ಗಂಗಾವತಿ: ಇಲ್ಲಿನ ಮೋರಿಯರ ಶಿಲಾ ಸಮಾಧಿಗಳ ಬೆಟ್ಟ ವಿಶ್ವದ ಆಕರ್ಷಣೀಯ ಸ್ಥಳವಾಗಿದೆ ಇಲ್ಲಿ ಮನುಷ್ಯನ ಉಗಮ ನಾಗರಿಕತೆ ಬೆಳೆದ ಕುರಿತು ಮಾಹಿತಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು .
ಅವರು ವಿಶ್ವ ಪ್ರವಾಸೋದ್ಯಮ ದಿನದ ನಿಮಿತ್ತ ತಾಲ್ಲೂಕಿನ ಚಿಕ್ಕಬೆಣಕಲ್ ಮೊರ್ಯರ ಬೆಟ್ಟದಲ್ಲಿ ಕಾರ್ಯಕ್ರಮ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿದ್ದು ಇವುಗಳ ಬಗ್ಗೆ ಜಗತ್ತಿಗೆ ಗುರುತು ಮಾಡುವಂತಹ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ಅನೇಕ ಯೋಜನೆಗಳ ಮುಖಾಂತರ ಮೊರ್ಯ ಮೂರರ ಬೆಟ್ಟ ಕಿಷ್ಕಿಂದಾ ಅಂಜನಾದ್ರಿ ಪಂಪಾಸರೋವರ ಸೋನಾಪುರ್ ಲೇಕ್ ಸಣಾಪುರ ಫಾಲ್ಸ್ ಹೇಮಗುಡ್ಡ ಗಂಡುಗಲಿ ಕುಮಾರರಾಮನ ಬೆಟ್ಟ ಹೀಗೆ ಅನೇಕ ಸ್ಥಳಗಳು ಇದ್ದು ಇವುಗಳ ಬಗ್ಗೆ ಜಗತ್ತಿನ ಇಳಿಸುವ ಕೆಲಸ ಮಾಡಬೇಕಿದೆ ಪ್ರಪಂಚದಲ್ಲಿ ಪ್ರವಾಸೋದ್ಯಮ ಅತ್ಯಂತ ಲಾಭದಾಯಕ ಕ್ಷೇತ್ರವಾಗಿದ್ದು ಇದರಿಂದ ನೇರ ಮತ್ತು ಪರೋಕ್ಷವಾಗಿ ಉದ್ಯೋಗಗಳು ಲಭಿಸುತ್ತವೆ.
ಇದನ್ನೂ ಓದಿ:ಆಮ್ತಿ ಸಮೀಪ ರಸ್ತೆಗೆ ಉರುಳಿದ ವಿದ್ಯುತ್ ಕಂಬ :ಕೆಲಕಾಲ ರಸ್ತೆ ಸಂಚಾರ ಸ್ಥಗಿತ
ಪ್ರವಾಸೋದ್ಯಮ ಮತ್ತು ಸ್ಮಾರಕಗಳ ಬಗ್ಗೆ ಸ್ಥಳೀಯರು ಅತ್ಯಂತ ಪವಿತ್ರ ಭಾವನೆ ಇಟ್ಟುಕೊಳ್ಳಬೇಕು ಸ್ಮಾರಕಗಳ ರಕ್ಷಣೆಗೆ ಪ್ರತಿಯೊಬ್ಬರು ಮಾಡಬೇಕು ಅವುಗಳನ್ನು ಪ್ರಪಂಚಕ್ಕೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು .
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ತರನುಮ್ ಫೌಝಿಯಾ ಬೇಗಂ ,ಇತಿಹಾಸತಜ್ಞ ಡಾ. ಶರಣಬಸಪ್ಪ ಕೋಲ್ಕಾರ್, ತಹಸೀಲ್ದಾರ್ ಯು. ನಾಗರಾಜ ಇದ್ದರು.