ಗೋಮತೀ|| ಕಾವೇರೀ ಕಪಿಲಾ ಪ್ರಯಾಗ ಕಿಟಿಜಾ ನೇತ್ರಾವತೀತ್ಯಾದಯಃ| ನದ್ಯಃ ಶ್ರೀಹರಿ ಪಾದಪಂಕಜಭುವಃ ಕುರ್ವಂತುನೋ ಮಂಗ ಲಮ್||’, “ಆದಿತ್ಯಾದಿ ನವಗ್ರಹಾಃ ಶುಭಕರಾ ಮೇಷಾದಯೋ ರಾಶಯೋ|| ನಕ್ಷತ್ರಾಣಿ ಸುಯೋಗ
ಕಾಶ್ಚತಿತಯತದ್ದೇವತಾಸದ್ಗಣಾಃ||… ಸರ್ವೇ ಸ್ಥಾವರಜಂಗಮಾಃ ಪ್ರತಿದಿನಮ್ ಕುರ್ವಂತು ನೋಮಂಗಲಮ್||…. (ಭಗವಂತನ ಸಾನ್ನಿಧ್ಯ ದಿಂದ ಹುಟ್ಟಿದ ಗಂಗೆ, ಸಿಂಧು, ಸರಸ್ವತೀ…. ನೇತ್ರಾವತೀ ಮೊದಲಾದ ನದಿಗಳು ಮತ್ತು ನವಗ್ರಹಗಳು, ರಾಶಿಗಳು, ನಕ್ಷತ್ರಗಳು, ದೇವತೆ ಗಳು ಸ್ಥಾವರಜಂಗಮಗಳಿಗೆ ಪ್ರತಿದಿನವೂ ಮಂಗಲವನ್ನು ಉಂಟು ಮಾಡಲಿ) ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ ಸಂಘಟನೆ ಸಂಯುಕ್ತ ಆಶ್ರಯದಲ್ಲಿ, ಸತತ 9ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ಮೊಗವೀರ ಸಮಾಜದ 22 ಜೋಡಿ ಗಳು ಹಸೆಮಣೆ ಏರಿದ ಸಂದರ್ಭ ಬಹುಹಿಂದಿ ನಿಂದಲೂ ಮನೆಮನೆಗಳಲ್ಲಿ ಮುಂಜಾನೆ ಕೇಳಿ
ಬರುತ್ತಿದ್ದ ಶ್ರೀ ಪಲಿಮಾರು ಮಠದ ಐದನೆಯ ಯತಿ ಶ್ರೀ ರಾಜರಾಜೇಶ್ವರತೀರ್ಥರು ರಚಿಸಿದ ಮಂಗಲಾಷ್ಟಕವನ್ನು ಮತ್ತು ಶ್ರೀ ವಾದಿರಾಜ ಸ್ವಾಮಿಗಳು ರಚಿಸಿದ ಲಕ್ಷ್ಮೀಶೋಭಾನೆ ಹಾಡನ್ನು ಪುರೋಹಿತರು ಹಾಡಿ ಶುಭ ಹರಸಿದರು.
Advertisement
ಸೋಮವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನೆರವೇರಿದ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ, ವಧುವಿಗೆ ಕರಿಮಣಿ, ಸೀರೆ, ರವಿಕೆ, ಕಾಲುಂಗುರ ಮತ್ತು ವರನಿಗೆ ಕುರ್ತಾ, ಪೈಜಾಮ, ಪೇಟ ಉಡುಗೊರೆಯಾಗಿ ನೀಡಲಾಯಿತು. ಕುಟುಂಬದ ಹಿರಿಯರ ಜತೆಯಲ್ಲಿ ನವಜೋಡಿಗಳು ಕಲ್ಯಾಣ ಮಂಟಪಕ್ಕೆ ಆಗಮಿಸಿದಾಗ ಸಾಂಪ್ರದಾಯಿಕ ವಾಗಿ ಸ್ವಾಗತಿಸಲಾಯಿತು. ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕ ಸಗ್ರಿ ವೇದವ್ಯಾಸ ಐತಾಳ್ ನೇತೃತ್ವದಲ್ಲಿ ವೈವಾಹಿಕ ವಿಧಿವಿಧಾನಗಳು ನೆರವೇರಿದವು.