Advertisement

ಮಂತ್ರಾಲಯ-ವ್ಯಾಸರಾಜ ಮಠದ ಶ್ರೀಗಳು ಭೇಟಿ

10:03 AM Jul 19, 2019 | Team Udayavani |

ಗಂಗಾವತಿ: ತಾಲೂಕಿನ ಆನೆಗೊಂದಿ ನವವೃಂದಾವನ ಗಡ್ಡಿಯಲ್ಲಿ ವ್ಯಾಸರಾಜರ ವೃಂದಾವನ ಧ್ವಂಸ ಹಿನ್ನೆಲೆಯಲ್ಲಿ ಮಂತ್ರಾಲಯದ ಸುಭುದೇಂದ್ರತೀರ್ಥ ಶ್ರೀಗಳು ಹಾಗೂ ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥರು, ವಿದ್ಯಾಮನೋಹರ ತೀರ್ಥರು, ವಿದ್ಯಾವಿಜಯ ತೀರ್ಥರು ಗುರುವಾರ ನವವೃಂದಾವನ ಗಡ್ಡಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಸುಭುದೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ವ್ಯಾಸರಾಜರ ವೃಂದಾವನ ದುಷ್ಕರ್ಮಿಗಳು ಧ್ವಂಸ ಮಾಡಿರುವುದು ನೋವುಂಟು ಮಾಡಿದೆ. ಹಿಂದೂ ಧರ್ಮದ ಮೇಲೆ ವ್ಯಾಪಕ ಧಕ್ಕೆಯಾಗುತ್ತಿದ್ದು, ಅಪರಾಧಿಗಳ ಕೃತ್ಯ ಅಕ್ಷಮ್ಯವಾಗಿದೆ. ಈ ಕೃತ್ಯ ಮಾಡಿದವರನ್ನು ಪೊಲೀಸರು ಬಂಧಿಸಬೇಕು. ದುಷ್ಕೃತ್ಯದ ಹಿಂದೆ ಯಾವ ಉದ್ದೇಶವಿದೆ ತಿಳಿಯಬೇಕಿದೆ. ವ್ಯಾಸರಾಜರು ಶ್ರೇಷ್ಠ ಯತಿಗಳಾಗಿದ್ದು, ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿ ಆಡಳಿತಕ್ಕೆ ಶ್ರೇಷ್ಠ ಸಲಹೆ ನೀಡಿ ವಿಜಯನಗರದ ಕೀರ್ತಿ ಹೆಚ್ಚಿಸಿದ್ದರು. ಇಂತಹ ಗುರುಗಳ ವೃಂದಾವನ ನಾಶ ಮಾಡಿದ್ದು ಭಕ್ತರಲ್ಲಿ ತೀವ್ರ ನೋವುಂಟು ಮಾಡಿದೆ. ಮೂರೂ ಮಠದ ಶ್ರೀಗಳ ಜತೆ ಚರ್ಚಿಸಿ ವೃಂದಾವನ ಪುನರ್‌ ನಿರ್ಮಿಸಲಾಗುತ್ತದೆ. ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ಸ್ಮಾರಕಗಳ ರಕ್ಷಣೆಗೆ ಸೂಕ್ತ ಭದ್ರತೆ ಒದಗಿಸಬೇಕು. ಪೊಲೀಸರು ಶೀಘ್ರ ದುಷ್ಕರ್ಮಿಗಳನ್ನು ಬಂಧಿಸಲಿದ್ದು, ಭಕ್ತರು ಯಾವುದೇ ಭಾವಾವೇಶಕ್ಕೆ ಒಳಗಾಗಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next