ಗಂಗಾವತಿ: ಅನಗತ್ಯ ಬೈಕ್ ಸವಾರರೇ ಕೊರೊನಾ ಹಬ್ಬಿಸುವ ಸಾಧ್ಯತೆ ಇದ್ದು ಪ್ರತಿ ವಾರ್ಡ್ ಗ್ರಾ.ಪಂ.ನೋಡೆಲ್ ಅಧಿಕಾರಿಗಳು ಬೈಕ್ ಹಾಗೂ ಇತರೆ ವಾಹನಗಳನ್ನು ಸೀಜ್ ಮಾಡುವಂತೆ ಡಿಎಸ್ ಪಿ ರುದ್ರೇಶ ಉಜ್ಜನಕೊಪ್ಪ ಆದೇಶ ನೀಡಿದ್ದಾರೆ.
ನಗರಸಭೆಯ ಕೊರೊನಾ ಮಾರ್ಗಸೂಚಿ ಪಾಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ಗ್ರಾ.ಪಂ ನಗರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ನೋಡೆಲ್ ಅಧಿಕಾರಿಗಳು, ಕೊರೊನಾ ಹರಡದಂತೆ ತಡೆಯಲು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಶಾಸಕರು,ನಗರಸಭೆ ಸದಸ್ಯರು, ಎಸ್ಪಿ, ಡಿಸಿ ಅವರು ನೋಡೆಲ್ ಅಧಿಕಾರಿಗಳ ಬೆಂಬಲಕ್ಕಿದ್ದು ಪ್ರತಿ ಓಣಿಗಳಲ್ಲಿ ಜನ ಹೆಚ್ಚು ಸೇರುವುದು ಮಕ್ಕಳು ಆಟವಾಡುವುದನ್ನು ತಡೆಯಬೇಕು. ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡದೇ ಕಾಳಜಿ ಕೇಂದ್ರಕ್ಕೆ ಕಳಿಸುವ ಕಾರ್ಯ ಮಾಡಬೇಕೆಂದರು.
ಇದನ್ನೂ ಓದಿ:ಚೋಕ್ಸಿಗೆ ಎಲ್ಲಾ ದಾರಿ ಬಂದ್…ಡೊಮಿನಿಕಾದಿಂದ ಚೋಕ್ಸಿ ಕರೆತರಲು ಭಾರತ ಸಿದ್ಧತೆ
ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ ವಾರ್ಡುಗಳಲ್ಲಿ ಸೋಂಕಿತರನ್ನು ಪತ್ತೆ ಮಾಡಿ ಅವರ ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಕಲಿಸಬೇಕು. ವಾಹನ ಅನಗತ್ಯ ಸಂಚಾರ ನಿಲ್ಲಿಸಬೇಕು. ಕೊರೊನಾ ಸಂಬಂಧಿಸಿದಂತೆ ಇರುವ ಅಗತ್ಯ ಮಾಹಿತಿಯನ್ನು ಮೇಲಿನ ಅಧಿಕಾರಿಗಳಿಗೆ ರವಾನೆ ಮಾಡಬೇಕೆಂದರು.
Related Articles
ತಹಸೀಲ್ದಾರ್ ಯು.ನಾಗರಾಜ ಸೇರಿ ನಗರಸಭೆ ಅಧಿಕಾರಿಗಳು ಇದ್ದರು.