Advertisement

2015 ರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣ: ಅಪರಾಧಿಗೆ 6 ವರ್ಷ ಜೈಲು, 15 ಸಾವಿರ ದಂಡ

08:24 PM May 29, 2024 | Team Udayavani |

ಗಂಗಾವತಿ: ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗೆ 06 ವರ್ಷ ಜೈಲು ಮತ್ತು 15 ಸಾವಿರ ರೂ.ಗಳ ದಂಡ ವಿಧಿಸಿ ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ, ಶಿಕ್ಷೆ ಘೋಷಣೆ ಮಾಡಿ ತೀರ್ಪು ನೀಡಿದ್ದಾರೆ.

Advertisement

ತಾಲೂಕಿ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಬಳಿ ಕ್ಷುಲ್ಲಕ ವಿಚಾರದಲ್ಲಿ ಎಳೆನೀರು ವ್ಯಾಪಾರ ಮಾಡಿಕೊಂಡಿದ್ದ ದೇವರಾಜ ಇವರ ಅಕ್ಕನ (ಮಹಿಳೆ) ಮೇಲೆ ಅಪರಾಧಿ ಬಸವರಾಜ ಕಂದಾರಿ ಎಳೆನೀರು ಕಡಿಯುವ ಮಚ್ಚಿನಿಂದ ಹಲ್ಲೇ ಮಾಡಿ ತೀವ್ರ ಸ್ವರೂಪದ ಗಾಯೊಳಿಸಿದ ಆರೋಪ ಸಾಬಿತಾಗಿದ್ದು ಕೊಪ್ಪಳದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ.

ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದಲ್ಲಿ ಎಳೆನೀರು ಮಾರಿಕೊಂಡು ವಾಸವಾಗಿದ್ದ ಮಹಿಳೆಯ ಮೇಲೆ ಅಪರಾಧಿ ಬಸವರಾಜ ಕಂದಾರಿ ಇತನು ಅಂಗಡಿಯ ಪಕ್ಕದಲ್ಲಿರುವ ಮನೆಗೆ ಬರುವುದು ಹೋಗುವುದು ಮಾಡುತ್ತಿದ್ದು ಮಹಿಳೆ ಅಪರಾಧಿ ಬಸವರಾಜನಿಗೆ ಬರದಂತೆ ತಾಕೀತು ಮಾಡಿದ್ದನ್ನೆ ನೆಪ ಮಾಡಿಕೊಂಡು ಮಹಿಳೆಯೊಂದಿಗೆ ವಾದ ಮಾಡುತ್ತಾ ಅಂಗಡಿಯಲ್ಲಿದ್ದ ಎಳೆನೀರು ಕಡಿಯುವ ಮಚ್ಚನ್ನು ತೆಗೆದುಕೊಂಡು ದೇವಮ್ಮಳ ಎಡಗೈ, ಬಲಗೈಗೆ, ಮೂಗಿನ ಮೇಲೆ ಹಾಗೂ ಹಣೆಯ ಮೇಲೆ ಹೊಡೆದು ಗಾಯಗೊಳಿಸಿದ ಪ್ರಕರಣ ಜರುಗಿ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅಂದಿನ ಡಿಎಸ್ಪಿ ವಿನ್‌ಸೆಂಟ್ ಶಾಂತಕುಮಾರ ತನಿಖೆ ಮಾಡಿ ಆರೋಪಿಯ ಮೇಲೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಹಾಂತಪ್ಪ ಎ. ಪಾಟೀಲ, ನಾಗರಾಜ್ ಆಚಾರ್, ಸವಿತಾ ಎಂ ಸಿಗ್ಲಿ, ಟಿ. ಅಂಬಣ್ಣ ಹಾಗೂ ಬಂಡಿ ಅಪರ್ಣಾ ಮನೋಹರ ಪ್ರಕರಣ ನಡೆಸಿದ್ದರು.

ಇದನ್ನೂ ಓದಿ: Mysore: ಲಂಚಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ ವೈದ್ಯನಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

Advertisement

Udayavani is now on Telegram. Click here to join our channel and stay updated with the latest news.

Next