ಗಂಗಾವತಿ : ತಾಲ್ಲೂಕಿನ ಸೂರ್ಯನಾಯಕನ ತಾಂಡಾ ದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಬಚ್ಚಲು ಮನೆಯ ನೀರು ಇಂಗುಗುಂಡಿ ಯೋಜನೆಯು ದೇಶಕ್ಕೆ ಮಾದರಿಯಾಗಿದೆ .
ಈ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶಾಂದಿಲ್ಯ ಗಿರಿರಾಜ್ ಸಿಂಗ್ ತಮ್ಮ ಟ್ವೀಟ್ ಖಾತೆಯಲ್ಲಿ ಸೂರ್ಯನಾಯಕನ ತಾಂಡಾ ದ ಪ್ರತಿ ಮನೆಯ ಬಚ್ಚಲು ಮನೆಯ ನೀರನ್ನು ಇಂಗು ಗುಂಡಿಯ ಮೂಲಕ ಭೂಮಿಯಲ್ಲಿ ಇಂಗಿಸುವ ಯೋಜನೆಯನ್ನು ಪ್ರಶಂಸಿಸಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿದ್ದಾರೆ .
ನರೇಗಾ ಯೋಜನೆಯನ್ನು ಶಾಶ್ವತ ಕಾಮಗಾರಿಗೆ ಬಳಸುವ ನಿಟ್ಟಿನಲ್ಲಿ ಗಂಗಾವತಿ ತಾಲೂಕ ಪಂಚಾಯತ್ ಮತ್ತು ಕೊಪ್ಪಳ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಕಾರ್ಯವನ್ನು ಕೇಂದ್ರ ಸಚಿವರು ಶ್ಲಾಘಿಸಿದ್ದಾರೆ .ಭೂಮಿಯಲ್ಲಿ ಅಂತರ್ಜಲ ಹೆಚ್ಚು ಮಾಡುವ ನಿಟ್ಟಿನಲ್ಲಿ ಸೂರ್ಯನಾಯಕನ ತಾಂಡಾ ನಿವಾಸಿಗಳು ಪ್ರಮುಖ ಕೊಡುಗೆ ನೀಡಿದ್ದಾರೆ ತಮ್ಮ ಮನೆಯ ಬಸ್ಸು ನೀರನ್ನು ಇಂಗುಗುಂಡಿಯ ಮೂಲಕ ಭೂಮಿಯಲ್ಲಿ ಇಂಗುವಂತೆ ಮಾಡಿರುವುದು ಪರಿಸರ ಸಮತೋಲನ ಕಾಪಾಡಿದಂತಾಗುತ್ತದೆ .ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ ಮತ್ತು ಬಚ್ಚಲು ನೀರು ಗ್ರಾಮದ ರಸ್ತೆಯುದ್ದಕ್ಕೂ ಹರಿದು ಪರಿಸರ ನೈರ್ಮಲ್ಯ ಕೆಡುತ್ತದೆ .ಬಸಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಅನುಷ್ಠಾನ ಮಾಡಲು ಪ್ರೇರಣೆ ನೀಡಿದ ಜಿಲ್ಲಾಪಂಚಾಯತ್ ತಾಲ್ಲೂಕಾ ಪಂಚಾಯತ್ ಅಧಿಕಾರಿಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದ್ದಾರೆ.
ಖುಷಿ ತಂದಿದೆ : ಸೂರ್ಯನಾಯಕನ ತಾಂಡಾ ದ ಪ್ರತಿ ಮನೆಯ ಬಚ್ಚಲು ನೀರು ಅವರ ಮನೆ ಮುಂದೆಯೇ ಇಂಗುಗುಂಡಿಯಲ್ಲಿ ಇಂಗುವಂತಹ ಯೋಜನೆಯನ್ನು ನರೇಗಾ ಯೋಜನೆಯಲ್ಲಿ ಅನುಷ್ಠಾನ ಮಾಡಲಾಗಿದೆ ಅಲ್ಲಿಯ ನಿವಾಸಿಗಳ ಸಹಕಾರದಿಂದ ಯೋಜನೆ ಅನುಷ್ಠಾನವಾಗಿದೆ ಇದನ್ನು ಗಮನಿಸಿದ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಕಾರ್ಯವನ್ನು ಮೆಚ್ಚಿಕೊಂಡಿದ್ದು ಅತ್ಯಂತ ಖುಷಿಯ ವಿಷಯವಾಗಿದೆ ಅಲ್ಲಿಯ ನಿವಾಸಿಗಳಿಗೆ ಈ ಕೀರ್ತಿ ಸಲ್ಲುತ್ತದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾಕ್ಟರ್ ಮೋಹನ್ ಉದಯವಾಣಿ ಜೊತೆ ಮಾತನಾಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ .