Advertisement
ಕಳೆದ 2ವರ್ಷಗಳಿಂದ ಮಹಾಮಾರಿ ಕೋವಿಡ್ ಕಾರಣದಿಂದ ಗಣೇಶಮೂರ್ತಿ ತಯಾರಿಸುವ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದುಕು ಸಾಗಿಸುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ:ಮಂಗಳೂರಿನ ಹಿರಿಯ ಟ್ರಾಫಿಕ್ ವಾರ್ಡನ್ ಜೋಸೆಫ್ ಗೊನ್ಸಾಲ್ವಿಸ್ ನಿಧನ
ನೆರವು ನೀಡಿಲ್ಲ:ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಸರ್ಕಾರ ಗಣೇಶ ಮೂರ್ತಿ ತಯಾರಿಕಾ ಕಲಾವಿದರಿಗೆ ಯಾವುದೇ ನೆರವು ನೀಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ, ಹೊರಾಂಗಣದಲ್ಲಿ ದೊಡ್ಡ ವೇದಿಕೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡದಂತೆ ಆದೇಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಗಣೇಶಮೂರ್ತಿ ತಯಾರಕರು ತಮ್ಮ ಅಳಲನ್ನು ತೋಡಿಕೊಂಡರು. ಗಣೇಶಮೂರ್ತಿಗಳನ್ನು ನಿರ್ಮಾಣಮಾಡಲು ಬೇಕಾಗುವ ಕಚ್ಚಾಸಾಮಗ್ರಿ ಕೊರತೆ ಎದುರಾಗಿದ್ದು ಕಳೆದ ಬಾರಿ ಗಣೇಶಮೂರ್ತಿಗಳ ಮಾರಾಟದಲ್ಲಿ ಹೆಚ್ಚು ಸಮಸ್ಯೆ ಅನುಭವಿಸಿದ ತಯಾರಕರು ಹಾಗೂ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಬುಕ್ಕಿಂಗ್ ಇಲ್ಲ, ಬೇಡಿಕೆಯೇ ಇಲ್ಲ: ಜುಲೈ, ಆಗಸ್ಟ್ ಪ್ರಾರಂಭದಿಂದಲೇ ವಿವಿಧ ರೀತಿಯ ಗಣಪತಿ ಮೂರ್ತಿಗಳನ್ನು ತಯಾರಿಸಲು ಬೇಡಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ತಯಾರಿಕರಿಗೆ ಬಿಡುವೇ ಇಲ್ಲದಂತಾಗುತ್ತಿತ್ತು. ಕೋವಿಡ್ ಜನರ ಬದುಕನ್ನು ಕಸಿದುಕೊಳ್ಳುವುದರ ಜೊತೆಗೆ ಗಣಪತಿ ಮೂರ್ತಿಗಳ ನಿರ್ಮಾಣಕ್ಕೆ ಬಹಳಷ್ಟು ವಿಘ್ನ ತಡೆ ಒಡ್ಡಿದೆ. ಗಣೇಶ ಹಬ್ಬದ ದಿನವೂ ಗಣಪತಿ ಮೂರ್ತಿ ತಯಾರಿಕೆಗೆ ಬೇಡಿಕೆ ಬರುತ್ತಿತ್ತು. ಈ
ಬಾರಿಯೂ ವಿಘ್ನ ವಿನಾಯಕ ನಿವಾರಕನನ್ನು ತಯಾರಿಸುವವರಿಗೂ ಕೋವಿಡ್ ವಿಘ್ನವಾಗಿದೆ. ಆಗಸ್ಟ್ ತಿಂಗಳು ಮುಗಿಯುತ್ತಾ ಹೋದರೂ ಸಹ
ಗಣಪತಿ ಮೂರ್ತಿಗಳನ್ನುಕೇಳುವರೇ ಇಲ್ಲದಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8ರಷ್ಟು ಬೇಡಿಕೆ ಬುಕಿಂಗ್ ನಡೆದಿಲ್ಲ. ಕೋವಿಡ್ ಪರಿಹಾರ ನೀಡಿ: ಚಲನಚಿತ್ರ, ನಾಟ್ಯ, ಸಂಗೀತ ಕಲಾವಿದರು ಸೇರಿ ಇತರೆ ರಂಗ ಕಲಾವಿದರುಗಳಿಗೆ ಮಾತ್ರ ಸರ್ಕಾರ ಕೋವಿಡ್
ಪ್ಯಾಕೇಜ್ ನೀಡುತ್ತಿದೆ. ಆದರೆ ಕಲಾವಿದರ ಪಟ್ಟಿಯಲ್ಲಿ ಚಿತ್ರ, ಗಣಪತಿ ಮೂರ್ತಿ ತಯಾರಕ ಕಲಾವಿದರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ನಾವು ಕೂಡ ಕಲಾವಿದರೇ ನಮ್ಮನ್ನು ಪರಿಗಣನೆಗೆ ತೆಗೆದುಕೊಂಡು ಸರ್ಕಾರದಿಂದ ನಮಗೆ ಆಗಿರುವ ನಷ್ಟ ಪರಿಹಾರವನ್ನು ನೀಡಬೇಕು. ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಬೇಕುಎಂದು ಗಣಪತಿಮೂರ್ತಿ ತಯಾರಕರು ಆಗ್ರಹಿಸಿದ್ದಾರೆ ಹೊಟ್ಟೆ ಪಾಡಿಗೆ ಏನು
ಮಾಡೋದು..?
