Advertisement
ಗಂಗಾವತಿ ನಗರದ ವ್ಯಾಪ್ತಿಯಲ್ಲಿ ಕೋವಿಡ್ 19 ಮುನ್ನೆಚ್ಚರಿಕೆ ಬಗ್ಗೆ ನಗರಸಭೆ ನಿರ್ಲಕ್ಷ್ಯ ವಹಿಸಿದೆ. ನಗರದಲ್ಲಿ ಎಲ್ಲೆಂದರಲ್ಲಿ ಮಾಂಸ, ತರಕಾರಿ ಮಾರುಕಟ್ಟೆಗಳಿದ್ದು ಇದುವರೆಗೂ ಸ್ವಚ್ಚತೆ ಕುರಿತು ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
Related Articles
Advertisement
ಮಾಂಸದ ಮಾರುಕಟ್ಟೆ ಹತ್ತಿರ ರಕ್ತ ಮಾಂಸದ ತುಂಡು ಕುರಿ ಮೇಕೆ ಚರ್ಮ, ಕೋಳಿ ಪುಕ್ಕ ಬಿದಿದ್ದು ಚರಂಡಿಗಳು ತ್ಯಾಜ್ಯ ದಿಂದ ತುಂಬಿವೆ. ನೊಣ ಸೊಳ್ಳೆಗಳು, ದುರ್ವಾಸನೆ ಇಡೀ ಪ್ರದೇಶದಲ್ಲಿ ಹರಡಿದೆ. ನಗರದ ಮಧ್ಯೆಭಾಗದಲ್ಲಿ ಹರಿಯುವ ದುರುಗಮ್ಮನ ಹಳ್ಳದಲ್ಲಿ ತರಕಾರಿ ಕೊಳೆತ ಮಾಂಸ ಚರಂಡಿ ನೀರು ಹರಿಬಿಡಲಾಗುತ್ತಿದ್ದು ಹಳ್ಳದ ಅಕ್ಕಪಕ್ಕದಲ್ಲಿ ವಾಸ ಮಾಡುವವರು ದುರ್ವಾಸನೆಯಿಂದ ಮುಖ ಮುಚ್ಚುವಂತಾಗಿದೆ.
ಪೌರಕಾರ್ಮಿಕರ ಕೊರತೆ: ಗಂಗಾವತಿ ನಗರದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು 35ವಾರ್ಡುಗಳಿದ್ದು ನೈರ್ಮಲ್ಯ ಕಾಪಾಡಲು ಆಗುತ್ತಿಲ್ಲ. ಇರುವ ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಚತಾ ಕಾರ್ಯ ಮಾಡಲಾಗುತ್ತದೆ ಎಂದು ಪೌರಾಯುಕ್ತ ಶೇಖರಪ್ಪ ಉದಯವಾಣಿಗೆ ತಿಳಿಸಿದ್ದಾರೆ.