Advertisement

ಬರದಿಂದ ಕಂಗೆಟ್ಟು ಗಣೇಶನನ್ನೇ ಹೂತು ಬಿಟ್ಟ!

03:44 PM Sep 12, 2017 | |

ಚಿಕ್ಕೋಡಿ: ಬರ ಎಷ್ಟರ ಮಟ್ಟಿಗೆ ಜನರನ್ನು ಕಂಗಾಲಾಗಿಸಿದೆ ಎನ್ನುವದಕ್ಕೆ ಈ ಘಟನೆ ಜ್ವಲಂತ 
ಸಾಕ್ಷಿ. ಜನರು ಜನಪ್ರತಿನಿಧಿಗಳ ಮೇಲೆ ಮಾತ್ರವಲ್ಲ ದೇವರ ಮೇಲೂ ಆಕ್ರೋಶಗೊಂಡಿರುವುದಕ್ಕೆ ಸಾಕ್ಷಿಯಾಗಿ ಪೂಜೆ ಮಾಡಲಾಗಿದ್ದ ಗಣೇಶನ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಜಲಸ್ತಂಭನ ಮಾಡುವ ಬದಲು ಹೊಂಡ ತೆಗೆದು ಹೂತ ಘಟನೆ ನಡೆದಿದೆ. 

Advertisement

ರಾಯಭಾಗ ತಾಲೂಕಿನ ನಸಲಾಪುರದಲ್ಲಿ ಈ ಘಟನೆ ನಡೆದಿದ್ದು ಶಿವಗೌಡ ಪಾಟೀಲ್‌ ಎಂಬ ರೈತ ಗಣೇಶನನ್ನು ಪೂಜಿಸಿ ಮಳೆಗಾಗಿ ಪ್ರಾರ್ಥಿಸಿದ್ದ. ಮಳೆ ಬರದೆ ಇದ್ದುದರಿಂದ ಕಂಗಾಲಾಗಿ ಹೊಲದಲ್ಲಿ ಹೊಂಡ ತೆಗೆದು ಗಣೇಶನನ್ನು ಹೂತು ಹಾಕಿದ್ದಾನೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಗೌಡ ಕಳೆದ 10 ವರ್ಷಗಳಿಂದ ಮಳೆ ಇಲ್ಲ. ಬಾವಿಗಳಲ್ಲಿ ನೀರಿಲ್ಲ.ಹೀಗಾಗಿ ಜನರು ಬಾವಿಗೆ ಹಾಕುವುದು ಬೇಡ ಅಂದರು. ದೇವರಿಗೂ ಗೊತ್ತಾಗಲಿ ಎಂದು ಬೆಳೆ ಹಾಳಾದ ಹೊಲದಲ್ಲಿ ಹೂತು ಹಾಕಿದ್ದೇವೆ ಎಂದು ಹತಾಶರಾಗಿ ನುಡಿದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next