Advertisement
2020-21 ನೇ ಸಾಲಿನಲ್ಲಿ ಕಾಡಾ ಪ್ರದೇಶದ ವ್ಯಾಪ್ತಿಯಲ್ಲಿ ಖರ್ಚು ಮಾಡಲು ರಾಜ್ಯ ಸರಕಾರ28 ಕೋಟಿ ರೂ.ಗಳನ್ನು ಮೀಸಲಿರಿಸಿದ್ದರೂಅದನ್ನು ಖರ್ಚು ಮಾಡದೇ ನಿರ್ಲಕ್ಷé ವಹಿಸಿದ್ದರಿಂದ ಮಾರ್ಚ್ 31 ನಂತರ ಈಹಣವನ್ನು ಸರಕಾರ ವಾಪಸ್ ಪಡೆಯಲಿದೆ. ತುಂಗಭದ್ರಾ ಕಾಡಾ ವ್ಯಾಪ್ತಿಯ ರಾಯಚೂರು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ರೈತರಿಗೆ ಮತ್ತು ಪರೋಕ್ಷವಾಗಿ ಕೃಷಿಗೆನೆರವಾಗಲು ಸರಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸುತ್ತದೆ. ಈ ಹಣವನ್ನುಕಾಡಾ ಅಧಿಕಾರಿಗಳು ಕ್ರಿಯಾಯೋಜನೆ ಸಿದ್ಧ ಮಾಡಿ ಹಣ ಖರ್ಚು ಮಾಡಬೇಕಾಗುತ್ತದೆ.
Related Articles
Advertisement
ನಿವೃತ್ತಿಗೆ 6 ತಿಂಗಳು ಅವಧಿ ಇರುತ್ತದೆ. 6 ತಿಂಗಳ ಅವಧಿ ಇರುವ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಹಣಕಾಸು ಜವಾಬ್ದಾರಿತೆಗೆದುಕೊಳ್ಳಲು ಹಿಂದೇಟು ಹಾಕುವುದುಸಹಜವಾಗಿದೆ. ಪ್ರಸ್ತುತ ಇರುವ ಆಡಳಿತಾಧಿಕಾರಿ ಸಿಬ್ಬಂದಿ ಹಾಗೂ ಕ್ರಿಯಾಯೋಜನೆ ನೆಪದಲ್ಲಿ 28 ಕೋಟಿ ರೂ. ಹಣ ವಾಪಸ್ ಹೋಗಲು ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ.
ಕೃಷಿ-ರೈತರ ಅಭಿವೃದ್ಧಿಗಾಗಿ ಸರಕಾರ ಪ್ರತಿವರ್ಷ ರಾಜ್ಯದ ಇತರೆ 5 ಕಾಡಾಗಳಿಗೆ ಕೊಟ್ಟಂತೆ ತುಂಗಭದ್ರಾ ಕಾಡಾಕ್ಕೆ ಹಣ ಮೀಸಲಿರಿಸುತ್ತದೆ. ಕಳೆದ 6 ವರ್ಷಗಳಿಂದ ಅಧಿಕಾರಿಗಳ ಕುಂಟು ನೆಪದಿಂದ ನೂರು ಕೋಟಿ ರೂ.ಗೂ ಅ ಧಿಕ ಹಣ ಸರಕಾರಕ್ಕೆ ಮರಳಿ ಹೋಗಿದೆ. ರೈತರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ಹಣ ಖರ್ಚು ಮಾಡಲು ಅವಕಾಶವಿದ್ದು, ಸದ್ಯ 28 ಕೋಟಿ ರೂ.