ಬ್ರಹ್ಮಾವರ: ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿದಿಯಲ್ಲಿ 35ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಣೆ ಮಾಡಲಾಗುತ್ತಿದ್ದು ಅದರಂತೆ ಮೂರೂ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಅದರಂತೆ ಶನಿವಾರ(ಸೆ.07) ಪೂರ್ವಾಹ್ನ ಶುಭ ಮುಹೂರ್ತದಲ್ಲಿ ಶ್ರೀ ಗಣೇಶ ವಿಗ್ರಹ ಪ್ರತಿಷ್ಠಾಪನೆ, 12 ಕಾಯಿ ಗಣಹೋಮ ನೆರವೇರಲಿದ್ದು ಇದಾದ ಬಳಿಕ ಮಧ್ಯಾಹ್ನ ಮಹಾಪೂಜೆಯಾದ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಮುದ್ದುಕೃಷ್ಣ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಂಜೆ 7 ಗಂಟೆಗೆ ಯಕ್ಷ ಸಮೂಹ, ಯಕ್ಷಗಾನ ಪ್ರತಿಷ್ಠಾನ ಕೆಳ ಕುಂಜಾಲು ನೀಲಾವರ ಇವರಿಂದ ಪೌರಾಣಿಕ ಯಕ್ಷಗಾನ ನಡೆಯಲಿದ್ದು ಇದಾದ ಬಳಿಕ 9 ಗಂಟೆಗೆ ರಂಗಪೂಜೆ ನಡೆಯಲಿದ್ದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಆದಿತ್ಯವಾರ (ಸೆ. 08) ರಂದು ಬೆಳಿಗ್ಗೆ 12 ಕಾಯಿ ಗಣಹೋಮ, ವಿಶೇಷ ಅಪ್ಪ ಸೇವೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸ್ವಸ್ತಿ ಶ್ರೀ ಭಜನಾ ತಂಡ, ಕುಂದಾಪುರ ಇವರಿಂದ ಭಕ್ತಿಗೀತೆ, ಗಂಟೆ 1 ರಿಂದ ಮಹಾ ಅನ್ನಸಂತರ್ಪಣೆ. ಮಧ್ಯಾಹ್ನ 3.30 ರಿಂದ 06.30 ರ ತನಕ ಶ್ರೀರಾಮ ಭಜನಾ ವಿಶ್ವಸ್ಥ ಮಂಡಳಿ, ಬಾಳೆಕುದ್ರು ಹಂಗಾರಕಟ್ಟೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಬಳಿಕ ಸಂಜೆ 06.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. 7 ಗಂಟೆಗೆ ನೃತ್ಯ ನಿಕೇತನ ಕೊಡವೂರು- ಆರೂರು ವಿಭಾಗದ ಮಕ್ಕಳಿಂದ ಭರತನಾಟ್ಯ ಕ್ರಿಯೇಟಿವ್ ಡ್ಯಾನ್ಸ್ ಕ್ರೀವ್ ಇವರಿಂದ ನೃತ್ಯ ವೈಭವ, ಸ್ಥಳೀಯರಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ ಇದಾದ ಬಳಿಕ ರಾತ್ರಿ 9 ಕ್ಕೆ ರಾತ್ರಿ ರಂಗ ಪೂಜೆ ನಡೆಯಲಿದ್ದು ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಸೋಮವಾರ (ಸೆ.09) ರ ಬೆಳಗ್ಗೆ 12 ಕಾಯಿ ಗಣಹೋಮ, ಮೂಡುಗಣಪತಿ, ಮುಡಿ ಅಕ್ಕಿ ಕಡಬು ಸೇವೆ ನಡೆಯಲಿದೆ, ಅಲ್ಲದೆ ಯುವ ಆರೂರು ವತಿಯಿಂದ ಪ್ರಥಮ ವರ್ಷದ ಲೋಬಾನ ಸೇವೆ ಹಾಗೂ ಹುಲಿವೇಷ ನಡೆಯಲಿದೆ. ಬಳಿಕ 12.30 ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಮಧ್ಯಾಹ್ನ: 3 ರಿಂದ ಸಾರ್ವಜನಿಕ ಮೆರವಣಿಗೆಯೊಂದಿಗೆ ಗಣೇಶ ವಿಗ್ರಹವನ್ನು ನದಿಯಲ್ಲಿ ಜಲಸ್ಥಂಭನಗೊಳಿಸಲಾಗುವುದು ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾಹಿತಿ ನೀಡಿದೆ.
ಇದನ್ನೂ ಓದಿ: Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 15ನೇ ರೀಲ್ಸ್ ಪ್ರಸಾರ