ಅಮೇಠಿ: ಇಲ್ಲಿನ ಪೊಲೀಸರು ಮೂವರು ತರುಣರನ್ನು ಬಂಧಿಸುವ ಮೂಲಕ ಬೈಕ್ ಕದಿಯುವ ಜಾಲವನ್ನು ಭೇದಿಸಿದ್ದು ಬಂಧಿತರಿಂದ 29 ಕದ್ದ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಕ್ ಕದಿಯುವ ಖದೀಮರ ಜಾಲವನ್ನು ಭೇದಿಸಲು ಇಲ್ಲಿನ ಮೋಹನಗಂಜ್ ಪೊಲೀಸ್ ಠಾಣಾಧಿಕಾರಿ ಡಿ ಕೆ ಸಿಂಗ್ ಮತ್ತು ಎಸ್‌ಐ ರಾಜ್ ಕೇಶರ್ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರೂಪಿಸಲಾಗಿತ್ತು. ಈ ತಂಡದ ತ್ವರಿತ ಕಾರ್ಯಾಚರಣೆಯಲ್ಲಿ ಬೈಕ್ ಕಳ್ಳರ ಗ್ಯಾಂಗನ್ನು ಭೇದಿಸಲಾಯಿತು ಎಂದು ಎಸ್‌ಪಿ ಅನುರಾಗ್ ಆರಿ ತಿಳಿಸಿದರು.
ಬಂಧಿತ ಬೈಕ್ ಕಳ್ಳರನ್ನು ರಮೇಶ್ ಪಸ್ಸಿ, ಕಮರುದ್ದೀನ್ ಮತ್ತು ಸುಭಾಷ್ ಚಂದ್ರ ಎಂದು ಗುರುತಿಸಲಾಗಿದೆ.
ಅಮೇಠಿ ಮತ್ತು ರಾಯ್‌ಬರೇಲಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ತಾವು ಬೈಕ್ ಕದ್ದಿರುವುದನ್ನು ಆರೋಪಿಗಳು ತನಿಖಾಧಿಕಾರಿಗಳಲ್ಲಿ ಒಪ್ಪಿಕೊಂಡಿದ್ದಾರೆ.
ಎಸ್‌ಪಿ ಅವರು ಪೊಲೀಸ್ ತಂಡಕ್ಕೆ 10,000 ರೂ. ನಗದು ಇನಾಮು ಘೋಷಿಸಿದ್ದಾರೆ.