Advertisement

ಗಂಗಾವತಿ: ಕುಡಿಯುವ ನೀರಿನ ವಾಲ್ ಗಳ ಸುರಕ್ಷತೆ ಜತೆಗೆ ಸುಲಭ ಶೌಚಾಲಯ ನಿರ್ಮಾಣ

02:29 PM Jul 23, 2020 | keerthan |

ಗಂಗಾವತಿ: ನಗರದ ಬಸ್ ನಿಲ್ದಾಣ ಬಳಿ ನಿರ್ಮಾಣವಾಗುತ್ತಿರುವ ಸುಲಭ ಶೌಚಾಲಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ಕುಡಿಯುವ ನೀರು ಪೂರೈಕ ಮಾಡುವ ವಾಲ್ ಗಳ ಸಂರಕ್ಷಣೆ ಜತೆಗೆ ಜನತೆಗೆ ಅಗತ್ಯವಾಗಿರುವ ಸುಲಭ ಶೌಚಾಲಯ ನಿರ್ಮಿಸಲಾಗುತ್ತದೆ ಎಂದು ನಗರ ಯೋಜನಾ ಕೋಶದ ನಿರ್ದೇಶಕ ಸಿದ್ದರಾಮೇಶ‌ ಹೇಳಿದರು.

Advertisement

ಅವರು ಗುರುವಾರ ಬೆಳ್ಳಿಗ್ಗೆ ಜೂನಿಯರ್ ಕಾಲೇಜ್ ಮೈದಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತಿರುವ ಸುಲಭ ಶೌಚಾಲಯ ಕಾಮಗಾರಿ ವೀಕ್ಷಣೆ ನಂತರ ಉದಯವಾಣಿ ಜತೆ ಮಾತನಾಡಿ, ನಗರಕ್ಕೆ5 ಸುಲಭ ಶೌಚಾಲಯ ಮಂಜೂರಿಯಾಗಿದ್ದು ನಿರ್ಮಾಣಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಅವರಿಗೆ ಗಂಗಾವತಿಯಲ್ಲಿ ನೈರ್ಮಲ್ಯ ಕಾಪಾಡುವ ಕುರಿತು ಮನವರಿಕೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಪೈಪ್ ಗಳ ಮೇಲೆ ಶೌಚಾಲಯ ನಿರ್ಮಿಸಲಾಗುವುದಿಲ್ಲ. ವೈಜ್ಞಾನಿಕವಾಗಿ ಶೌಚಾಲಯ ನೀರನ್ನು ಯುಜಿಡಿಯಲ್ಲಿ ಬಿಡಲಾಗುತ್ತದೆ. ಜನರು ಸುಲಭ ಶೌಚಾಲಯ ನಿರ್ಮಿಸಲು ಅವಕಾಶ ನೀಡಬೇಕು. ಕೆಲಸಕ್ಕೆ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪೌರಾಯುಕ್ತ ಶೇಖರಪ್ಪ ಇಳಿಗೇರ್, ಜಿಲ್ಲಾ ಯೋಜನಾಧಿಕಾರಿ ಗಂಗಾಧರ, ಎಇಇ ಆರ್ ಆರ್ ಪಾಟೀಲ್, ಜೆಇ ಪಲ್ಲವಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next