Advertisement

ಗಂಗಾವತಿ: NRC, CAA ವಿರೋಧಿಸಿ ನಗರದ ಹಲವೆಡೆ ಗೋಡೆ ಬರಹ

09:31 AM Jan 15, 2020 | Mithun PG |

ಗಂಗಾವತಿ: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗು ಎನ್ ಆರ್ ಸಿ ಕಾಯ್ದೆ ವಿರೋಧಿಸಿ ನಗರದ ಜೂನಿಯರ್ ಕಾಲೇಜಿನ ಮೈದಾನದ ಗೋಡೆಗಳಿಗೆ ‘ನೋ ಎನ್ ಆರ್ ಸಿ,ಸಿಎಎ, ಎನ್ ಪಿಆರ್ ‘  ಎಂಬ ಬರಹ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಲಾಗಿದೆ.

Advertisement

ಈಗಾಗಲೇ ನಗರದ ಕಿಲ್ಲಾ ಏರಿಯಾದಲ್ಲಿ ಪೌರತ್ವ ಕಾಯ್ದೆ ಜಾಗೃತಿ ಮಾಡಲು ತೆರಳಿದ್ದ ಬಿಜೆಪಿ ಮುಖಂಡರ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಪೌರತ್ವ ಕಾಯ್ದೆ ದುಷ್ಪರಿಣಾಮಗಳ ಕುರಿತು ಪ್ರತಿ ವಾರ್ಡಿನಲ್ಲಿ ಜಾಗೃತಿ ಮೂಡಿಸಲು ಅಲ್ಪಸಂಖ್ಯಾತರು ಕಾಂಗ್ರೆಸ್, ಹಿಂದುಳಿದ ದಲಿತ ಮುಖಂಡರು ಸಭೆ ನಡೆಸಿದ್ದಾರೆ. ಈ ಮಧ್ಯೆ ಪಿಎಲ್ ಡಿ ಬ್ಯಾಂಕ್ ಬಿಇಒ ಆಫೀಸ್ ಕಚೇರಿ ಗೋಡೆಗಳ ಮೇಲೆ ‘ನೋ ಎನ್ ಆರ್ ಸಿ ,ಸಿಎಎ ಎನ್ ಪಿ ಆರ್’ ಎಂದು ಬರೆಯಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next