Advertisement

ಸರ್ಕಾರದ ಆದೇಶಕ್ಕೆ ಗಣೇಶ ಮಹಾಮಂಡಳಗಳ ಆಕ್ಷೇಪ

01:37 PM Sep 06, 2021 | Team Udayavani |

ಹುಬ್ಬಳ್ಳಿ: ಸಾರ್ವಜನಿಕ ಗಣೇಶೋತ್ಸವ  ಆಚರಣೆ ಕುರಿತು ರಾಜ್ಯ ಸರಕಾರ ಹೊರಡಿಸಿರುವ ಆದೇಶಕೊಟ್ಟು ಕಸಿದುಕೊಂಡಂತಾಗಿದೆ. ಚುನಾವಣೆ,ಜನ ಯಾತ್ರೆ, ಇತರೆ ಅದ್ಧೂರಿ ಸಮಾರಂಭಗಳಿಗೆಇಲ್ಲದ ಕೊರೊನಾ ನಿಯಮಗಳು ಗಣೇಶೋತ್ಸವಕ್ಕೆಮಾತ್ರ ಅನ್ವಯಿಸುತ್ತದೆಯೇ? ಎಂದು ಗಣೇಶ ಮಹಾಮಂಡಳಿಗಳು, ಹಿಂದೂಪರ ಸಂಘಟನೆಗಳುಸರಕಾರದ ವಿರುದ್ಧ ಕಿಡಿಕಾರಿವೆ.

Advertisement

ವಾಡಿಕೆಯಂತೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಎಲ್ಲೆಡೆ 11 ದಿನ ಸಾರ್ವಜನಿಕ ಗಣೇಶೋತ್ಸವ ಆಚರಣೆ ಜಾರಿಯಲ್ಲಿದೆ. ಆದರೆ ರಾಜ್ಯ ಸರಕಾರ ಐದು ದಿನಗಳಿಗೆ ಸೀಮಿತಗೊಳಿಸಿನೀಡಿರುವ ಅನುಮತಿ ಗಣೇಶ ಮಂಡಳಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಸರಕಾರ ಇಂತಹ ಆದೇಶ ಹೊರಡಿಸಿ, ಒಂದು ಕಡೆ ಅವಕಾಶ ಕೊಟ್ಟಂತೆ ಮಾಡಿ, ಉತ್ಸವದ ಕಳೆ ಕಸಿದುಕೊಂಡಂತಾಗಿದೆ. ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಿದೆಎನ್ನುವ ಆಕ್ರೋಶ ಹಿಂದೂಪರ ಸಂಘಟನೆಗಳಿಂದ ವ್ಯಕ್ತವಾಗುತ್ತಿದೆ.

ಭರ್ಜರಿ ಚುನಾವಣೆ, ರಾಜಕೀಯ ಮುಖಂಡರಮಕ್ಕಳ ವಿಜೃಂಭಣೆಯ ಮದುವೆ, ಸಚಿವರಜನಯಾತ್ರೆ ಕಾರ್ಯಕ್ರಮಗಳು, ನೂತನ ಸಚಿವ ಅದ್ಧೂರಿ ಸ್ವಾಗತದಂತಹ ಸಮಾರಂಭಗಳಿಗೆ ಸರಕಾರದ ಕೊರೊನಾ ನಿಯಮ ಅಡ್ಡಿಯಾಗಲಿಲ್ಲ. ಆದರೆ ಹಬ್ಬದ ಆಚರಣೆಗೆ ಮಾತ್ರ ಎಲ್ಲ ನಿಯಮಗಳನ್ನುಜಾರಿ ಮಾಡುವ ಮೂಲಕ ಹಿಂದೂ ಸಂಸ್ಕೃತಿ ಮೇಲೆಗದಾಪ್ರಹಾರ ಮಾಡಲು ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಾಲಗಂಗಾಧರ ತಿಲಕ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನುಮಹಾನಗರದಲ್ಲಿ ಮಾಡಲಾಗುತ್ತಿದೆ. ಆದರೆಕೋವಿಡ್‌ ಹಿನ್ನೆಲೆಯಲ್ಲಿ ಸರಕಾರಗಳು ಕಳೆದಎರಡು ವರ್ಷಗಳಿಂದ ಕಠಿಣ ನಿಯಮ ಹೇರಿಕೆಮಾಡುತ್ತಿವೆ.

Advertisement

ನಗರದಲ್ಲಿರುವ ಬಹುತೇಕಮಂಡಳದವರು ಕಳೆದ ವರ್ಷದಂತೆ ಈ ವರ್ಷವೂ5, 7, 9, 11 ದಿನಗಳ ಕಾಲ ಕೋವಿಡ್‌ ಸುರಕ್ಷತಾಕ್ರಮಗಳೊಂದಿಗೆ ಸಾಂಪ್ರದಾಯಿಕವಾಗಿ ಗಣೇಶಪ್ರತಿಷ್ಠಾಪನೆಗೆ ಚಿಂತನೆ ನಡೆಸಿದ್ದರು. ಆದರೆ ಇದೀಗಸರಕಾರದ ಕೊಟ್ಟು ಕಸಿದುಕೊಳ್ಳುವ ಆದೇಶದವಿರುದ್ಧ ಆಕ್ರೋಶ ತೋರಿದ್ದು, ಸರಕಾರ ಹೇಳಿದಂತೆಸಂಪ್ರದಾಯ, ಸಂಸ್ಕೃತಿ ಬದಲಿಸಲು ಸಾಧ್ಯವಿಲ್ಲಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next