ಗಳನ್ನು ವಾಪಸ್ ಕಳಿಸಲು ಸಿದ್ಧತೆ ನಡೆದಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಕ್ರಿಮಿನಾಶಕ ರಸಗೊಬ್ಬರ ಬಳಕೆಯಿಂದ ಭೂಮಿ ಸವಳು ಮತ್ತು ಬರಡಾಗಿದ್ದು ರೈತರಿಗೆ ಸಮಗ್ರ ಕೃಷಿ ಸೇರಿ ಹಲವಾರು ಯೋಜನೆ ತರಬೇತಿ ನೀಡಲು ಮತ್ತು ಎಸ್ಸಿ-ಎಸ್ಟಿ ಹಿಂದುಳಿದ ವರ್ಗದ ರೈತರು ಸಾಮೂಹಿಕ ಪಂಪ್‌ಸೆಟ್, ಕಾಲುವೆ ದುರಸ್ತಿ ಗೋಡೌನ್ ನಿರ್ಮಾಣಕ್ಕೆ ಕ್ರಿಯಾಯೋಜನೆ ಮೂಲಕ ಹಣ ಖರ್ಚು ಮಾಡದೇ ಆಡಳಿತಾಧಿಕಾರಿಗಳ ನಿರ್ಲಕ್ಷéದಿಂದ ಹಣ ವಾಪಸ್ ಹೋಗುತ್ತಿದೆ. ಸಿಬ್ಬಂದಿ ಕೊರತೆ ಇದ್ದರೆ ಜನಪ್ರತಿನಿಧಿಗಳಿಗೆ ಮನವಿ ಮಾಡುವ ಮೂಲಕ ಹುದ್ದೆಗಳ ಭರ್ತಿ ಅಥವಾ ನಿಯೋಜನೆ ಪಡೆದು ಹಣ ಖರ್ಚು ಮಾಡಲು ಅವಕಾಶವಿದ್ದರೂ ಇಚ್ಛಾಶಕ್ತಿಯ ಕೊರತೆಯಿಂದ ಹಣ ವಾಪಸ್ ಹೋಗುತ್ತಿದೆ.- ಎಂ.ಆರ್.ವೆಂಕಟೇಶ, ತುಂಗಭದ್ರಾ ಉಳಿಸಿ ಆಂದೋಲನ ಸಂಚಾಲಕರು
ಸರಕಾರ ಅನುದಾನ ಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಹಣವಾಪಸ್ ಹೋಗುತ್ತಿದೆ. ಸಿಬ್ಬಂದಿ ಕೊರತೆ ಸೇರಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನ 28 ಕೋಟಿ ರೂ. ಅನುದಾನ ವಾಪಸ್ ಹೋಗಿರುವುದು ಸತ್ಯ. ಆಡಳಿತಾಧಿಕಾರಿ ಇದಕ್ಕೆ ನೇರ ಹೊಣೆ ಯಾಗಿದ್ದಾರೆ. ಈ ಕುರಿತು ಸರಕಾರದ ಗಮನಕ್ಕೆ ತರಲಾಗುತ್ತದೆ. ಮುಂದಿನ ವರ್ಷ 100 ಕಾಡಾ ಅನುದಾನ ತಂದು ಮುಂಚಿತವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅರಿವು ಮೂಡಿಸಿ ಅನುದಾನ ಖರ್ಚು ಮಾಡಲಾಗುತ್ತದೆ. ಹಾಲಿ ಇರುವ ಆಡಳಿತಾಧಿಕಾರಿ ಸರಿಯಾಗಿ ಸ್ಪಂದನೆ ಇಲ್ಲದ ಕಾರಣ ವರ್ಗ ಮಾಡುವಂತೆ ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ವರ್ಗವಾಗಿದ್ದರೂ ಸರಕಾರ ಮರಳಿ ತುಂಗಭದ್ರಾ ಕಾಡಾಕ್ಕೆ ಹಾಲಿ ಆಡಳಿತಾಧಿಕಾರಿಯನ್ನು ನಿಯೋಜಿಸಿದ್ದು, ಸದ್ಯ ಇರುವ ಆಡಳಿತಾಧಿಕಾರಿ ಬದಲಿಸಿ ಬೇರೆಯವರನ್ನು ನಿಯೋಜಿಸುವಂತೆ ಶೀಘ್ರ ಸಿಎಂ ಅವರಿಗೆ ಕೋರಲಾಗುತ್ತದೆ. -ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ
-ಕೆ.ನಿಂಗಜ್ಜ