Advertisement

ಗಣೇಶ್‌ ಹೂಡಿದ್ದ ಕೇಸಿನ ವಿಚಾರಣೆ ಮುಂದೂಡಿಕೆ

12:28 PM Feb 28, 2017 | Team Udayavani |

ಬೆಂಗಳೂರು: ಅನುಮತಿ ಇಲ್ಲದೆ ಭಾವಚಿತ್ರ ಬಳಕೆ ಮಾಡಿಕೊಂಡ ಆರೋಪದ ಮೇಲೆ ಮೋಕ್ಷ ಅಗರಬತ್ತಿ ಕಂಪನಿ ವಿರುದ್ಧ ನಟ ಗಣೇಶ್‌ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸಿಟಿ ಸಿವಿಲ್‌ ನ್ಯಾಯಾಲಯ ಮಾರ್ಚ್‌.6ಕ್ಕೆ ಮುಂದೂಡಿದೆ. 

Advertisement

ನಟ ಗಣೇಶ್‌ ಮತ್ತು ಮೋಕ್ಷ ಅಗರಬತ್ತಿ ನಡುವಿನ ಕಾನೂನು ಸಮರದಲ್ಲಿ ನಿರ್ದೇಶಕ ಎಸ್‌.ನಾರಾಯಣ್‌ ಅವರನ್ನು ಸಹ ನ್ಯಾಯಾಲಯ ಪ್ರತಿವಾದಿಯನ್ನಾಗಿ ಮಾಡಿ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ, ನಾರಾಯಣ್‌ ಅವರು ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರು. ಹೀಗಾಗಿ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯವು ಮಾ.6ಕ್ಕೆ ಮುಂದೂಡಿದೆ. 

ಮೋಕ್ಷ ಅಗರಬತ್ತಿ ಕಂಪನಿಯು ಅನುಮತಿ ಇಲ್ಲದೆ ತಮ್ಮ ಭಾವಚಿತ್ರ ಬಳಕೆ ಮಾಡಿಕೊಂಡಿದೆ. ಇದನ್ನು ಸ್ಥಗಿತಗೊಳಿಸಬೇಕು ಎಂದು ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 75 ಲಕ್ಷ ರೂ. ಪರಿಹಾರ ನೀಡುವಂತೆ ನಟ ಗಣೇಶ್‌ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. 

ಆದರೆ, ಅಗರಬತ್ತಿ ಕಂಪನಿಯ ಮಾಲೀಕರು, ನಿರ್ದೇಶಕ ಎಸ್‌.ನಾರಾಯಣ್‌ ಅನುಮತಿ ನೀಡಿದ್ದು, ಒಪ್ಪಿಗೆ ಮಾಡಿಕೊಳ್ಳಲಾಗಿತ್ತು. ಆದ ಕಾರಣ ಅವರ ಹೇಳಿಕೆಯನ್ನು ದಾಖಲಿಸಬೇಕು ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರದ ಮೇಲೆ ನ್ಯಾಯಾಲಯವು ನಾರಾಯಣ್‌ ಅವರನ್ನು ಪ್ರತಿವಾದಿ ಮಾಡಿ ಸಮನ್ಸ್‌ ಜಾರಿ ಮಾಡಿತ್ತು. ಇದರಿಂದ ಬೇಸರಗೊಂಡ ನಾರಾಯಣ್‌ ಅವರು ಗಣೇಶ್‌ಗೆ ಮಾನನಷ್ಟ ಮೊಕದ್ದಮೆ ನೊಟೀಸ್‌ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next