Advertisement

Gangavathi ; ಕಡೆಬಾಗಿಲು-ಹೊಸಪೇಟೆ ರಸ್ತೆಯಲ್ಲಿ ಬೃಹತ್ ಲಾರಿಗಳ ಸಂಚಾರ ನಿಷೇಧ

07:40 PM Aug 07, 2023 | Team Udayavani |

ಗಂಗಾವತಿ: ತಾಲೂಕಿನ ಕಡೆಬಾಗಿಲು -ಹೊಸಪೇಟೆ ರಸ್ತೆಯಲ್ಲಿ ಬೃಹತ್ ಮೈನ್ಸ್ ಮತ್ತು ಮರಳು ಟ್ರಕ್ ಗಳ ಸಂಚಾರವನ್ನು ಪೊಲೀಸ್ ಇಲಾಖೆಯವರು ಕಟ್ಟುನಿಟ್ಟಾಗಿ ನಿಷೇಧ ಮಾಡಿದ್ದು ಕಳೆದ ಎರಡು ದಿನಗಳಿಂದ ಜುಲೈ ನಗರ ಮತ್ತು ಗಂಗಾವತಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಅಕ್ರಮವಾಗಿ ಬರುವ ಲಾರಿಗಳನ್ನು ವಾಪಸ್ ಕಳಿಸುತ್ತಿದ್ದಾರೆ.

Advertisement

ಗಂಗಾವತಿ ಕಡೆ ಬಾಗಿಲು ಹೊಸಪೇಟೆ ಆನೆಗುಂದಿ ಮುನಿರಾಬಾದ್ ರಸ್ತೆ ಅತ್ಯಂತ ಕಿರಿದಾಗಿದ್ದು ಇಲ್ಲಿ ಬೃಹತ್ ಗಾತ್ರದ ಲಾರಿಗಳು ಮತ್ತು ಮರಳಿನ ಟ್ರಕ್ ಗಳು ವ್ಯಾಪಕವಾಗಿ ಸಂಚಾರ ಮಾಡುತ್ತಿದ್ದವು ಇದರಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕಿಷ್ಕಿಂಧಾ ಅಂಜನಾದ್ರಿ ಸೇರಿದಂತೆ ಆನೆಗೊಂದಿ ಭಾಗದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಇದರಿಂದ ಬಹಳ ತೊಂದರೆಯಾಗಿತ್ತು. ಈ ಕುರಿತು ಉದಯವಾಣಿ ಆ.03 ರಂದು ವಿಸ್ತೃತ ವರದಿಯನ್ನು ಪ್ರಕಟಿಸಿತ್ತು ಇದನ್ನು ಗಮನಿಸಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಹಿಂದೆ ಮಾಡಿದ್ದ ಆದೇಶದಂತೆ ಕಡೆಬಾಗಿಲು,ಆನೆಗೊಂದಿ ,ಹೊಸಪೇಟೆ ರಸ್ತೆಯಲ್ಲಿ ಬೃಹತ್ ಗಾತ್ರದ ಮೈನ್ಸ್ ಮತ್ತು ಮರಳಿನ ಲಾರಿಗಳ ಸಂಚಾರವನ್ನು ನಿಷೇಧ ಮಾಡಿ ಆದೇಶವನ್ನು ಪುನರ್ ಜಾರಿ ಮಾಡಲಾಗಿದೆ. ಗಂಗಾವತಿಯ ಜುಲೈ ನಗರ ಮತ್ತು ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪೊಲೀಸರನ್ನು ಯೋಜನೆ ಮಾಡುವ ಮೂಲಕ ಅಕ್ರಮ ಸಂಚಾರಕ್ಕೆ ತಡೆ ನೀಡಲಾಗುದೆ. ಜಿಲ್ಕಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next