Advertisement

ರಾಜಕೀಯ ನೆಲೆಗಟ್ಟಿಗಾಗಿ ಡಿಕೆಶಿ ಪಾದಯಾತ್ರೆ: ಗಂಗಾಧರ ಕುಷ್ಟಗಿ

03:03 PM Jan 09, 2022 | Team Udayavani |

ಕುಷ್ಟಗಿ: ತಮಿಳುನಾಡು, ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಕಾವೇರಿ ನದಿ ನೀರು ಕೊಡದಿದ್ದರೆ, ಆಲಮಟ್ಟಿಯಿಂದ ಚೆನ್ನೈಗೆ ಕೃಷ್ಣಾ ನದಿ ನೀರು ಕೊಡುವುದಿಲ್ಲ ಎಂದು ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಬದಲಿಗೆ ಆಲಮಟ್ಟಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರೆ ಸಾರ್ಥಕವಾಗಿರುತ್ತಿತ್ತು ಎಂದು ಹಿರಿಯ ಪತ್ರಕರ್ತ, ಕೃಷ್ಣಾ ಬಿ ಸ್ಕೀಂ ಹೋರಾಟ ಸಮಿತಿ ಸಂಚಾಲಕ ಗಂಗಾಧರ ಕುಷ್ಟಗಿ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಹಳೆಯ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬೆಂಗಳೂರಿಗೆ ಕುಡಿಯಲು ನೀರು ಬೇಕು ಎಂದಾಗ ಸುಪ್ರೀಂಕೋರ್ಟನಲ್ಲಿ ನೀರು ಕೊಡುವುದಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ತಮಿಳುಗರು ಹೇಳುವ ಕಾರಣ ವಿಚಿತ್ರವಾಗಿದ್ದು ಇಡೀಯಾಗಿ ಬೆಂಗಳೂರು ಕಾವೇರಿ ವ್ಯಾಪ್ತಿಯಲ್ಲಿ ಇಲ್ಲ. ಬೆಂಗಳೂರು ವಿಸ್ತಾರವಾಗಿ ಬೆಳೆದಿದ್ದು, ಬೆಳೆದ ಬೆಂಗಳೂರಿಗೆ ನೀರು ಕೊಡುವುದಿಲ್ಲವೆಂದು ಕಾರಣ ನೀಡಿದ್ದನ್ನು ಪ್ರಸ್ತಾಪಿಸಿದರು.

ಕೃಷ್ಣೆಯ 15 ಟಿಎಂಸಿ ನೀರು ಶ್ರೀಶೈಲಂ ಜಲಾಶಯದಿಂದ 406 ಕಿ.ಮೀ. ದೂರ ಕ್ರಮಿಸಿ, ಕಂಡಲೇರುಪುಂಡಿ ಮೂಲಕ ಉತ್ತುಕೊಟ್ಟಾಯದಲ್ಲಿ ಶೇಖರಣೆಗೊಂಡು ಚನೈ ನಗರಕ್ಕೆ ಸೇರುತ್ತದೆ. ಆಲಮಟ್ಟಿ ಜಲಾಶಯದ ಕೃಷ್ಣೆಯ ನದಿ ನೀರು ಆಂಧ್ರದ ಮೂಲಕ ತಮಿಳುನಾಡಿಗೆ ಹರಿಸುವುದು ಬಂದ್ ಮಾಡಿದರೆ ಚನೈ ನೀರಿಲ್ಲದೇ ಬಿಕ್ಕುವ ಹಾಗೂ  ಎಲ್ಲಾ ಕೈಗಾರಿಕೆಗಳ ಉಸಿರು ನಿಲ್ಲುವ ಪರಿಸ್ಥಿತಿ ಇದೆ ಎಂದರು.

ತಮಿಳುನಾಡಿನ ದ್ವಿಮುಖ ನೀತಿ:

ತಮಿಳುನಾಡು ಸಿಎಂ ಸ್ಟಾಲಿನ್, ಚನೈಗೆ ಕೃಷ್ಣೆಯ ನೀರು ಕೊಡಿ ಎಂದು ಬೊಗಸೆಯೊಡ್ಡಿ ನಮ್ಮ ರಾಜ್ಯವನ್ನು ಕೇಳುತ್ತಿದ್ದಾರೆ. ಇತ್ತ ಮೇಕೆದಾಟು ಯೋಜನೆಯಿಂದ ನಮ್ಮ ರಾಜ್ಯದವರು ಬೆಂಗಳೂರಿಗೆ ನೀರು ಕೇಳಿದರೆ ಕೊಡುವುದಿಲ್ಲ ಹೇಳುತ್ತಿರುವುದು ತಮಿಳುನಾಡು ಸಿಎಂ ಸ್ಟಾಲಿನ್ ದ್ವಂದ್ವ ಕಾಂಗ್ರೆಸ್ ಗೆ ಇನ್ನೂ ಅರ್ಥವಾಗಿಲ್ಲ.