ವರ್ಷಕೊಮ್ಮೆ ಬರುವ ಗಣೇಶನ ಹಬ್ಬದಲ್ಲಿ ಹರ್ಷ ದಿಂದ ವರ್ಷದ ಜೀವನ ಕಟ್ಟಿಕೊಳ್ಳುತ್ತಿದ್ದ ನಮಗೆ ಕೋವಿಡ್ ಕೆಂಗಣ್ಣಿನಿಂದ ತಿಂಗಳ ಜೀವನ ದೂಡುವುದು ಕಷ್ಟವಾಗಿದೆ.ಕಳೆದ ಮತ್ತು ಈ ಬಾರಿಯ ಹಬ್ಬ ಗಣೇಶಮೂರ್ತಿ ತಯಾರಿಕಾ ಕಲಾವಿದರ ಹೊಟ್ಟೆ ಪಾಡಿನ ಬದುಕಿಗೆ ತಣ್ಣೀರ ಬಟ್ಟೆ ಹಾಕಿದಂತೆ ಆಗಿದೆ ಎಂದು ಅಳಲು ತೋಡಿಕೊಂಡರು. ಸುಮಾರು 51ವರ್ಷಗಳಿಂದ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ. ಪ್ರತಿವರ್ಷ ಹಬ್ಬಕ್ಕೆ ಎರಡು, ಮೂರು ತಿಂಗಳ ಮುಂಚಿತವಾಗಿ ಗೌರಿ-ಗಣೇಶ ಮೂರ್ತಿಗೆ ಭಕ್ತರು ಮುಂಗಡ ನೀಡುತ್ತಿದ್ದರು. ಆದರೆ ಈ ಬಾರಿ ಒಂದೇ ಒಂದು ಬೇಡಿಕೆ ಬಂದಿಲ್ಲ.
– ಲಕ್ಷ್ಮಮ್ಮ,
ಗಣೇಶ ಮೂರ್ತಿ ತಯಾರಕರು. ಕಳೆದ 31ವರ್ಷಗಳಿಂದ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಮಣ್ಣಿನ ಗಣಪತಿ ಮೂರ್ತಿಗಳನ್ನು ಹೆಚ್ಚು ಮಾಡಲಾಗುತ್ತಿದೆ. ವಂಶಪಾರಂಪರೆಯಾಗಿರುವ ಕುಲಕಸುಬನ್ನು ಬಿಡಬಾರದೆಂಬ ಉದ್ದೇಶದಿಂದ ಗಣಪತಿ ಮೂರ್ತಿ ತಯಾರಿಸುತ್ತಿದ್ದೇವೆ. ಸಾರ್ವಜನಿಕವಾಗಿ ಗಣೇಶ ಮೂರ್ತಿಗೆ ಹೆಚ್ಚಿನವರು ಆಸಕ್ತಿ ತೋರುತ್ತಿಲ್ಲ. ಗೌರಿಗಣೇಶ ಹಬ್ಬವೆಂದರೆ ಗ್ರಾಮದಿಂದ ಹಿಡಿದು ಪಟ್ಟಣ, ನಗರ ಪ್ರದೇಶಗಳಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿತ್ತು.
● ರಾಮಪ್ಪ, ಗಣಪತಿ ಮೂರ್ತಿ ತಯಾರಕ. -ಎಸ್.ಮಹೇಶ್.