Advertisement

ಗಣೇಶನಗರ: ವಾಲಿಬಾಲ್‌ ಪಂದ್ಯಾಟ

10:29 PM Mar 19, 2021 | Team Udayavani |

ವಿಟ್ಲ: ನೇರಳಕಟ್ಟೆ ಗಣೇಶನಗರ ದಿ| ರಾಕೇಶ್‌ ನಾಯ್ಕ ಗೆಳೆಯರ ಬಳಗದ ವತಿಯಿಂದ ರಾಕೇಶ್‌ ಟ್ರೋಫಿ-2021 ಹತ್ತು ತಂಡಗಳ ಲೀಗ್‌ ಮಾದರಿಯ ವಾಲಿಬಾಲ್‌ ಪಂದ್ಯಾಟ ಉರ್ದಿಲ ಇಂದುಹಾಸ ರೈ ಕ್ರೀಡಾಂಗಣದಲ್ಲಿ ನಡೆಯಿತು.

Advertisement

ಪಂದ್ಯಾಟವನ್ನು ಡಿ.ಕೆ.ಸ್ವಾಮಿ ನೇರಳಕಟ್ಟೆ ಅವರು ಉದ್ಘಾಟಿಸಿದರು. ಬಂಟ್ವಾಳ ಉಪತಹಶೀಲ್ದಾರ್‌ ರಾಜೇಶ್‌ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಬಕಾರಿ ನಿರೀಕ್ಷಕ ಶೈಕ್‌ ಇಮ್ರಾನ್‌, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಬೇಬಿ ನಾಯ್ಕ, ಅಧ್ಯಾಪಕ ರಾಮಚಂದ್ರ, ಚಿತ್ರನಟ ಚೇತನ್‌ ರೈ, ರೈಲ್ವೇ ನಿರೀಕ್ಷಕ ವಿಠಲ್‌ ನಾಯ್ಕ, ಸಿಎ ಬ್ಯಾಂಕ್‌ ನಿರ್ದೇಶಕ ನಿರಂಜನ್‌ ರೈ, ಗ್ರಾ.ಪಂ.ಉಪಾಧ್ಯಕ್ಷೆ ಶಕೀಲ ಕೃಷ್ಣಪ್ಪ ಪೂಜಾರಿ, ಸದಸ್ಯರಾದ ಅಶೋಕ್‌ ರೈ ಎಲ್ಕಾಜೆ, ಧನಂಜಯ ಗೌಡ, ಅಬ್ದುಲ್‌ ಲತೀಫ್‌, ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ವಸಂತ ಗೌಡ, ನವಯುಗ ಜನಸ್ನೇಹಿ ಬಳಗದ ಅಧ್ಯಕ್ಷ ಸುಜೀತ್‌, ವಿಷ್ಣುಮೂರ್ತಿ ಗೆಳೆಯರ ಬಳಗದ ಅಧ್ಯಕ್ಷ ಸುನೀಲ್‌, ಕುಸುಮಾಕರ ಗೌಡ ಎಳಾRಜೆ, ಸಿಎ ಬ್ಯಾಂಕ್‌ ಉಪಾಧ್ಯಕ್ಷ ತನಿಯಪ್ಪ ಗೌಡ, ಸಂಜೀವ ಶೆಟ್ಟಿ ಕಲ್ಪಾಡಿಗದ್ದೆ, ಗ್ರಾಮಾಭಿವೃದ್ಧಿ ಯೋಜನೆಯ ಅಶೋಕ್‌, ರಾಕೇಶ್‌ ಗೆಳೆಯರ ಬಳಗದ ಅಧ್ಯಕ್ಷ ವಿಷುಕುಮಾರ್‌ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಉದಯ ಫ್ರೆಂಡ್ಸ್‌ ಶೇರಾ ಪ್ರಥಮ, ಸತ್ಯಶ್ರೀ ಅಡ್ಲಬೆಟ್ಟು ದ್ವಿತೀಯ, ತತ್ವಮಸಿ ಗಣೇಶನಗರ ತೃತೀಯ, ನೇತಾಜಿ ಗೆಳೆಯರ ಬಳಗ ಚತುರ್ಥ ಬಹುಮಾನ ಪಡೆಯಿತು. ಶೃತೇಶ್‌ ಅಡ್ಲಬೆಟ್ಟು, ನಿಶಾಂತ್‌ ಶೇರಾ ಹಾಗೂ ರಾಮ ಶೇರಾ ಅವರು ವೈಯಕ್ತಿಕ ಬಹುಮಾನ ಪಡೆದರು. ಉಪೇಂದ್ರ ಆಚಾರ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next