ಗಂಗಾವತಿ: ತಾಲೂಕಿನ ಹೊಸ್ಕೇರಾ-ಡಗ್ಗಿ ಗ್ರಾಮದಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಸರಕಾರ ಗುರುತಿಸಿದ ಜಾಗದಲ್ಲಿ ಸವರ್ಣಿಯವರು ಅವಕಾಶ ನೀಡದ ಕಾರಣ ಹಳ್ಳದ ಬದಿಯಲ್ಲಿ ಶವ ಸಂಸ್ಕಾರ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಹಳ್ಳದ ದಂಡೆಗೆ ಹೋಗಲು ಹೋಗಲು ಸೂಕ್ತ ದಾರಿ ಇಲ್ಲದ ಕಾರಣ ಯಾರಾದರೂ ಸತ್ತ ದಿನ ಟ್ರಾಕ್ಟರ್ ನಿಂದ ದಾರಿ ಮಾಡಿಕೊಂಡು ನಂತರ ಶವವನ್ನು ತೆಗೆದುಕೊಂಡು ಹೋಗಬೇಕು. ಇನ್ನೊಂದೆಡೆ ಹಳ್ಳದ ಬದಿಯ ಶವ ಸಂಸ್ಕಾರಕ್ಕೂ ಗ್ರಾಮದ ಮಧ್ಯೆ ರಸ್ತೆಯಿಂದ ದಲಿತರ ಸ್ಮಶಾನಕ್ಕೆ ಹೋಗುವಂತಿಲ್ಲ.
Advertisement
ಹೆಣವನ್ನು ಗ್ರಾಮದ ಮಧ್ಯೆ ಹೊತ್ತುಕೊಂಡ ಹೋದರೆ ಆಕ್ಷೇಪ ಎತ್ತುತ್ತಾರೆ. ಈ ಹಿಂದೆ ಗ್ರಾಮದ ಮಧ್ಯೆ ಮೃತದೇಹದವನ್ನು ತೆಗೆದುಕೊಂಡು ಹೋಗಿದ್ದರಿಂದ ಘರ್ಷಣೆ ನಡೆದಿತ್ತು. ಹೊಸ್ಕೇರಾ ಡಗ್ಗಿ ಗ್ರಾಮದಲ್ಲಿ ಅಂದಾಜು 400 ಮನೆಗಳಿವೆ. ಗ್ರಾಮದ ಜನರ ಮುಖ್ಯ ಕಸುಬು ಕೃಷಿಯಾಗಿದೆ. ಕೆಲವರು ಗಂಗಾವತಿ ಸಮೀಪ ಇರುವುದರಿಂದ ವ್ಯಾಪಾರ ಸೇರಿದಂತೆ ಇತರೆ ಕೆಲಸಕ್ಕಾಗಿ ಬೆಳ್ಳಿಗ್ಗೆ ಆಗಮಿಸಿ ಸಂಜೆ ಪುನಃ ಗ್ರಾಮಕ್ಕೆ ತೆರಳುತ್ತಾರೆ. ಗ್ರಾಮದ ಅಂದಾಜು 5 ಎಕರೆ ಪ್ರದೇಶದಲ್ಲಿ ಸ್ಮಶಾನವಿದೆ.
ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಪ್ರಗತಿಪರ ಹೋರಾಟಗಾರರು ಮತ್ತು ದಲಿತ ಮುಖಂಡರು ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಹೊಸ್ಕೇರಾ-ಡಗ್ಗಿ ಗ್ರಾಮದಲ್ಲಿ ದಲಿತರ ಹೆಣಗಳನ್ನು ಹೂಳಲು ಈಗಿರುವ ಸರಕಾರಿ ಭೂಮಿಯಲ್ಲಿ ಅವಕಾಶ ಕಲ್ಪಿಸಲು ಗ್ರಾಮದಲ್ಲಿ ಸಭೆ ನಡೆಸಿ ಅವಕಾಶ ಕಲ್ಪಿಸಬೇಕಿದೆ ಎನ್ನುತ್ತಾರೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕರರ ಸಂಘ ಅಧ್ಯಕ್ಷ ಮರಿನಾಗ.
Related Articles
ಮರಿನಾಗ ಅಧ್ಯಕ್ಷರು
ಕರ್ನಾಟಕ ಪ್ರಾಂತ ಕೃಷಿ ಕೂಲಿಕರರ ಸಂಘ
Advertisement
ರಸ್ತೆ ನಿರ್ಮಿಸುವಂತೆ ತಾ.ಪಂ.ನವರಿಗೆ ಸೂಚನೆ ನೀಡಲಾಗಿತ್ತು. ಅಸ್ಪೃಶ್ಯತೆ ಆಚರಣೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಗ್ರಾಮದಲ್ಲಿ ಸ್ಮಶಾನದ ಸಮಸ್ಯೆ ಇತ್ಯರ್ಥ ಮಾಡಲಾಗುತ್ತದೆ.*ಯು.ನಾಗರಾಜ ತಹಶೀಲ್ದಾರ್ ■ ಕೆ.ನಿಂಗಜ್ಜ