Advertisement
ಫೈನಲ್‌ನಲ್ಲಿ ಚಿಪಾಕ್ ಸೂಪರ್ ಗಿಲ್ಲೀಸ್ ತಂಡದ 127ರಷ್ಟು ಸಣ್ಣ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಪೆರಿಯಸಾಮಿ ಅವರ ಘಾತಕ ದಾಳಿ ಮಹತ್ವದ ಪಾತ್ರ ವಹಿಸಿತ್ತು. ಮೊದಲ ಓವರ್‌ನಲ್ಲೇ 2 ವಿಕೆಟ್ ಕಿತ್ತ ಅವರು, ಕೊನೆಯ ಓವರಿನಲ್ಲಿ 3 ವಿಕೆಟ್ ಉಡಾಯಿಸಿದರು. ಒಟ್ಟು ಸಾಧನೆ 15ಕ್ಕೆ 5 ವಿಕೆಟ್.
ಕೂಟದಲ್ಲಿ ಆಡಿದ 9 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ ಗಣೇಶನ್ ಪೆರಿಯಸಾಮಿ ಸಾಧನೆ ಟಿಎನ್‌ಪಿಎಲ್ ಇತಿಹಾಸದಲ್ಲೊಂದು ದಾಖಲೆ. ಶ್ರೀಲಂಕಾದ ಲಸಿತ ಮಾಲಿಂಗ ಶೈಲಿಯಲ್ಲೇ ಬೌಲಿಂಗ್ ನಡೆಸುವುದು ಇವರ ಹೆಚ್ಚುಗಾರಿಕೆ. ಹೀಗಾಗಿ ಮುಂದಿನ ಐಪಿಎಲ್ ಹರಾಜಿನ ವೇಳೆ ಗಣೇಶನ್ ಪೆರಿಯಸಾಮಿ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಂಚೂಣಿಯಲ್ಲಿವೆ.