ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ನ್ಯಾಯಾಲಯ ಸಂಕೀರ್ಣದಲ್ಲಿ ಇಂದು ಗುಂಡಿನ ಮೊರೆತ ಕೇಳಿಸಿದೆ. ಕೋರ್ಟ್ ವಠಾರದಲ್ಲೇ ಗ್ಯಾಂಗ್ ಸ್ಟರ್ ಗಳ ನಡುವಿನ ಗುಂಡಿನ ಚಕಮಕಿಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಉತ್ತರ ದೆಹಲಿಯ ರೋಹಿಣಿ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿದೆ. ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ಜಿತೇಂದರ್ ಗೋಗಿ ಮೇಲೆ ದಾಳಿ ಮಾಡಿ ಎದುರಾಳಿ ಗ್ಯಾಂಗ್ ನ ಇಬ್ಬರು ಕೂಡಾ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹೀಗೂ ಉಂಟೆ; ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿಗೆ ವಿಚಿತ್ರ ಶಿಕ್ಷೆ ವಿಧಿಸಿದ ನ್ಯಾಯಾಧೀಶರು
ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ಜಿತೇಂದರ್ ಗೋಗಿ ಪ್ರಕರಣವೊಂದಕ್ಕೆ ಸಂಬಂಧಿಸಿ ತಿಹಾರ್ ಜೈಲುವಾಸದಲ್ಲಿದ್ದ. ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಕೀಲರಂತೆ ಬಟ್ಟೆ ಧರಿಸಿ ನ್ಯಾಯಾಲಯಕ್ಕೆ ಪ್ರವೇಶಿಸಿದ ಎದುರಾಳಿ ತಂಡದವರು ಗುಂಡು ಹಾರಿಸಿದ್ದಾರೆ.
ಎರಡು ವಿರೋಧಿ ತಂಡಗಳು ಕೋರ್ಟ್ ಒಳಗೆ ಜಿತೇಂದರ್ ಗೋಗಿ ವಿರುದ್ಧ ದಾಳಿ ನಡೆಸಿದವು. ಕೂಡಲೇ ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಇಬ್ಬರನ್ನು ಕೊಂದು ಹಾಕಿದ್ದಾರೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಆಸ್ಥಾನ ಹೇಳಿದ್ದಾರೆ.