Advertisement

ತಮಿಳುನಾಡಿನ ದುರ್ವರ್ತನೆ, ದುಷ್ಟತನ ಅಮಾನವೀಯ ಮುಖಗಳು, ದ್ವಿಮುಖ ನೀತಿ ಕಾಂಗ್ರೆಸ್ ಗೆ ಅಥರ್ೈಸಬೇಕಿದೆ. ತಮಿಳುನಾಡಿನವರು ಇಂದಿಗೂ ಕನರ್ಾಟಕದ ವಿಷಯದಲ್ಲಿ ಅಮಾನುಷವಾಗಿ ನಡೆದುಕೊಳ್ಳುತ್ತಿರುವುದು ಮನವರಿಕೆಯಾಗಬೇಕಿದೆ ಎಂದರು.

ರಾಜಕೀಯ ನೆಲೆಗಟ್ಟಿಗಾಗಿ ಪಾದಯಾತ್ರೆಗೆ ಡಿಕೆಶಿ ಪ್ಲಾನ್? :

ಆ ಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಾಬಲ್ಯ ಮುರಿಯಲು ಡಿ. ಶಿವಕುಮಾರ ಮೇಕೇದಾಟು ಯೋಜನೆಯ ಪಾದಯಾತ್ರೆಯ ಮೂಲಕ ಒಕ್ಕಲಿಗರ ಮತಗಳನ್ನು ಸೆಳೆಯುವ ಪ್ರಯತ್ನ ಇದಾಗಿದೆ ಎಂದರು. ಡಿ.ಕೆ.ಶಿವಕುಮಾರ ಅವರಿಗೆ ಕನಕಪುರ ಬಿಟ್ಟರೆ ಕಾವೇರಿ ಹರಿಯುವ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರಕ್ಕೆ ರಾಜಕೀಯ ನೆಲೆಗಟ್ಟು ಇಲ್ಲ. ಹೀಗಾಗಿ ಮುಂದಿನ ಚುನಾವಣೆ ವೇಳೆ ಒಕ್ಕಲಿಗರ ಒಗ್ಗಟ್ಟು ಗಟ್ಟಿ ಮಾಡಿಕೊಳ್ಳಲು ಈ ಪಾದಯಾತ್ರೆಯ ಹಿನ್ನೆಲೆ ಎಂದರು.

ಸಿದ್ದು ಏನು ಮಾಡಿದರು? :

ಈ ಹಿಂದೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಾಯತ್ರೆಯಿಂದ ಅಧಿಕಾರ ಗಳಿಸಿದರೂ, ಸಿಎಂ ಆಗಿದ್ದರೂ, ಕೃಷ್ಣಾ ಕಣಿವೆ ಯೋಜನೆಗಳನ್ನು ಬೋಗಸ್ ಮಾಡಿದರು. ಯಾವೂದೇ ಏತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲಿಲ್ಲ. ನಂತರ ಅದೇ ಭಾಗದ ಬಾದಾಮಿ ಕ್ಷೇತ್ರದಿಂದ ಸ್ಪಧರ್ಿಸಿ ಶಾಸಕರಾದರೂ ಈ ಪ್ರದೇಶಕ್ಕೆ ಏನೂ ಮಾಡಿದರು ಎಂದು ಗಂಗಾಧರ ಕುಷ್ಟಗಿ ಪ್ರಶ್ನಿಸಿದರು.

ಬಿಇಓ ಕೆಲಸ ಶಾಸಕ ಬಯ್ಯಾಪೂರ ಮಾಡುತ್ತಿದ್ದಾರೆ :

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಈ ಪ್ರದೇಶದ ಅಭಿವೃಧ್ಧಿ, ಕೆಲಸ ಮಾಡದೇ ಶಾಲೆಗೆ ಭೇಟಿ ನೀಡುವುದು ಇತ್ಯಾಧಿ ಬಿಇಓ ಕೆಲಸವನ್ನು ಇವರು ಮಾಡುತ್ತಿದ್ದಾರೆಂದು ಆರೋಪಿಸಿದರು. ಕೊಪ್ಪಳ ಏತ ನೀರಾವರಿ ಯೋಜನೆ ಹರಿಬ್ರಹ್ಮ ಬಂದರೂ ಸಾದ್ಯವಿಲ್ಲ ಎಂದು ಹೇಳಿದವರು ತಮ್ಮ ಮುಖಂಡರನ್ನು ಕರೆಯಿಸಿ ನೀರಾವರಿ ಸಮಸ್ಯೆಯನ್ನು ಪ್ರಸ್ತಾಪಿಸಿ ಮೇಕೇದಾಟು ಮಾದರಿಯಲ್ಲಿ ಆಲಮಟ್ಟಿಯಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗಿತ್ತು. ಈ ಶಾಸಕರಿಗೆ ದೂರದೃಷ್ಟಿ ಇಲ್ಲ ಇವರು ಬ್ಯೂರೋಕ್ರೇಟ್ಸ್ ಅಲ್ಲ ಶಾಸಕಾಂಗ ಪ್ರತಿನಿಧಿಗಳಾಗಿದ್ದು ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳದೇ ತಹಶೀಲ್ದಾರ, ತಲಾಠಿ, ಬಿಇಓ ಕೆಲಸ ಮಾಡುತ್ತಿದ್ದು ತಾಲೂಕಿನಲ್ಲಿ ತಹಶೀಲ್ದಾರ, ಬಿಇಓ ಅಧಿಕಾರಿ ವರ್ಗ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅರ್ಥವಾಗುತ್ತಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next