ಗಣೇಶ್‌ಪುರಿ: ಗಣೇಶ್‌ಪುರಿಯಲ್ಲಿ ಭಗವಾನ್ ನಿತ್ಯಾನಂದ ಜೀವಿತ ಕಾಲದಲ್ಲಿ ಸ್ಥಾಪಿಸಲಾಗಿದ್ದ ನವೀಕೃತ ಬಾಲ ಭೋಜನ ಭವನವು ನ. 9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಂಡಿತು.
ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ನಿತ್ಯಾನಂದ ಸ್ವಾಮೀಜಿಗಳ ಪರಮ ಭಕ್ತರು, ಹಿರಿಯರಾದ ದೀಪಾ ಶಿವರಾಮ ಶೆಟ್ಟಿ ದಂಪತಿ ಹಾಗೂ ಟ್ರಸ್ಟಿಗಳಾದ ಶ್ರೀಪಾದ ಜೋಶಿ ದಂಪತಿ ಭಾಗವಹಿಸಿದ್ದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂದಿರದ ಅರ್ಚಕ ವೃಂದದವರಿಂದ ನೆರವೇರಿದವು.
ಶ್ರೀ ಭೀಮೇಶ್ವರ ಸದ್ಗುರು ನಿತ್ಯಾನಂದ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್. ಪಿ. ಶೆಣೈ ದಂಪತಿ, ಟ್ರಸ್ಟಿಗಳಾದ ಶ್ರೀಪಾದ ಜೋಳಿ ದಂಪತಿ, ಶರದ್ ಪವಾರ್, ಮುರಳೀಧರ ಹೆಗ್ಡೆ ದಂಪತಿ, ಪರಶುರಾಮ್ ಸಾವಂತ್, ಯೋಗೇಶ್ ಗಿಲ್ವಡ್ಕರ್, ಸಾಧನಾ ಪಾಟೀಲ್, ಸಂಧ್ಯಾ ಜಾಧವ್ ದಂಪತಿ, ಮಾಜಿ ಟ್ರಸ್ಟಿ ಆನಂದ ಅನ್ವೇಕರ್, ಕುಮಾರ್ ಭಾಟಿಯಾ ಗುಜರಾತ್, ವಲ್ಸಾಡ್‌ನ ಶ್ರೀ ನಿತ್ಯಾನಂದ ಆಶ್ರಮದ ಸ್ವಾಮೀಜಿಗಳಾದ ಮಹಾಮಂಡಲೇಶ್ವರ ನಿತ್ಯಾನಂದ ಸ್ವಾಮೀಜಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮುಂಬಯಿ ಸಂಸ್ಥಾಪಕಾಧ್ಯಕ್ಷ ಮತ್ತು ನಿತ್ಯಾನಂದ ಸ್ವಾಮಿಗಳ ಪರಮ ಭಕ್ತರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಉಪಸ್ಥಿತರಿದ್ದರು.
ಉದ್ಯಮಿಗಳಾದ ಸಿಬಿಡಿ ಭಾಸ್ಕರ ಶೆಟ್ಟಿ ದಂಪತಿ, ಶೇಖರ ಶೆಟ್ಟಿ ದಂಪತಿ, ಪಿ. ಡಿ. ಶೆಟ್ಟಿ, ವಿಶ್ವನಾಥ ಮಾಡ, ಡಾ| ಎನ್. ಕೆ. ಬಿಲ್ಲವ, ಗೋಪಾಲ ಪೂಜಾರಿ, ತೋನ್ಸೆ ನವೀನ್ ಶೆಟ್ಟಿ, ನಿರಂಜನ ಸುವರ್ಣ ದಂಪತಿ, ಗಣೇಶ್ ಶೆಟ್ಟಿ, ಶೇಖರ್ ಶೆಟ್ಟಿ, ಮನೋಜ್ ಹೆಗ್ಡೆ, ಕೃಷ್ಣಮೂರ್ತಿ ಪೂಜಾರಿ, ಜಗದೀಶ್ ಶೆಟ್ಟಿ, ಸುರೇಂದ್ರ ಕಲ್ಯಾಣು³ರ್, ತಾಳಿಪಾಡಿಗುತ್ತು ವಾಸು ಶೆಟ್ಟಿ, ಭಾಸ್ಕರ ಟಿ. ಶೆಟ್ಟಿ, ಪದ್ಮನಾಭ ಕೋಟ್ಯಾನ್, ಹರೀಶ್ ಶೆಟ್ಟಿ, ಜಯರಾಮ ಹೆಗ್ಡೆ, ರಘುರಾಮ ಶೆಟ್ಟಿ, ಅಶೋಕ್ ಕೊಡ್ಯಡ್ಕ, ಪತ್ರಕರ್ತ ರವಿ ಬಿ. ಅಂಚನ್ ಪಡುಬಿದ್ರೆ ಹಾಗೂ ಮುಂಬಯಿ, ನವಿಮುಂಬಯಿ ಇನ್ನಿತರ ಉಪನಗರಗಳಿಂದ ಸಾವಿರಾರು ತುಳು-ಕನ್ನಡಿಗ ಭಕ್ತಾದಿಗಳು ಪಾಲ್ಗೊಂಡರು.