾಂ ಭರ್ತಿಯಾಗಿದ್ದು, ಹೆಚ್ಚುವರಿ 1.10 ಲಕ್ಷ ಕ್ಯೂಸೆಕ್‌ ನೀರನ್ನು ನದಿ ಮೂಲಕ ಹರಿಬಿಡಲಾಗುತ್ತಿದೆ.
ಇದರಿಂದ ಕಲ್ಯಾಣ ಕರ್ನಾಟಕವನ್ನು ಮಧ್ಯೆ ಕರ್ನಾಟಕದಿಂದ ಜೋಡಿಸುತ್ತಿದ್ದ ಗಂಗಾವತಿ-ಕಂಪ್ಲಿ ಸೇತುವೆ ಮುಳುಗಡೆಗೆ ಒಂದು ಅಡಿ ಬಾಕಿ ಇದ್ದು ವಾಹನ ಮತ್ತು ಜನಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿ ಪೊಲೀಸ್‌ ಕಾವಲು ಹಾಕಿದೆ. ಬಹುತೇಕ
ವಾಹನಗಳು ಕಡೆಬಾಗಿಲು ಬುಕ್ಕಸಾಗರ ಸೇತುವೆ ಮೂಲಕ ಸಂಚರಿಸುತ್ತಿವೆ.

Advertisement

ಆನೆಗೊಂದಿಯ ಇತಿಹಾಸ ಪ್ರಸಿದ್ಧ ನವವೃಂದಾವನ ಗಡ್ಡಿ, ಚಿಂತಾಮಣಿ ಹತ್ತಿರ ಇರುವ 60 ಕಾಲಿನ ಮಂಟಪ (ಶ್ರೀಕೃಷ್ಣದೇವರಾಯ ಸಮಾಧಿ ) ಪೂರ್ಣ ಜಲಾವೃತವಾಗಿದೆ. ವಿರೂಪಾಪೂರಗಡ್ಡಿ ಮುಖ್ಯರಸ್ತೆ ನೀರಿನಲ್ಲಿ ಮುಳುಗಡೆಯಾಗಿ ಜನಸಂಚಾರ ಸ್ಥಗಿತವಾಗಿದೆ.

ತುಂಗಭದ್ರಾ ನದಿಯಲ್ಲಿ ಮೀನುಗಾರಿಕೆ ನಿಷೇಧ ಮಾಡಲಾಗಿದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ಡಂಗುರ ಸಾರಿದೆ. ತಾಲೂಕಿನ ಸಾಣಾಪೂರ ಆನೆಗೊಂದಿ, ಚಿಕ್ಕಜಂಗತಲ್‌ ಸೇರಿ ನದಿ ಪಾತ್ರದ ಗ್ರಾಮಗಳಿಗೆ ತಹಶೀಲ್ದಾರ್‌
ಆರ್‌. ಕವಿತಾ, ಗ್ರಾಮೀಣ ಸಿಪಿಐ ಸುರೇಶ ತಳವಾರ, ಪಿಎಸ್‌ಐ ಜೆ.ದೊಡ್ಡಪ್ಪ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next