Advertisement

ಗಣೇಶನಿಗೆ ಗಣೇಶ್‌ ಧ್ವನಿ

11:03 AM May 14, 2018 | |

ಶರಣ್‌ ನಾಯಕರಾಗಿರುವ “ರ್‍ಯಾಂಬೋ-2′ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಅನಿಲ್‌ ಕುಮಾರ್‌ ಈ ಸಿನಿಮಾದ ನಿರ್ದೇಶಕರು. ಈಗ ಈ ಚಿತ್ರದ ಸನ್ನಿವೇಶವೊಂದಕ್ಕೆ ನಟ ಗಣೇಶ್‌ ಧ್ವನಿ ನೀಡಿದ್ದಾರೆ. ವಿಶೇಷವೆಂದರೆ ಗಣೇಶ್‌ ಧ್ವನಿ ಕೊಟ್ಟಿರೋದು ಗಣೇಶನಿಗೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು.

Advertisement

ಚಿತ್ರದ ಕಥೆಯಲ್ಲಿ ವಿಘ್ನ ವಿನಾಶಕ ಗಣೇಶ ಸನ್ನಿವೇಶವೊಂದು ಬರುತ್ತದೆಯಂತೆ. ಈ ದೃಶ್ಯಗಳನ್ನು ಅನಿಮೇಶನ್‌ ಮೂಲಕ ಚಿತ್ರತಂಡ ಸೃಷ್ಟಿಸಿದೆ. ಇದು ಮಕ್ಕಳಿಗೆ ಹೆಚ್ಚು ಖುಷಿಕೊಡಬಹುದು ಎಂಬುದು ಚಿತ್ರತಂಡದ ನಂಬಿಕೆ. ಚಿತ್ರದಲ್ಲಿ ಬರುವ ಗಣೇಶನಿಗೆ ಯಾರಿಂದ ಧ್ವನಿ ಕೊಡಿಸೋದು ಎಂದು ಚಿತ್ರತಂಡ ಯೋಚಿಸುತ್ತಿದ್ದಾಗ ಅವರ ಕಣ್ಣ ಮುಂದೆ ಬಂದಿದ್ದು ನಟ ಗಣೇಶ್‌ ಮುಖ.

ಅದರಂತೆ ಗಣೇಶ್‌ ಕೂಡಾ ಗಣೇಶನಿಗೆ ಧ್ವನಿ ನೀಡಿದ್ದಾರೆ. ಎಲ್ಲಾ ಓಕೆ, ಗಣೇಶನ ಜೊತೆಗಿರುವ ಮೂಷಿಕನಿಗೆ ಯಾರು ಧ್ವನಿ ನೀಡಿದ್ದಾರೆಂದು ನೀವು ಕೇಳಬಹುದು. ಚಿತ್ರದಲ್ಲಿ ಬರುವ ಇಲಿಗೆ ಕಾಮಿಡಿ ಕಿಲಾಡಿಗಳ ಮೂಲಕ ಬೆಳಕಿಗೆ ಬಂದ ಶಿವರಾಜ್‌ ಕೆ.ಆರ್‌.ಪೇಟೆ ಧ್ವನಿ ನೀಡಿದ್ದಾರೆ. ಅಂದಹಾಗೆ, “ರ್‍ಯಾಂಬೋ-2′ ಚಿತ್ರವನ್ನು ತಂತ್ರಜ್ಞರೆಲ್ಲಾ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆಶಿಕಾ ನಾಯಕಿ. 

Advertisement

Udayavani is now on Telegram. Click here to join our channel and stay updated with the latest news.

Next