Advertisement

ಗಂಗಾವತಿ : ಪೋಲೀಸ್ ಅಧಿಕಾರಿ ಉದಯ ರವಿ ಮನೆಗಳ ಮೇಲೆ ಎಸಿಬಿ ದಾಳಿ

07:59 AM Jun 17, 2022 | Team Udayavani |

ಗಂಗಾವತಿ : ಗಂಗಾವತಿ ಗ್ರಾಮೀಣ ವೃತ್ತದ ಪೊಲೀಸ್ ಅಧಿಕಾರಿಯಾಗಿದ್ದ ಪ್ರಸ್ತುತ ಪೊಲೀಸ್ ಗುಪ್ತಚರ ಇಲಾಖೆ ಅಧಿಕಾರಿ   ಉದಯರವಿ ಅವರ ಗಂಗಾವತಿ ಮನೆ ಸೇರಿದಂತೆ ವಿವಿಧೆಡೆ ಇರುವ 4  ಮನೆಗಳ ಮೇಲೆ  ಎಸಿಬಿ   ಡಿವೈಎಸ್ಪಿ ಶಿವಕುಮಾರ್  ಹಾಗೂ  ಸಬ್ ಇನ್ಸ್ ಪೆಕ್ಟರ್ ಆಂಜನೇಯ ನೇತೃತ್ವದ  ಅಧಿಕಾರಿಗಳು  ದಾಳಿ ಮಾಡಿ  ಶೋಧ ನಡೆಸಿದ್ದಾರೆ .

Advertisement

ಉದಯರವಿ ಅವರು ಗಂಗಾವತಿ ನಗರ ಠಾಣೆ ಗ್ರಾಮೀಣ ಠಾಣೆಗಳಲ್ಲಿ ಪಿ ಐ ಆಗಿ ಕಾರ್ಯ ನಿರ್ವಹಿಸಿದ್ದರು.ಇತ್ತೀಚೆಗಷ್ಟೇ ಬೆಂಗಳೂರಿಗೆ ಪೊಲೀಸ್ ಗುಪ್ತಚರ ಇಲಾಖೆಯ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆಗೊಂಡಿದ್ದರು .ಕೆಲ ಜನಪ್ರತಿನಿಧಿಗಳು ಮತ್ತು ಉದಯ ರವಿ ಅವರ ಮಧ್ಯೆ ಶೀತಲ ಸಮರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ್ದ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿಯ ಕೆಲ ಮುಖಂಡರು ದೂರು ಸಲ್ಲಿಸಿ ತನಿಖೆ ನಡೆಸಿ ಮತ್ತು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿದ್ದರು.

ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಕನಕಗಿರಿ ಭಾಗದಲ್ಲಿ ಮಟ್ಕಾ ಇಸ್ಪೀಟ್ ದಂಧೆ, ಮರಳು ಮಾಫಿಯದ  ಹಿಂದೆ  ಪೋಲಿಸ್ ಇಲಾಖೆಯ ನೇರವಾಗಿ ಕೈವಾಡವಿದೆ  ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.

ನಾಲ್ಕು ಎಸಿಬಿ ದಾಳಿ :ಪೋಲೀಸ್ ಅಧಿಕಾರಿ ಉದಯ ರವಿ ಅವರ ಗಂಗಾವತಿ, ಮುದಗಲ್, ಗಂಗಾವತಿಯ ಬೊಂಬು ಬಜಾರ್ ಮತ್ತು ಆಪ್ತನ ಮನೆ ಸೇರಿ ಒಟ್ಟು 4 ಕಡೆ ಎಸಿಬಿ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ .

ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ಶಿವಕುಮಾರ್, ಇನ್ಸ್ಪೆಕ್ಟರ್ ಆಂಜನೇಯ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದು ಎಸಿಬಿ ದಾಳಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಪೊಲೀಸ್ ಬಿಗಿ ಭದ್ರತೆ ಒದಗಿಸಿದ್ದಾರೆ .

Advertisement
Advertisement

Udayavani is now on Telegram. Click here to join our channel and stay updated with the latest news.